ಚಾಮುಂಡಿಬೆಟ್ಟಕ್ಕೆ ಮತ್ತೆರಡು ಶುಕ್ರವಾರ ಪ್ರವೇಶ ನಿಷಿದ್ಧ

ಮೈಸೂರು: ಕೋವಿಡ್-19 ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಅಮ್ಮನವರ ದೇವಾಲಯಕ್ಕೆ ಆ.13 ಮತ್ತು 20ರ ಶುಕ್ರವಾರದಂದು ಸಾರ್ವಜನಿಕ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶಿಸಿದ್ದಾರೆ.

ಸದರಿ ದಿನಗಳಂದು ಸಂಜೆ 6 ಗಂಟೆಯ ನಂತರ ದೇವಾಲಯದಲ್ಲಿ ನಡೆಯುವ ಧಾರ್ಮಿಕ ಆಚರಣೆಯನ್ನು ಹೊರತುಪಡಿಸಿ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಕೈಗೊಳ್ಳಬಹುದಾದ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಸಿಬ್ಬಂದಿ ನೆರವೇರಿಸುವುದು. ಮೆಟ್ಟಿಲು ಹತ್ತಿ ದೇವಾಲಯಕ್ಕೆ ತೆರಳಲೂ ನಿರ್ಬಂಧ ಹೇರಲಾಗಿದೆ. ದಾಹೋಸ, ಊಟದ ವ್ಯವಸ್ಥೆ ಮತ್ತು ಪ್ರಸಾದ ವಿತರಣೆಗೆ ಕಡಿವಾಣ ಹಾಕಲಾಗಿದೆ. ಚಾಮುಂಡಿಬೆಟ್ಟದ ಗ್ರಾಮಸ್ಥರನ್ನು ಹೊರತುಪಡಿಸಿ ಶುಕ್ರವಾರ ಪೂರ್ತಿ ದಿನ ಮತ್ತು ಇತರೆ ದಿನಗಳ ಸಂಜೆ 6 ಗಂಟೆಯ ನಂತರ ಹೊರಗಿನ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

× Chat with us