ಪುನೀತ್ ನಿಧನಕ್ಕೆ ಅಮಿತಾಭ್ ಬಚ್ಚನ್ ಸಂತಾಪ

ಮುಂಬೈ: ಸ್ಯಾಂಡಲ್‌ವುಡ್ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಬಾಲಿವುಡ್ ಮೆಗಾ ಸ್ಟಾರ್ ಅಮಿತಾಭ್ ಬಚ್ಚನ್ ಸಂತಾಪ ಸೂಚಿಸಿದ್ದಾರೆ.

ಟ್ವೀಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿರುವ ಬಿಗ್-ಬಿ, ಪುನೀತ್ ಪ್ರತಿಭಾವಂತ ನಟರಾಗಿದ್ದರು. ಅವರು ಹಠಾತ್ ನಿಧನ ಚಿತ್ರರಂಗಕ್ಕೆ ಕರಾಳ ದಿನವಾಗಿದೆ ಎಂದು ಬಚ್ಚನ್ ದು:ಖಿಸಿದ್ದಾರೆ. ಪುನೀತ್ ಅವರ ನಿಧನದಿಂದ ಸಿನಿಮಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬಚ್ಚನ್ ಹೇಳಿದ್ದಾರೆ.

ಅಮಿತಾಭ್ ಬಚ್ಚನ್ ಕೌನ್ ಬನೇಗಾ ಕರೋಡ್‌ಪತಿ ರಿಯಾಲಿಟಿ ಗೇಮ್ ಶೋ ಸಾರಥ್ಯ ವಹಿಸಿದ್ದರೆ, ಪವರ್‌ಸ್ಟಾರ್ ಪುನೀತ್ ರಾಜಕುಮಾರ ಕನ್ನಡದ ಕೋಟ್ಯಧಿಪತಿ ಶೋನಲ್ಲಿ ಹೋಸ್ಟ್ ಆಗಿ ಗಮನ ಸೆಳೆದಿದ್ದರು.

× Chat with us