BREAKING NEWS

ಸೆಲ್ಫ್ ಕಿಡ್ನಾಪ್ ಪ್ರಕರಣದ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಮತ್ತೊಂದು ವಂಚನೆ ಬೆಳಕಿಗೆ?

ಯಲಹಂಕ : ಸೆಲ್ಫ್ ಕಿಡ್ನಾಪ್ ನಾಟಕವಾಡಿದ್ದರು ಎನ್ನಲಾಗಿದ್ದ ಜೆಡಿಎಸ್ ಮುಖಂಡ ಮುನೇಗೌಡರ ಮೇಲೆ ವಂಚನೆ ಆರೋಪ ಬಿದ್ದಿದೆ ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಮೇಲೆ ಲಕ್ಷಾಂತರ ರೂಪಾಯಿ ವಂಚನೆ ಆರೋಪ ಕೇಳಿಬಂದಿದ್ದು ಭಾರಿ ವಾಹನಗಳನ್ನು ಮುನೇಗೌಡ ಬಾಡಿಗೆಗೆ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ.

ಲಾಜಿಸ್ಟಿಕ್ಸ್ ಸರ್ವೀಸ್ ನಡೆಸುತ್ತಿರುವ ಜೆಡಿಎಸ್ ಅಭ್ಯರ್ಥಿ ಮುನೇಗೌಡ, ಆನೇಕಲ್ ಮಂಜುನಾಥರ ಸುಮುಖ ಎಂಟರ್ ಪ್ರೈಸಸ್ ಮೂಲಕ ಭಾರಿ ವಾಹನ ಬಾಡಿಗೆ ಪಡೆದಿದ್ದರು. ಮುನೇಗೌಡರ ಎಸ್.ವಿ.ಸಿ ರೋಡ್ ಲೈನ್ಸ್ ಸಂಸ್ಥೆಗೆ ಭಾರಿ ವಾಹನ ಗುತ್ತಿಗೆಗೆ ನೀಡಲಾಗಿತ್ತು. ಈ ಹಿನ್ನೆಲೆಯೆಲ್ಲಿ 2020 ಡಿಸೆಂಬರ್ ನಿಂದ 2021ರವರೆಗೆ ಮಂಜುನಾಥ್ ಭಾರಿ ವಾಹನಗಳನ್ನು ಬಾಡಿಗೆಗೆ ಕಳುಹಿಸಿದ್ದರು ಎನ್ನಲಾಗಿದೆ. ಬಾಡಿಗೆಗೆ ಎಂದು ನೀಡಿದ್ದ ವಾಹನಕ್ಕೆ ಮಾಲೀಕ ಮಂಜುನಾಥ್, ಚಾಲಕರ ಸಂಬಳ‌ ಡಿಸೇಲ್‌ ಹಾಕಿಸಿ ವ್ಯವಹಾರ ನಡೆಸಿದ್ದರು. ಆದರೆ ವ್ಯವಹಾರದ 69ಲಕ್ಷ ಬಾಕಿ ಹಣ ಕೊಡದೇ ಮುನೇಗೌಡ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನೊಂದ ವಾಹನ ಮಾಲೀಕ, ಜೆಡಿಎಸ್ ಅಭ್ಯರ್ಥಿ ಮುನೇಗೌಡರಿಗೆ ಕರೆ ಮಾಡಿ “ನನ್ನ ಹಣ ಕೊಡಿ, ಇಲ್ಲಾಂದ್ರೆ ಸಾಯಬೇಕಾದ ಸ್ಥಿತಿ ಇದೆ” ಎಂದು ಮಂಜುನಾಥ್ ಹೇಳಿದಾಗ ಅವಾಚ್ಯವಾಗಿ ನಿಂದಿಸಿ ಧಮ್ಕಿ ಹಾಕಿದ್ದಾರೆ. “ನಾನು ಹಣ ಕೊಡೋದಿಲ್ಲ” ಎಂದು ಅವಾಶ್ಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದೂ ಅಲ್ಲದೇ ಆಡಿಯೋದಲ್ಲಿ “ಬೇಕಾದ್ರೆ ಸಾಯಿ” ಎಂದು ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹೇಳಿರುವುದೂ ಕೇಳಿ ಬಂದಿದೆ.
ಇಷ್ಟೆಲ್ಲಾ ಆದ ಮೇಲೆ ನೊಂದ ಮಂಜುನಾಥ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಬೆಂಗಳೂರು ಗ್ರಾಮಾಂತರ ಎಸ್.ಪಿ.ಗೆ, ಕೇಂದ್ರ ವಲಯ ಐಜಿಪಿಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ನ್ಯಾಯಕ್ಕಾಗಿ ವಂಚನೆಗೊಳಗಾದ ಮಂಜುನಾಥ್ ಆಗ್ರಹಿಸಿದ್ದರು. ಇನ್ನು ಇದೇ ಜೆಡಿಎಸ್ ಅಭ್ಯರ್ಥಿ ಮೊನ್ನೆ ಕಿಡ್ನಾಪ್ ನಾಟಕವಾಡಿ, ಶಾಸಕ ಎಸ್.ಆರ್ ವಿಶ್ವನಾಥ್ ಮೇಲೆ ಆ ಆರೋಪವನ್ನು ಹಾಕಿ ಚುನಾವಣೆ ಗೆಲ್ಲಲು ಷಡ್ಯಂತ್ರ ಮಾಡಿದ್ದ ಆರೋಪ ಕೂಡ ಮೈಮೇಲೆ ಎಳೆದುಕೊಂಡಿದ್ದರು. ಇದೀಗ ವಂಚನೆ ಮಾಡಿ ಧಮ್ಕಿ ಹಾಕಿರುವ ಮುನೇಗೌಡರ ಆಡಿಯೋ ವೈರಲ್ ಆಗಿದೆ ಎನ್ನಲಾಗಿದೆ.

lokesh

Recent Posts

ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಮಂಡ್ಯ: ಜಿಲ್ಲೆಯ ನಾಗಮಂಗಲದ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬಹುಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ…

10 mins ago

ಅಂಡಮಾನ್‌ ಸಮುದ್ರದಲ್ಲಿ ಮುಳುಗಿದ ವಲಸಿಗರಿದ್ದ ದೋಣಿ: 250 ಜನ ಕಣ್ಮರೆ

ಢಾಕಾ: ಭಾರೀ ಬಿರುಗಾಳಿಯಿಂದ ಅಂಡಮಾನ್‌ ಸಮುದ್ರದಲ್ಲಿ ಜನದಟ್ಟಣೆಯಿಂದ ತುಂಬಿದ್ದ ದೋಣಿ ಮುಳುಗಿ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ…

42 mins ago

ಹನೂರು| ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ: ರೈತ ಮುಖಂಡರ ಆಕ್ರೋಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದ ನೀರಿನ…

56 mins ago

ಹನೂರು| ಕುಡಿಯುವ ನೀರಿಗೆ ಹಾಹಾಕಾರ: ಖಾಲಿ ಬಿಂದಿಗೆ ಹಿಡಿದು ಮಹಿಳೆಯರಿಂದ ಪ್ರತಿಭಟನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಹಲವಾರು ದಿನಗಳಿಂದ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡದೆ…

1 hour ago

ಛತ್ತೀಸ್‌ಗಢ ವಿದ್ಯುತ್‌ ಸ್ಥಾವರ ಸ್ಫೋಟ ದುರಂತ: ಸಾವಿನ ಸಂಖ್ಯೆ 14ಕ್ಕೆ ಏರಿಕೆ

ರಾಯಪುರ: ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ವಿದ್ಯುತ್‌ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ…

2 hours ago

ಓದುಗರ ಪತ್ರ: ನಂಜನಗೂಡು ಕೆ.ಹೆಚ್.ಬಿ. ಕಾಲೋನಿ ರಸ್ತೆ ದುರಸ್ತಿ ಮಾಡಿ

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ) ಯಿಂದ ಮನೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಿದ್ದು…

5 hours ago