ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸಚಿನ್‌ ತೆಂಡುಲ್ಕರ್‌ ಪುತ್ರ ಅರ್ಜುನ್‌

ಹೊಸದಿಲ್ಲಿ: ಐಪಿಎಲ್‌ 2021ರ ಹರಾಜು ಪ್ರಕ್ರಿಯೆ ಮುಗಿದಿದೆ. ಮುಂಬೈ ಇಂಡಿಯನ್ಸ್‌ (ಎಂಐ) ತಂಡವು ಕ್ರಿಕೆಟ್‌ ಲೋಕದ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ರನ್ನು ಕೂಡ ಖರೀದಿಸಿದೆ.

20 ಲಕ್ಷ ರೂ. ನೀಡಿ ಅರ್ಜುನ್‌ ತೆಂಡುಲ್ಕರ್‌ನನ್ನು ಎಂಐ ತಂಡ ಕೊಂಡುಕೊಂಡಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ತಂದೆ ಸಚಿನ್‌ ತೆಂಡುಲ್ಕರ್‌ ಪ್ರಭಾವದಿಂದ ತಂಡಕ್ಕೆ ಅರ್ಜುನ್‌ನನ್ನು ಸೇರಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಅರ್ಜುನ್‌ ತೆಂಡುಲ್ಕರ್‌ ಖರೀದಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಂಬೈ ಇಂಡಿಯನ್ಸ್‌ ಮುಖ್ಯ ಕೋಚ್‌ ಮಹೇಲಾ ಜಯವರ್ಧನೆ, ʻಕೌಶಲ ಆಧಾರದಲ್ಲಿ ಅರ್ಜುನ್‌ನನ್ನು ತಂಡಕ್ಕೆ ಖರೀದಿಸಲಾಗಿದೆʼ ಎಂದು ತಿಳಿಸಿದ್ದಾರೆ.

ʻಆತನ ಪರಿಣತಿ, ಕೌಶಲ ನೋಡಿ ಖರೀದಿಸಲಾಗಿದೆ. ಸಚಿನ್‌ ತೆಂಡುಲ್ಕರ್‌ ಕಾರಣದಿಂದಾಗಿಯೂ ಅರ್ಜುನ್‌ ಮೇಲೂ ದೊಡ್ಡ ಜವಾಬ್ದಾರಿಗಳಿವೆ. ಅರ್ಜುನ್‌ ಬ್ಯಾಟ್ಸ್‌ಮನ್‌ ಅಲ್ಲ, ಬೌಲರ್‌. ಆತನ ಕಲಿಕೆಗೆ ಇದು ನೆರವಾಗಲಿದೆʼ ಎಂದು ಜಯವರ್ಧನೆ ಹೇಳಿದ್ದಾರೆ.

× Chat with us