BREAKING NEWS

ಪಕ್ಷ ವಿರೋಧಿ ಚಟುವಟಿಕೆ: ಸಂಸದ ಪ್ರಫುಲ್ ಪಟೇಲ್, ಸುನಿಲ್ ತಾತ್ಕರೆ ವಜಾಗೊಳಿಸಿದ ಶರದ್ ಪವಾರ್

ಮುಂಬೈ: ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಸಂಸದರಾದ ಸುನಿಲ್ ತಾತ್ಕರೆ, ಪ್ರಫುಲ್ ಪಟೇಲ್ ಅವರ ಹೆಸರನ್ನು ಪಕ್ಷದ ಸಂಸದರ ಪಟ್ಟಿಯಿಂದ ತೆಗೆದುಹಾಕುವುದಾಗಿ ಪಕ್ಷದ ಮುಖಂಡ ಶರದ್ ಪವಾರ್ ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಶರದ್ ಪವಾರ್, ಎನ್ ಸಿಪಿಯಿಂದ ಇಬ್ಬರೂ ಸಂಸದರನ್ನು ತೆಗೆದುಹಾಕಿದ್ದೇವೆ ಎಂದು ಘೋಷಿಸಿದ್ದಾರೆ.

ಸಂಸದರನ್ನು ಅನರ್ಹಗೊಳಿಸುವಂತೆ ಎನ್ ಸಿಪಿ ಸಂಸದೆ ಸುಪ್ರಿಯಾ ಸುಳೆ ಆಗ್ರಹಿಸಿದ್ದರು.  ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಟೇಲ್, ಎನ್ ಸಿಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಜಯಂತ್ ಪಾಟೀಲ್ ಬದಲು ತಾತ್ಕರೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಭಾನುವಾರ ನಡೆದ ತಮ್ಮ ಸಂಬಂಧಿ ಅಜಿತ್ ಪವಾರ್ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಮುಂಬೈ ವಿಭಾಗೀಯ ಎನ್‌ಸಿಪಿ ಮುಖ್ಯಸ್ಥ ನರೇಂದ್ರ ರಾಥೋಡ್, ಅಕೋಲಾ ನಗರ ಜಿಲ್ಲಾ ಮುಖ್ಯಸ್ಥ ವಿಜಯ್ ದೇಶಮುಖ್ ಮತ್ತು ರಾಜ್ಯ ಸಚಿವ ಶಿವಾಜಿರಾವ್ ಗರ್ಜೆ ಅವರನ್ನು ಶರದ್ ಪವಾರ್ ಇಂದು ಉಚ್ಛಾಟಿಸಿದ್ದಾರೆ.

andolanait

Recent Posts

ಮೈಸೂರು | ಉದ್ದೇಶಿತ ಮೇಲ್ಸೇತುವೆ ಪ್ರದೇಶಕ್ಕೆ ಈಶ್ವರ ಖಂಡ್ರೆ ಭೇಟಿ, ಪರಿಶೀಲನೆ

ಮೈಸೂರು : ಮೈಸೂರಿನ ಸಿದ್ದಿಕಿ ನಗರ, ಮಣಿಪಾಲ್ ಆಸ್ಪತ್ರೆ ವೃತ್ತದ ಬಳಿ ರಾ.ಹೆ.275ರಲ್ಲಿ ಉದ್ದೇಶಿತ ಮೇಲ್ಸೇತುವೆ ಸ್ಥಳಕ್ಕೆ ಅರಣ್ಯ, ಜೀವಿಶಾಸ್ತ್ರ…

13 mins ago

ಗೋಣಿಕೊಪ್ಪ | ಹುಲಿ ದಾಳಿಗೆ ಹಸು ಬಲಿ

ಗೋಣಿಕೊಪ್ಪ : ಇಲ್ಲಿಗೆ ಸಮೀಪದ ಬಿ.ಶೆಟ್ಟಿಗೇರಿಯಲ್ಲಿ ಇಂದು(ಮೇ.6) ಬೆಳಿಗ್ಗೆ ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ನಡೆದಿದೆ. ಬಿ.ಶೆಟ್ಟಿಗೇರಿ ಗ್ರಾಮದ…

22 mins ago

ಟಿವಿಕೆʼಗೆ ಕಾಂಗ್ರೆಸ್‌ ಷರತ್ತುಬದ್ಧ ಬೆಂಬಲ

ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂʼಗೆ (ಟಿವಿಕೆ)…

27 mins ago

ನಾಳೆ ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್‌ ಪ್ರಮಾಣ ವಚನ ಸ್ವೀಕಾರ

ಚೆನ್ನೈ : ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಸಿದ್ಧತೆ ಭರದಿಂದ ಸಾಗಿದೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿರುವ ನಟ…

3 hours ago

ಹನೂರು | ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್‌ : ತಪ್ಪಿದ ಭಾರಿ ಅನಾಹುತ

ಹನೂರು : ಪಟ್ಟಣದಿಂದ ಹೂಗ್ಯಂಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ರಾಮಪುರ…

4 hours ago

ನಟ ಚೇತನ್‌ ಅಹಿಂಸಾ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು: ಡಾ.ರಾಜ್‌ಕುಮಾರ್‌ ಸಮಾಧಿ ಬಗ್ಗೆ ಶುರುವಾಗಿದ್ದ ವಿವಾದ ಸಂಬಂಧ ಇದೀಗ ನಟ ಚೇತನ್‌ ಅಹಿಂಸಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇತ್ತೀಚೆಗಷ್ಟೇ…

5 hours ago