ಅಮೆರಿಕ ಅಧ್ಯಕ್ಷೀಯ ಚುನಾವಣೆ; ಬಾಹ್ಯಾಕಾಶದಿಂದಲೂ ಮತಚಲಾವಣೆ!

ವಾಷಿಂಗ್ಟನ್: ಜಗತ್ತಿನೆಲ್ಲೆಡೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಚುನಾವಣೆಯಲ್ಲಿ ಮತಗಟ್ಟೆಗೆ ತೆರಳಿ ಮತ ಚಾಲಾಯಿಸುವುದನ್ನು ನೋಡಿರುತ್ತೀರಿ. ಇಲ್ಲವೇ ಮೇಲ್‌-ಇನ್‌ ಬ್ಯಾಲೆಟ್‌ ವಿಧಾನದ ಮತದಾನದ ಬಗ್ಗೆ ತಿಳಿದಿರುತ್ತೀರಿ. ಆದರೆ, ಬಾಹ್ಯಾಕಾಶದಿಂದ ಮತ ಚಲಾಯಿಸುವ ವಿಧಾನ ನೋಡಿದ್ದೀರಾ?

ಹೌದು, ತಂತ್ರಜ್ಞಾನ ಯುಗದಲ್ಲಿ ಅದು ಕೂಡ ಸಾಧ್ಯ. ಬಾಹ್ಯಾಕಾಶದಿಂದ ಮತದಾನ ಹಕ್ಕು ಚಲಾಯಿಸಲು ಅಮೆರಿಕದ ಕಾನೂನು ಅವಕಾಶ ಮಾಡಿಕೊಟ್ಟಿದೆ. ಅದರಂತೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ)ದ ಗಗನ ಯಾತ್ರಿ ಕೇಟ್‌ ರೂಬಿನ್ಸ್‌ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪೋಲಿಂಗ್‌ ಬೂತ್‌ನಿಂದ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಅವರು ಎರಡನೇ ಬಾರಿ ಮತ ಚಲಾಯಿಸಿದ್ದಾರೆ ಎಂಬುದು ಮತ್ತೊಂದು ವಿಶೇಷ. ರೂಬಿನ್ಸ್‌ ಅವರು 2016ರಲ್ಲಿಯೂ ಕೂಡ ಐಎಸ್‌ಎಸ್‌ನಲ್ಲಿ ಇದ್ದಾಗ ಇದೇ ರೀತಿ ಮತ ಚಲಾಯಿಸಿದ್ದರು.

ಮತ ಚಲಾಯಿಸುವ ಮುನ್ನ ಗಗನಯಾತ್ರಿಗಳು ಇದಕ್ಕಾಗಿ ನೋಂದಾಯಿಸಿಕೊಳ್ಳಬೇಕು.

ನಾಸಾ ಗಗನಯಾತ್ರಿ ಡೇವಿಡ್‌ ವುಲ್ಫ್‌ 1997ರಲ್ಲಿ ಮಿರ್‌ ಬಾಹ್ಯಾಕಾಶ ಕೇಂದ್ರದಿಂದ ಮತ ಚಲಾಯಿಸಿ, ಬಾಹ್ಯಾಕಾಶದಿಂದ ಮತ ಚಲಾಯಿಸಿದ ಮೊದಲ ಅಮೆರಿಕನ್‌ ಎಂಬ ದಾಖಲೆ ಬರೆದಿದ್ದಾರೆ.

× Chat with us