ಟೋಕಿಯೋ ಒಲಿಂಪಿಕ್ಸ್‌: ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಬಜರಂಗ್‌ ಪೂನಿಯಾ, ಕಂಚು ಆಸೆ ಜೀವಂತ

ಟೋಕಿಯೋ: ಭಾರತದ ಭರವಸೆಯ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದು, ಫೈನಲ್​​ ಪ್ರವೇಶಿಸಲು ವಿಫಲರಾಗಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ 2020ರಲ್ಲಿ ಶುಕ್ರವಾರ ನಡೆದ ಪುರುಷರ ಪ್ರೀಸ್ಟೈಲ್‌ 65 ಕೆಜಿ ವಿಭಾಗದ ಸೆಮಿಫೈನಲ್​ ಪಂದ್ಯದಲ್ಲಿ ಬಜರಂಗ್ ಅವರು ಅಜೆರ್ಬೈಜಾನ್ ರಸ್ಲರ್ ಹಾಜಿ ಅಲಿಯೇವ್ ವಿರುದ್ಧ 5-12 ಅಂತರದಿಂದ ಸೋಲು ಕಂಡಿದ್ದಾರೆ. ಎದುರಾಳಿಯ ಆಕ್ರಮಣಕಾರಿ ಆಟದ ಎದುರು ಬಜರಂಗ್​ಗೆ ಕೇವಲ 5 ಅಂಕ ಸಂಪಾದಿಸಲಷ್ಟೇ ಶಕ್ತವಾಯಿತು.

ಕಂಚಿಗಾಗಿ ಬಜರಂಗ್ ಹಾಗೂ ರಷ್ಯಾದ ಗಾಡ್ಜಿಮುರಾದ್ ರಶಿದೋವ್ ಶನಿವಾರ ಕಾದಾಟ ನಡೆಸಲಿದ್ದಾರೆ.

× Chat with us