ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ನಿಗದಿಯಾದ ಜಾಗದಲ್ಲಿ ತಲೆ ಎತ್ತುತ್ತಿದೆ ಅಕ್ರಮ ಮಳಿಗೆ!

ಮೈಸೂರು: ಇಲ್ಲಿನ ಎಚ್‌.ಡಿ.ಕೋಟೆ ಮುಖ್ಯರಸ್ತೆಯಲ್ಲಿರುವ, ಗುಜ್ಜೆಗೌಡನಪುರದಲ್ಲಿ ʻಅಂಬೇಡ್ಕರ್‌ ಭವನ ನಿರ್ಮಾಣಕ್ಕೆಂದು ಗ್ರಾಮಸ್ಥರೇ ಮೀಸಲಿಟಿದ್ದ ಜಾಗದಲ್ಲಿ ಅಕ್ರಮವಾಗಿ ಮಳಿಗೆಯೊಂದು ತಲೆ ಎತ್ತುತ್ತಿದೆʼ ಎಂದು ಆಗ್ರಹಿಸಿ ಗ್ರಾಮಸ್ಥರೇ ಸೇರಿ ಪ್ರತಿಭಟನೆ ನಡೆಸಿದರು.

ಗುಜ್ಜೆಗೌಡನ ಪುರದಲ್ಲಿ ೧೯೯೬ರಲ್ಲಿ 55*33 ಸ್ಥಳಾವಕಾಶವನ್ನು ಅಂಬೇಡ್ಕರ್‌ ಭವನ ನಿರ್ಮಾಣಕ್ಕೆಂದೇ ಮೀಸಲಿಡಲಾಗಿತ್ತು. ಗ್ರಾಮಸ್ಥರೆಲ್ಲರೂ ಸಹಿ ಮಾಡಿ, ಎಲ್ಲರಿಗೂ ಒಂದೊಂದು ಪ್ರತಿ ನೀಡಲಾಗಿತ್ತು. ಆದರೆ, ಅಂದು ಗ್ರಾಪಂ ಸದಸ್ಯರಾಗಿದ್ದ ಖ್ಯಾತಯ್ಯ ಎಂಬವರು ಸಹಿ ಪತ್ರವನ್ನು ದುರುಪಯೋಗ ಮಾಡಿಕೊಂಡಿದ್ದು, 1999ರಲ್ಲಿ ತಮ್ಮ ಹೆಸರಿಗೆ ಈ ಸ್ಥಳವನ್ನು ಖಾತೆ ಮಾಡಿಸಿಕೊಂಡಿದ್ದಾರೆ. ನಂತರ 2012-13ರ ಅವಧಿಯಲ್ಲಿ ಪಿಡಿಒಗೆ ಅಧಿಕೃತ, ಮೂಲ ದಾಖಲಾತಿ ನೀಡದೇ ಖಾತೆಗೆ ಡಿಮ್ಯಾಂಡ್‌ ಕೂರಿಸಿದ್ದಾರೆ. ಪಿಡಿಒ ಮೂಲದಾಖಲಾತಿ ಕೇಳಿದರೂ ಕೊಡದೇ ತಕರಾರು ಮಾಡುತ್ತಿದ್ದು, ಇದೀಗ ಅಕ್ರಮವಾಗಿ ಮಳಿಗೆ ನಿಮಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಪಿ.ರವಿಚಂದ್ರ ಒತ್ತಾಯಿಸಿದರು.

× Chat with us