BREAKING NEWS

ಕೃತಕ ಭ್ರೂಣ ಕೋಶ ಸೃಷ್ಟಿ!

ಮೆಲ್ಬರ್ನ್: ಜೀವಜಗತ್ತಿನ ವಿಕಾಸದ ಬಗ್ಗೆ ಹಲವಾರು ಸಂಶೋಧನೆಗಳು ನಿತ್ಯ ನಡೆಯುತ್ತಲೇ ಇವೆ. ಪ್ರಸ್ತುತ ಇನ್ನೊಂದು ಅತ್ಯಂತ ಮಹತ್ವದ ಸೃಷ್ಟಿಯೊಂದು ನಡೆದಿದೆ. ಇಂಗ್ಲೆಂಡ್‌ನ‌ ಕೇಂಬ್ರಿಡ್ಜ್‌ ವಿವಿಯ ಮ್ಯಾಗ್ಡಲೆನಾ ಗೋಯೆಜ್‌ ಅವರು ಕ್ಯಾಲಿಫೋರ್ನಿಯ ತಾಂತ್ರಿಕ ಸಂಸ್ಥೆಯೊಂದಿಗೆ ಸೇರಿಕೊಂಡು, ವಿಶೇಷ ಜೀವಕೋಶಗಳನ್ನು ಬಳಸಿ ಕೃತಕವಾಗಿ ಮನುಷ್ಯನ ಭ್ರೂಣಕೋಶಗಳನ್ನು ಸೃಷ್ಟಿಸಿದ್ದಾರೆ.

ಇವು ಮನುಷ್ಯನ ಭ್ರೂಣಕೋಶಗಳಲ್ಲವಾದರೂ, ಅವನ್ನೇ ಹೋಲುವ ಕೃತಕ ರೂಪಗಳು! ಇವು ಕೃತಕವಾದರೂ ಮಾಮೂಲಿ ಭ್ರೂಣಕೋಶಗಳ ಹಲವು ಲಕ್ಷಣಗಳನ್ನು ಹೊಂದಿವೆ. ಈ ವಿಚಾರ ಇತ್ತೀಚೆಗೆ ಅಮೆರಿಕದ ಬೋಸ್ಟನ್‌ನಲ್ಲಿ ನಡೆದ ಇಂಟರ್‌ನ್ಯಾಷನಲ್‌ ಸೊಸೈಟಿ ಫಾರ್‌ ಸ್ಟೆಮ್‌ ಸೆಲ್‌ ರೀಸರ್ಚ್‌ ಸಭೆಯಲ್ಲಿ ಬಹಿರಂಗವಾಗಿದೆ.

ಇದನ್ನು ಪ್ರೊಫೆಸರ್‌ ಮ್ಯಾಗ್ಡಲೆನಾ ಗೋಯೆಜ್‌ ಬಹಿರಂಗ ಪಡಿಸಿದ್ದೇ ತಡ ಹಲವು ರೀತಿಯ ಚರ್ಚೆಗಳು ಆರಂಭವಾಗಿವೆ. ಪ್ರಸಿದ್ಧ ನಿಯತಕಾಲಿಕೆಗೆ ಕಳುಹಿಸಲಾಗಿದೆ ಯಾದರೂ ಅದಿನ್ನೂ ಪ್ರಕಟವಾಗಿಲ್ಲ. ಈ ಸಂಶೋಧನೆ ವಿಜ್ಞಾನಿಗಳ ವಲಯದಲ್ಲಿ ಕೆಲವು ಆತಂಕಗಳನ್ನೂ ಹುಟ್ಟಿಸಿದೆ.

ಮ್ಯಾಗ್ಡಲೆನಾ ಸಂಶೋಧನೆಯೇನು?: ಮ್ಯಾಗ್ಡಲೆನಾ ತಮ್ಮ ಸಂಶೋಧನೆಯನ್ನು ವಿವರಿಸುವಾಗ ಹಲವು ಗಂಭೀರ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಮೊದಲನೆಯದಾಗಿ ಮನುಷ್ಯನ ಒಂದೇ ಒಂದು ವಿಶೇಷ ಜೀವಕೋಶವನ್ನು ಬಳಸಿ ಕೃತಕ ಭ್ರೂಣಕೋಶಗಳನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಗ್ಯಾಸ್ಟ್ರಿಕು ಲೇಶನ್‌ ಎಂಬ ಪದ್ಧತಿ ಬಳಸಲಾಗಿದೆ.

ಆದರೆ ಈ ಪದ್ಧತಿ 14 ದಿನಗಳ ನಿಯಮವನ್ನು ಮೀರಿದೆ. ಪ್ರಯೋಗಾಲಯದಲ್ಲಿ ಭ್ರೂಣವನ್ನು ಬೆಳೆಸಲು 14 ದಿನಗಳ ಸಮಯವನ್ನು ನಿಗದಿಪಡಿಸಲಾಗಿದೆ. ಇದಕ್ಕಿಂತ ಹೆಚ್ಚಿನ ಅವಧಿ ಯಾವುದೇ ಭ್ರೂಣ ಬದುಕಿರಲು ಸಾಧ್ಯವಿಲ್ಲ ಎನ್ನುವುದೇ ಇದಕ್ಕೆ ಕಾರಣ. ಅಂಡಾಣು ಹುಟ್ಟಿ ಬೆಳೆದು ಗರ್ಭಕೋಶವನ್ನು ಸೇರಿಕೊಳ್ಳುವ ಅವಧಿಯೂ ಇಷ್ಟೇ ಆಗಿದೆ.

ಪ್ರಸ್ತುತ ಮ್ಯಾಗ್ಡಲೆನಾ ಶೋಧದಲ್ಲಿ 14 ದಿನಗಳಿಗಿಂತ ಹೆಚ್ಚಿನ ಸಮಯವನ್ನು ಬಳಸಿಕೊಳ್ಳಲಾಗಿದೆ. 2021ರಲ್ಲಿ ಇದಕ್ಕಿಂತ ಹೆಚ್ಚಿನ ಸಮಯ ನೀಡಲು ಚಿಂತನೆ ನಡೆಸಲಾಗಿತ್ತು. ಬಹುಶಃ ಭ್ರೂಣದ ಕುರಿತ ಸಂಶೋಧನೆಗೆ ನೆರವಾಗುವ ಕಾರಣ ಹೆಚ್ಚುವರಿ ಸಮಯಕ್ಕೆ ಅನುಮತಿ ನೀಡುವ ಸಾಧ್ಯತೆಯೂ ಇದೆ.

ನವಶೋಧದ ವಿಶೇಷವೇನು?: ಒಂದೇ ಒಂದು ಜೀವ ಕೋಶ ಬಳಸಿ ಬೆಳೆಸಿರುವ ಕೃತಕ ಭ್ರೂಣಕೋಶಗಳು, ಮನುಷ್ಯನ ಸಹಜ ಭ್ರೂಣಕೋಶಗಳನ್ನು ಹೋಲುತ್ತವೆ. ಭ್ರೂಣದ ಬೆಳವಣಿಗೆಯ ಅತ್ಯಂತ ಆರಂಭಿಕ ಸ್ಥಿತಿಯಲ್ಲಿರುವಂತೆ ಈ ಭ್ರೂಣಗಳು ಕಾಣುತ್ತವೆ. ಇವು ಇನ್ನಷ್ಟು ಬೆಳೆಯುತ್ತ ಹೋದಂತೆಲ್ಲ ಕರುಳಬಳ್ಳಿ, ಗರ್ಭಕೋಶದಲ್ಲಿ ಭ್ರೂಣದ ಸುತ್ತಲೂ ಇರುವ ಯಾಲ್ಕ್ ಸ್ಯಾಕ್‌ ಸೇರಿದಂತೆ ಭ್ರೂಣಕೋಶದ ರೂಪವನ್ನು ಪಡೆಯುತ್ತವೆ. ಆದರೆ ಹೃದಯ, ಮೆದುಳು ಸೇರಿದಂತೆ ಇನ್ನಿತರೆ ಮಹತ್ವದ ಅಂಗಾಂಗಗಳ ಬೆಳವಣಿಗೆಗಳು ಇಲ್ಲಿರುವುದಿಲ್ಲ. ಅರ್ಥಾತ್‌ ಮನುಷ್ಯನ ಸಹಜ ಭ್ರೂಣಗಳ ಬೆಳವಣಿಗೆಯಲ್ಲಿ ಕಾಣುವ ಎಲ್ಲ ಲಕ್ಷಣಗಳು ಇಲ್ಲಿರುವುದಿಲ್ಲ.

ಲಾಭಗಳೇನು? ಆತಂಕಗಳೇನು?
ಇತ್ತೀಚೆಗೆ ಸ್ತ್ರೀಯರಿಗೆ ಗರ್ಭಪಾತ ಹೆಚ್ಚಾಗಿದೆ. ಅವು ಯಾಕೆ ಆಗುತ್ತವೆ ಎನ್ನುವುದನ್ನು ಈ ಕೃತಕ ಭ್ರೂಣಗಳ ಬೆಳವಣಿಗೆಯ ಮೂಲಕ ತಿಳಿಯಬಹುದು. ಇವುಗಳ ಸೃಷ್ಟಿಗೆ ಅಂಡಾಣು-ವೀರ್ಯಾಣುವಿನ ಅಗತ್ಯವಿಲ್ಲವಾದರೂ, ಮನುಷ್ಯನ ಜೀವಕೋಶಗಳಿಂದಲೇ ಸಿದ್ಧಪಡಿಸಬೇಕು. ಒಂದು ವೇಳೆ ಈ ಮಾರ್ಗದಲ್ಲೇ ಭ್ರೂಣದ ಸೃಷ್ಟಿ ಸಾಧ್ಯವಾದರೆ, ಐವಿಎಫ್ ಪ್ರಯೋಗಾಲಯದಲ್ಲಿ ಭ್ರೂಣಗಳನ್ನು ಬೆಳೆಸುವ ಪದ್ಧತಿ ಮತ್ತು ಸಂಶೋಧನೆಗಳೆಲ್ಲ ಅರ್ಥ ಕಳೆದುಕೊಳ್ಳುತ್ತವೆ ಎನ್ನುವುದು ವಿಜ್ಞಾನಿಗಳನ್ನು ಕಾಡುತ್ತಿರುವ ಸಂಗತಿಯಾಗಿದೆ.

andolanait

Recent Posts

ಡಾ. ಮನಮೋಹನ್ ಸಿಂಗ್ ಅವರಿಗೆ ಹುಬ್ಬಳ್ಳಿಯೊಂದಿಗೆ ಹತ್ತಿರದ ನಂಟಿದೆ: ಬಸವರಾಜ ಬೊಮ್ಮಾಯಿ

ಗದಗ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಹುಬ್ಬಳ್ಳಿಯೊಂದಿಗೆ ಹತ್ತಿರದ ನಂಟಿದೆ. ಅವರ ಕೊ ಬ್ರದರ್ ಹಾಗೂ ಅವರ…

2 hours ago

ಮನಮೋಹನ್‌ ಸಿಂಗ್‌ ಅಂತ್ಯಕ್ರಿಯೆ ಸ್ಥಳದಲ್ಲಿ ಸ್ಮಾರಕಕ್ಕೆ ಮನವಿ; ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ

ನವದೆಹಲಿ: ಡಾ. ಮನಮೋಹನ್‌ ಸಿಂಗ್‌ ನಿಧನದ ಹಿನ್ನಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ…

2 hours ago

ಭಾರತ – ಪಾಕ್‌ ಕ್ರಿಕೆಟ್‌ ಸಂಬಂಧಕ್ಕೆ ಮರುಜೀವ ತುಂಬಿದ್ದ ಮನಮೋಹನ್‌ ಸಿಂಗ್‌

ಭಾರತದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯವನ್ನು ಪಾಕಿಸ್ತಾನ ಪ್ರಧಾನಿ ಜೊತೆ…

3 hours ago

ಸತತ 2ನೇ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಎಸ್‌.ಷಡಾಕ್ಷರಿ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಇಂದು ಚುನಾವಣೆ ನಡೆದಿದ್ದು, ಸತತ 2ನೇ ಬಾರಿಗೆ…

4 hours ago

ಮನಮೋಹನ್‌ ಸಿಂಗ್‌ ನಿಧನ: ಭಾರತ-ಚೀನಾ ಅಭಿವೃದ್ಧಿಗೆ ಸಿಂಗ್‌ ಕೊಡುಗೆ ಶ್ಲಾಘಿಸಿದ ಚೀನಾ

ಬೀಜಿಂಗ್‌: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತ-ಚೀನಾ ಅಭಿವೃದ್ಧಿಗೆ ಸಿಂಗ್‌ ಅವರ ಕಾರ್ಯ ವೈಖರಿಯನ್ನು ನೆನೆದುಕೊಂಡು…

4 hours ago

ಮನಮೋಹನ್‌ ಸಿಂಗ್‌ ನಿಧನ, ಏಳು ದಿನ ಶೋಕಾಚರಣೆ: ಡಿ.31 ರಂದು ಪೊಲೀಸ್‌ ಬ್ಯಾಂಡ್‌, ಹಸಿರು ಪಟಾಕಿ ಪ್ರದರ್ಶನ ರದ್ದು

ಮೈಸೂರು: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನರಾದ ಹಿನ್ನಲೆಯಲ್ಲಿ ಡಿಸೆಂಬರ್‌.31 ರಂದು ಆಯೋಜಿಸಲಾಗಿದ್ದ ಪೊಲೀಸ್‌ ಬ್ಯಾಂಡ್‌ ಮತ್ತು ಪಟಾಕಿ ಪ್ರದರ್ಶನವನ್ನು…

4 hours ago