ನಾನ.. ನೀವೊ.. ಬನ್ನಿ ಮತ್ತೆ! ಬೈಕ್‌ ಸವಾರರಿಗೆ ಸಲಗ ಚಾಲೆಂಜ್

ಗುಂಡ್ಲುಪೇಟೆ: ಬಂಡೀಪುರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 212ರ ಊಟಿ ರಸ್ತೆಯಲ್ಲಿ ಸಲಗವೊಂದು ದ್ವಿಚಕ್ರ ವಾಹನಗಳ ಸವಾರರ ಮೇಲೆ ದಾಳಿಗೆ ಯತ್ನಿಸಿದೆ.

ಎರಡು ಬೈಕ್‌ಗಳಿದ್ದ ನಾಲ್ವರು ಸ್ವಲ್ಪದರಲ್ಲಿ ಭಾನುವಾರ ಪಾರಾಗಿದ್ದು, ಈ ಘಟನೆಯ ವಿಡಿಯೊ ವೈರಲ್‌ ಆಗಿದೆ. ಸಲಗ ರಸ್ತೆ ಬದಿಯಲ್ಲಿ ಮೇಯುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಬಂದ ಸವಾರರು ನಿಧಾನವಾಗಿ ಮುಂದಕ್ಕೆ ಹೋಗಲು ಯತ್ನಿಸಿದ್ದಾರೆ.

ಕೂಡಲೇ ಬೈಕ್‌ಗಳತ್ತ ನುಗ್ಗಿ ದಾಳಿ ನಡೆಸಲು ಆನೆ ಯತ್ನಿಸಿದೆ. ಎಚ್ಚೆತ್ತ ಸವಾರರನ್ನು ಸ್ವಲ್ಪ ದೂರ ಹಿಂಬಾಲಿಸಿದ ಸಲಗ ನಂತರ ರಸ್ತೆಯ ಮಧ್ಯೆ ನಿಲ್ಲಲ್ಪಟ್ಟಿದೆ.

× Chat with us