22 ದಿನಗಳ ಬಳಿಕ ಆರ್ಯನ್ ಜೈಲಿನಿಂದ ಬಿಡುಗಡೆ

ಮುಂಬೈ: ಬಾಲಿವುಡ್ ಪ್ರಖ್ಯಾತ ಶಾರುಕ್ ಖಾನ್ ಪುತ್ರ, ಐಷಾರಾಮಿ ಹಡಗಿನ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರ್ಯನ್ ಖಾನ್ ಅವರಿಗೆ 22 ದಿನಗಳ ಬಳಿಕ ಕಾರಾಗೃಹದಿಂದ ಬಿಡುಗಡೆ ಭಾಗ್ಯ ಲಭಿಸಿದೆ. ಮುಂಬೈ ಆರ್ಥರ್ ರೋಡ್ ಜೈಲಿನಿಂದ ಆರ್ಯನ್ ಬಿಡುಗಡೆಯಾದರು.

ಸೆಷನ್ಸ್ ನ್ಯಾಯಾಲಯವು ಬಿಡುಗಡೆ ಮೆಮೊ ನೀಡಿದ ಒಂದು ದಿನದ ನಂತರ, ಅಂದರೆ ಶನಿವಾರ 11 ಗಂಟೆ ಸುಮಾರಿಗೆ ಆರ್ಯನ್ ಜೈಲಿನಿಂದ ಹೊರಬಂದರು. ಅಲ್ಲಿಂದ ಕಾರಿನ ಮೂಲಕ ಅವರು ಬಾಂದ್ರಾದಲ್ಲಿರುವ ತಮ್ಮ ಮನೆಗೆ ಸಾಗಿದರು.

ಅವರಿಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಲು ಸಮಯ ಬೇಕಾದ ಕಾರಣ ಬಿಡುಗಡೆ ವಿಳಂಬವಾಯಿತು. ಶಾರುಕ್ ಕುಟುಂಬದ ಸ್ನೇಹಿತೆ ಮತ್ತು ನಟಿ ಜೂಹಿ ಚಾವ್ಲಾ ಅವರು ಆರ್ಯನ್ ಜಾಮೀನಿಗೆ ಭದ್ರತೆ ಒದಗಿಸಿದ್ದಾರೆ.

× Chat with us