ಏಷಿಯನ್‌ ಪೇಂಟ್ಸ್‌ ಕಾರ್ಖಾನೆ ಬಂದ್‌ ತೆರವುಗೊಳಿಸಿದ ರೈತರು… ಮುಂದುವರಿದ ಪ್ರತಿಭಟನೆ

ನಂಜನಗೂಡು: ಭೂಮಿ ಕಳೆದುಕೊಂಡ ರೈತರಿಗೆ ಇದೇ ಘಟಕದಲ್ಲಿಯೇ ಉದ್ಯೋಗ ನೀಡಲು ಮಾಲೀಕರು ಒಪ್ಪಿದ್ದಾರೆ, ಶೀಘ್ರವೇ ಅಧಿಕೃತ ಪ್ರಮಾಣ ಪತ್ರ ನೀಡಲಾಗುವುದು ಎಂಬ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಭರವಸೆ ಆಧರಿಸಿ ಏಷಿಯನ್‌ ಪೇಂಟ್ಸ್‌ ಕಾರ್ಖಾನೆ ಬಂದ್‌ ಅನ್ನು ರೈತರು ಶನಿವಾರ ರಾತ್ರಿ ತೆರವುಗೊಳಿಸಿದ್ದಾರೆ. ಆದರೆ, ಪ್ರತಿಭಟನೆ ಮುಂದುವರಿಸಿದ್ದಾರೆ.

ರಾತ್ರಿ ಜೆಸಿಬಿ ಸಹಾಯದಿಂದ ಕಾರ್ಖಾನೆ ಗೇಟ್‌ ಬಳಿ ಹಾಕಿದ್ದ ಮಣ್ಣು, ಮುಳ್ಳಿನ ಬೇಲಿಯನ್ನು ರೈತರು ತೆರವುಗೊಳಿಸಿದ್ದಾರೆ. ಆ ಮೂಲಕ ಕಾರ್ಖಾನೆ ಕಾರ್ಯಚಟುವಟಿಕೆಗೆ ಅವಕಾಶ ಕಲ್ಪಿಸಿದ್ದಾರೆ. ರೈತರ ಪ್ರತಿಭಟನೆ 65ನೇ ದಿನಕ್ಕೆ ಕಾಲಿಟ್ಟಿದೆ.

ʻಜಿಲ್ಲಾಧಿಕಾರಿಗಳ ಭರವಸೆ ಆಧರಿಸಿ ಕಾರ್ಖಾನೆ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ಮಾತು ತಪ್ಪಿದ್ದಲ್ಲಿ ಮತ್ತೆ ಕಾರ್ಖಾನೆ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುವುದುʼ ಎಂದು ರೈತರು ಎಚ್ಚರಿಸಿದ್ದಾರೆ.

ಅಲ್ಲದೇ, ಇಂದು (ಭಾನುವಾರ) ಮಧ್ಯಾಹ್ನ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲಿದ್ದು, ರೈತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

× Chat with us