ಬಕ್ರೀದ್‌: ಬರೋಬ್ಬರಿ 1.25 ಲಕ್ಷ ರೂ.ಗೆ ಬಂಡೂರು ತಳಿಯ 2 ಟಗರುಗಳು ಮಾರಾಟ!

ಮಂಡ್ಯ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಟಗರು, ಕುರಿಗಳ ವ್ಯಾಪಾರ ಜೋರಾಗಿದೆ. ವಿಶೇಷ ಎಂಬಂತೆ ಮಂಡ್ಯದಲ್ಲಿ ಎರಡು ಬಂಡೂರು ತಳಿಯ ಬರೋಬ್ಬರಿ ಟಗರು 1.25 ಲಕ್ಷ ರೂ.ಗೆ ಮಾರಾಟವಾಗಿದೆ.

ಸೂನಗನಹಳ್ಳಿಯಲ್ಲಿ ಟಗರುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದು, ಇಲ್ಲಿ ದೊಡ್ಡ ಮೊತ್ತಕ್ಕೆ ಟಗರು ಸೇಲ್ ಆಗಿದೆ.

ರೈತ ಶಂಭು ಎನ್ನುವವರು ಸುಮಾರು ಒಂದು ವರ್ಷಗಳಿಂದ ಈ ಜೋಡಿ ಟಗರುಗಳನ್ನು ಸಾಕಿದ್ದರು. ಇವುಗಳನ್ನು ಹಾಲಹಳ್ಳಿ ಬಡಾವಣೆಯ ಸಾಬುದ್ದೀನ್‌ ಎಂಬವರು ಖರೀದಿಸಿದ್ದಾರೆ.

ಟಗರುಗಳು ತಲಾ 80 ಕೆಜಿ ತೂಕದ್ದಾಗಿವೆ. ಕಳೆದ ಒಂದು ವರ್ಷದ ಹಿಂದೆ ತಲಾ 25 ಸಾವಿರ ರೂ. ನೀಡಿ ಸಾಬೂದ್ದೀನ್ ಟಗರುಗಳನ್ನು ಖರೀದಿಸಿದ್ದರು. 1,25,000 ಸಾವಿರಕ್ಕೆ ಎರಡು ಟಗರುಗಳನ್ನು ಖರೀದಿಸಿದ್ದಾರೆ. ಟಗರುಗಳನ್ನು ಖರೀದಿಸುವಾಗ ಕೇಕ್‌ ಕತ್ತರಿಸಿ ರೈತರಿಗೆ ಕೃತಜ್ಞತೆ ಸಲ್ಲಿಸಿದರು.

× Chat with us