ನನ್ನನ್ನು ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿಸಲು ಯತ್ನ: ಆರ್ಯನ್ ಖಾನ್‌

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಎನ್‌ಸಿಬಿ ಯತ್ನಿಸುತ್ತಿದೆ ಎಂದು ಆರ್ಯನ್ ಖಾನ್ ತಿಳಿಸಿದ್ದಾರೆ. ಜಾಮೀನು ಕೋರಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿಕೆಗಳನ್ನು ದಾಖಲಿಸಿರುವ ಆರ್ಯನ್ ಖಾನ್, ಇದು ನ್ಯಾಯಸಮ್ಮತವಲ್ಲದ ಪ್ರಕ್ರಿಯೆ ಎಂದು ದೂರಿದ್ದಾರೆ.

ನನ್ನ ವಾಟ್ಸ್‌ಆಪ್ ಸಂದೇಶಗಳ ವ್ಯಾಖ್ಯಾನವನ್ನು ತನಿಖಾಧಿಕಾರಿಯೊಬ್ಬರು ಮಾಡಿದ್ದಾರೆ. ಅಂತಹ ವ್ಯಾಖ್ಯಾನವೇ ತಪ್ಪು ಮತ್ತು ನ್ಯಾಯಸಮ್ಮತವಲ್ಲದ್ದು’ ಎಂದು ಆರ್ಯನ್ ಖಾನ್ ಮನವಿಯಲ್ಲಿ ತಿಳಿಸಿದ್ದಾರೆ.

ಜಾಮೀನು ಅರ್ಜಿಯ ವಿಚಾರಣೆಯನ್ನು ಅ.28ರಂದು ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.

× Chat with us