ʼನಾಚಿ ನೀರಾದ ಯುವತಿʼಗೆ ಮರುಳಾದ ಲಿಂಬಾವಳಿ!

ಮೈಸೂರು: ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಶಿಲ್ಪ ಶಿಲಾ ಶಿಬಿರದಲ್ಲಿ ಕೆತ್ತನೆ ಮಾಡಿರುವ ಶಿಲ್ಪ ಶಿಲೆಗಳನ್ನು ವೀಕ್ಷಣೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರು ಕಲಾವಿದರು ಕೆತ್ತನೆ ಮಾಡಿದ್ದ ಶಿಲೆಗಳನ್ನು ನೋಡಿ ಪುಳಕಿತರಾದರು.

ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿ ಕೆತ್ತನೆ ಮಾಡಿದ್ದ ಶಿಲ್ಪಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಸೂರ್ಯನ ತಾಪಕ್ಕೆ ನಾಚಿ ನೀರಾಗಿದ್ದ ಯುವತಿಯು ಕಣ್ಣೋಟ ಬೀರುತ್ತಿರುವ ಶಿಲ್ಪವನ್ನು ಕಂಡು ಬೆರಗಾದರು.

ಇದೇ ರೀತಿ ವಿವಿಧ ಶಿಲ್ಪಗಳನ್ನು ನೋಡಿದರಲ್ಲದೆ,ಅದರ ಬಗ್ಗೆ ಕಲಾವಿದರಿಂದ ವಿವರಣೆ ಪಡೆದರು. ಇದಾದ ಬಳಿಕ, ಚಿತ್ರಕಲೆ, ಶಿಲ್ಪಕಲೆ, ಅಚ್ಚುಕಲೆ, ಅನ್ವಯ ಕಲೆ, ಛಾಯಾಚಿತ್ರ ಮತ್ತು ಛಾಯಾ ಪತ್ರಿಕೋದ್ಯಮ,ಕಲಾ ಇತಿಹಾಸ ವಿಭಾಗಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಶಿಲ್ಪಕಲೆ ವಿಭಾಗದಲ್ಲಿ ವಿದ್ಯಾರ್ಥಿಗಳು ಕೆತ್ತನೆ ಮಾಡಿದ್ದ ಶಿಲ್ಪಗಳನ್ನು ನೋಡಿದರು.

× Chat with us