ಅಸ್ಸಾಂ: ದೇಶದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೆ ಕೋವಿಡ್‌ ಲಸಿಕೆ

ಗುವಾಹಟಿ: ದೇಶದಲ್ಲೇ ಪ್ರಥಮ ಬಾರಿಗೆ ಅಸ್ಸಾಂ ರಾಜ್ಯದಲ್ಲಿ ತೃತೀಯ ಲಿಂಗಿಗಳಿಗೆ ಕೋವಿಡ್‌-19 ಲಸಿಕೆಯನ್ನು ನೀಡಲಾಯಿತು.

ಶುಕ್ರವಾರ ಗುವಾಹಟಿಯಲ್ಲಿ 30 ತೃತೀಯ ಲಿಂಗಿಗಳು ಲಸಿಕೆಯನ್ನು ಹಾಕಿಸಿಕೊಂಡರು. ಆರೋಗ್ಯ ಇಲಾಖೆ ಸಹಕಾರದಲ್ಲಿ ತೃತೀಯ ಲಿಂಗಿಗಳಿಗೆ ಕೋವಿಡ್‌ ಲಸಿಕೆ ನೀಡಲು ಲಸಿಕಾ ಕೇಂದ್ರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅವರಿಗೆ ಲಸಿಕೆ ಅಭಿಯಾನ ಮುಂದುವರಿದಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

2011ರ ಸಮೀಕ್ಷೆ ಪ್ರಕಾರ, ಅಸ್ಸಾಂನಲ್ಲಿ ಕಳೆದ ವರ್ಷ ಜೂನ್‌ ತಿಂಗಳಿಗೆ ತೃತೀಯ ಲಿಂಗಿಗಳ ಸಂಖ್ಯೆ 11,374 ಇತ್ತು. ಈ ಸಮುದಾಯದ ಕಲ್ಯಾಣ ಬೋರ್ಡ್‌ವೊಂದನ್ನು ರಾಜ್ಯ ಸರ್ಕಾರ ಸ್ಥಾಪಿಸಿದೆ.