BREAKING NEWS

ಪಂಚರಾಜ್ಯಗಳಿಗೆ ವಿಧಾನಸಭಾ ಚುನಾವಣೆ ಘೋಷಣೆ: ನವೆಂಬರ್‌ನಲ್ಲಿ ಚುನಾವಣೆ

ನವದೆಹಲಿ : ಭಾರತದ ಚುನಾವಣಾ ಆಯೋಗವು ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಚುನಾವಣಾ ದಿನಾಂಕವನ್ನು ಘೋಷಿಸಿದೆ.

ಮಿಜೋರಾಂನಲ್ಲಿ ನವೆಂಬರ್ 7 ರಂದು ಚುನಾವಣೆ ನಡೆಯಲಿದ್ದರೆ, ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 7 ಮತ್ತು ನವೆಂಬರ್ 17ರಂದು, ರಾಜಸ್ಥಾನದಲ್ಲಿ ನವೆಂಬರ್‌ 23ರಂದು ಹಾಗೂ ತೆಲಂಗಾಣದಲ್ಲಿ ನವೆಂಬರ್‌ 30ರಂದು ಚುನಾವಣೆ ನಡೆಯಲಿದೆ.

2024 ರ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಈ ವಿಧಾನಸಭಾ ಚುನಾವಣೆಗಳು ನಡೆಯಲಿರುವುದರಿಂದ ಅತ್ಯಂತ ಮಹತ್ವ ಪಡೆದಿವೆ.

ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕ್ರಮವಾಗಿ ಅಶೋಕ್ ಗೆಹ್ಲೋಟ್ ಮತ್ತು ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರಗಳಿದ್ದರೆ, ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ಹಾಗೂ ಮಿಜೋರಾಂನಲ್ಲಿ ಬಿಜೆಪಿ ಮಿತ್ರಪಕ್ಷವಾದ ಮಿಜೋ ನ್ಯಾಷನಲ್ ಫ್ರಂಟ್ ಸರಕಾರವಿದೆ.

ತೆಲಂಗಾಣ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ವಿಧಾನಸಭೆಗಳ ಅವಧಿಯು ಜನವರಿ 2024 ರಲ್ಲಿ ವಿವಿಧ ದಿನಾಂಕಗಳಂದು ಮುಕ್ತಾಯಗೊಳ್ಳಲಿವೆ, ಮಿಜೋರಾಂ ವಿಧಾನಸಭೆಯ ಅವಧಿಯು ಈ ವರ್ಷ ಡಿಸೆಂಬರ್ 17 ರಂದು ಅಂತ್ಯವಾಗಲಿದೆ.

ರಾಜ್ಯ                    ಮತದಾನ ದಿನಾಂಕ           ಮತ ಎಣಿಕೆ

ಮಧ್ಯಪ್ರದೇಶ          ನವೆಂಬರ್ 17                  ಡಿಸೆಂಬರ್ 3

ರಾಜಸ್ಥಾನ            ನವೆಂಬರ್ 23                   ಡಿಸೆಂಬರ್ 3

ತೆಲಂಗಾಣ           ನವೆಂಬರ್ 30                   ಡಿಸೆಂಬರ್ 3

ಛತ್ತೀಸ್‌ಗಢ        ನವೆಂಬರ್ 7 ಮತ್ತು 17         ಡಿಸೆಂಬರ್ 3

ಮಿಜೋರಾಂ        ನವೆಂಬರ್ 7                     ಡಿಸೆಂಬರ್ 3

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ದೆಹಲಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಚುನಾವಣಾ ದಿನಾಂಕಗಳ ಕುರಿತು ಮಾಹಿತಿ ನೀಡಿದರು.

► ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಒಟ್ಟು 679 ವಿಧಾಸನಭಾ ಕ್ಷೇತ್ರಗಳಿವೆ.

► ಭಾರತದ ಒಟ್ಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರನೇ ಒಂದು ಭಾಗದಷ್ಟು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು ಒಟ್ಟು 16.14 ಕೋಟಿ ಮತದಾರರು, ಅಂದರೆ ಭಾರತದ ಒಟ್ಟು ಮತದಾರರ ಪೈಕಿ ಆರನೇ ಒಂದರಷ್ಟು ಮಂದಿ ಮತ ಚಲಾಯಿಸಲಿದ್ದಾರೆ.

► “40 ದಿನಗಳ ಅವಧಿಯಲ್ಲಿ ನಾವು ಎಲ್ಲಾ 5 ರಾಜ್ಯಗಳಿಗೆ ಭೇಟಿ ನೀಡಿದ್ದೇವೆ ಮತ್ತು ಅಲ್ಲಿನ ರಾಜಕೀಯ ಪಕ್ಷಗಳು ಹಾಗೂ ಕೇಂದ್ರ ಮತ್ತು ರಾಜ್ಯ ಜಾರಿ ಏಜನ್ಸಿಗಳೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದರು.

► ಈ ಐದು ರಾಜ್ಯಗಳಲ್ಲಿ 16 ಲಕ್ಷ ಹೊಸ ಮತದಾರರು ನೋಂದಾಯಿತರಾಗಿದ್ದಾರೆ.

► ಈ ಐದು ರಾಜ್ಯಗಳಾದ್ಯಂತ 177 ಲಕ್ಷ ಮತಗಟ್ಟೆಗಳಿರಲಿವೆ.

► ಎಲ್ಲಾ ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ಸೇರ್ಪಡೆಗೆ ಕ್ರಮಕೈಗೊಳ್ಳಬೇಕು ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.

► ತೃತೀಯಲಿಂಗಿಗಳನ್ನೂ ಮತದಾರರ ಪಟ್ಟಿಗೆ ಸೇರಿಸಿ ಎಲ್ಲರನ್ನು ಒಳಗೊಳ್ಳುವಂತೆ ಮಾಡಲಾಗುವುದು ಎಂದು ಚುನಾವಣಾ ಆಯುಕ್ತರು ಹೇಳಿದ್ದಾರೆ.

► ವಯಸ್ಸಾದ ಮತದಾರರಿಗೆ ಮನೆಗಳಿಂದಲೇ ಮತ ಚಲಾಯಿಸಲು ಐದು ದಿನ ಕಾಲಾವಕಾಶ ನೀಡಲಾಗುವುದು.

► ಯಾವುದೇ ಓಲೈಕೆಗಳು ಅಥವಾ ಭ್ರಷ್ಟಾಚಾರದ ಬಗ್ಗೆ ಎಚ್ಚರಿಕೆ ನೀಡಲು ವಿಜಿಲ್ ಆಪ್‌ ಬಳಸಲಾಗುವುದು.

► ವಿಜಿಲ್‌ ದೂರುಗಳಿಗೆ 100 ನಿಮಿಷಗಳೊಳಗೆ ಸ್ಪಂದಿಸಲಾಗುವುದು.

► ಎಲ್ಲಾ ರಾಜಕೀಯ ಪಕ್ಷಗಳು ಅಕ್ಟೋಬರ್ 31 ರೊಳಗೆ ತಾವು ಸ್ವೀಕರಿಸಿದ ಕೊಡುಗೆಗಳು ಮತ್ತು ದೇಣಿಗೆಗಳನ್ನು ವರದಿ ಮಾಡಬೇಕು

► ರಾಜಕೀಯ ಪಕ್ಷಗಳು ತಮ್ಮ ವಾರ್ಷಿಕ ವೆಚ್ಚದ ವರದಿಯನ್ನು ಡಿಜಿಟಲ್ ರೂಪದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.

► ಎಲ್ಲಾ ರಾಜ್ಯ ಮತ್ತು ಕೇಂದ್ರ ಏಜೆನ್ಸಿಗಳು ತಾವು ವಶಡಿಸಿಕೊಂಡ ವಸ್ತುಗಳ ಮಾಹಿತಿಯನ್ನು ಕೇಂದ್ರ ಡೇಟಾಬೇಸ್‌ನಲ್ಲಿ ನಮೂದಿಸಬೇಕಿದೆ. ಈ ವ್ಯವಸ್ಥೆಯನ್ನು ಮೊದಲ ಬಾರಿ ಜಾರಿಗೊಳಿಸಲಾಗಿದೆ.

andolanait

Recent Posts

ಮಾದಕ ವಸ್ತು ಪತ್ತೆ ; ನಾಲ್ವರು ಸಿಸಿಬಿ ವಶಕ್ಕೆ

ಮೈಸೂರು : ಮಾದಕ ವ್ಯಸನ ಮುಕ್ತ ಮೈಸೂರು ವಿಮುಕ್ತಿ ಅಭಿಯಾನದ ಮುಂದುವರಿದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ ಸುಮಾರು…

7 hours ago

ಏಳು ವಿದೇಶಿಯರ ಬಂಧಿಸಿದ ಎನ್‌ಐಎ

ಹೊಸದಿಲ್ಲಿ : ಭಾರತೀಯ ದಂಗೆಕೋರ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಜನಾಂಗೀಯ ಯುದ್ಧ ಗುಂಪುಗಳನ್ನು ಸಂಪರ್ಕಿಸಲು ಮತ್ತು ತರಬೇತಿ ನೀಡಲು ಅಕ್ರಮವಾಗಿ…

9 hours ago

ಮೈಸೂರು | ಆಕಸ್ಮಿಕ ಬೆಂಕಿಗೆ ವ್ಯಕ್ತಿ ಸಜೀವ ದಹನ

ಮೈಸೂರು : ಸ್ಥಗಿತಗೊಂಡಿದ್ದ ಚಿತ್ರಮಂದಿರದ ಆವರಣದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಅಲ್ಲಿನ ವಾಚ್‌ಮನ್ ಒಬ್ಬರು ಸಜೀವ ದಹನಗೊಂಡ ದಾರುಣ…

9 hours ago

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ವಿದ್ಯಾರ್ಥಿಗಳಿಗೆ ಶುಭಕೋರಿದ ಸಿಎಂ

ಬೆಂಗಳೂರು : 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.18ರಿಂದ ಪ್ರಾರಂಭವಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

9 hours ago

ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಸಂಭ್ರಮ : ಮಾದಪ್ಪನಿಗೆ ಎಣ್ಣೆಮಜ್ಜನ

ಹನೂರು : ರಾಜ್ಯದ ಪ್ರಸಿದ್ದ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಹಿನ್ನೆಲೆ ಮಂಗಳವಾರ…

9 hours ago

ಕುಡಿಯುವ ನೀರು ಸಮಸ್ಯೆಗೆ ಸರ್ಕಾರದ ಕ್ರಮವೇನು? : ಅಧಿವೇಶನದಲ್ಲಿ ಎಂಎಲ್‌ಎ ಮಂಜುನಾಥ್‌ ಪ್ರಶ್ನೆ

ಹನೂರು : ತಾಲೂಕು ವ್ಯಾಪ್ತಿಯ ಒಂಬತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಶಾಶ್ವತ ಪರಿಹಾರಕ್ಕೆ ಸರ್ಕಾರ…

9 hours ago