ದುಬೈ (ಯುಎಇ): ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೇರಿ 10 ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರು (ಎನ್.ಆರ್.ಐ) ಸದ್ಯದಲ್ಲೇ ಅಲ್ಲಿ ತಾವು ಬಳಸುವ ವಿದೇಶಿ ಮೊಬೈಲ್ ಸಂಖ್ಯೆಗಳ ಮೂಲಕ ಅಥವಾ ತಾವು ಬಳಸುತ್ತಿರುವ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳ ಮೂಲಕ, ಭಾರತದಲ್ಲಿ ಬಳಕೆಯಲ್ಲಿರುವ ಯೂನಿಫೈಡ್ ಪೇಮೆಂಟ್ ಇಂಟರ್ ಫೇಸ್ (ಯುಪಿಐ) ಆ್ಯಪ್ ಗಳಲ್ಲಿ ನೋಂದಾಯಿಸಿಕೊಂಡು ಹಣ ವ್ಯವಹಾರಗಳನ್ನು ನಡೆಸುವ ಅನುಕೂಲ ಸಿಗಲಿದೆ. 2023ರ ಏ. 30ರಿಂದ ಈ ಸೌಲಭ್ಯ ಜಾರಿಗೆ ಬರಲಿದೆ.
ಈ ಕುರಿತಂತೆ, ಯುಪಿಐ ಅಭಿವೃದ್ಧಿಪಡಿಸಿರುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ಸಂಸ್ಥೆಯು ಪ್ರಕಟಣೆಯನ್ನು ನೀಡಿದ್ದು, ಯುಎಇ ಸೇರಿ ವಿಶ್ವದ 10 ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರು, ತಾವು ಬಳಸುವ ಎನ್ಆರ್ ಇ (Non-Resident External account) ಅಥವಾ ಎನ್ ಆರ್ ಒ (Non-Resident Ordinary account) ಮಾದರಿಯ ಬ್ಯಾಂಕ್ ಖಾತೆಗಳಿಗೆ ಜೋಡಿಸಲ್ಪಟ್ಟಿರುವ ಆ ದೇಶಗಳ ಮೊಬೈಲ್ ನಂಬರ್ ಗಳು ಅಥವಾ ಅಂತಾರಾಷ್ಟ್ರೀಯ ಮೊಬೈಲ್ ನಂಬರ್ ಗಳನ್ನು ಬಳಸಿ ಯುಪಿಐ ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಆ ನಂಬರ್ ಗಳನ್ನು ಬಳಸಿಯೇ ಹಣದ ವಹಿವಾಟು ನಡೆಸಬಹುದು ಎಂದು ಹೇಳಿದೆ.
ಹೊಂದಿರುವ ಬ್ಯಾಂಕ್ ಖಾತೆ ಅಥವಾ ಅಲ್ಲಿ ಅವರು ಪಡೆದಿರುವ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ರಿಜಿಸ್ಟರ್ ಆಗಲು ಅವಕಾಶವಿತ್ತು. ಅವರಿಗೆ, ಫೋನ್ ನಂಬರ್ ಗಳನ್ನು ಯುಪಿಐನಡಿ ನೊಂದಾಯಿಸಿಕೊಂಡು, ಭಾರತದಲ್ಲಿ ಬಳಸುವ ಹಾಗೆ, ‘ಫೋನ್ ನಂಬರ್ ನಿಂದ ಫೋನ್ ನಂಬರಿಗೆ’ ಹಣ ಕಳಿಸುವಂಥ ವ್ಯವಸ್ಥೆಯು ಅವರಿಗೆ ಇರಲಿಲ್ಲ. ಈಗ ಕೇಂದ್ರ ಸರ್ಕಾರ ಕೈಗೊಂಡಿರುವ ಹೊಸ ಕ್ರಮದಿಂದಾಗಿ, ಅನಿವಾಸಿ ಭಾರತೀಯರು ತಮ್ಮ ಫೋನ್ ನಂಬರ್ ಗಳನ್ನು ಯುಪಿಐ ಅಡಿಯಲ್ಲಿ ನೋಂದಾಯಿಸಿ ಬಳಸಬಹುದಾಗಿದೆ.’ಕೆವೈಸಿಯಲ್ಲಿ ಅಪ್ಡೇಡ್ ಮಾಡಬಹುದು’
ಈ ಕುರಿತಂತೆ, ದುಬೈನಲ್ಲಿರುವ ದ ಟ್ಯಾಕ್ಸ್ ಎಕ್ಸ್ ಪರ್ಟ್ಸ್ ಡಿಎಂಸಿಸಿ ಎಂಬ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ದೀಕ್ಷಿತ್ ಜೈನ್ ಅವರು ವಿವರಣೆ ನೀಡಿ, “ಈವರೆಗೆ ಯುಎಇಯಲ್ಲಿರುವ ಅನಿವಾಸಿ ಭಾರತೀಯರು ತಮ್ಮ ಯುಪಿಐ ಖಾತೆಗಳಿಗೆ ಯುಎಇನಲ್ಲಿ ತಾವು ಹೊಂದಿರುವ ಬ್ಯಾಂಕ್ ಖಾತೆಗಳ ಸಂಖ್ಯೆಗಳನ್ನು ರಿಜಿಸ್ಟರ್ ಮಾಡಿ ಡಿಜಿಟಲ್ ಪೇಮೆಂಟ್ ನಡೆಸುತ್ತಿದ್ದರು. ಅಂಥವರು ಇನ್ನು ಮುಂದೆ ತಮ್ಮ ಯುಎಇ ಫೋನ್ ನಂಬರ್ ಗಳನ್ನು ರಿಜಿಸ್ಟರ್ ಮಾಡಿ ಅದರ ಮೂಲಕ ಹಣದ ವ್ಯವಹಾರ ನಡೆಸಬಹುದಾಗಿದೆ. ಈಗಾಗಲೇ ಯುಪಿಐನಡಿ ರಿಜಿಸ್ಟರ್ ಮಾಡಿಸಿಕೊಂಡಿರುವಂಥವರು ತಾವು ಬಳಸುತ್ತಿರುವ ಯುಪಿಐ ಆ್ಯಪ್ ಗಳಾದ ಫೋನ್ ಪೇ, ಪೇಟಿಯಂಗಳ ಕೆವೈಸಿ (Know Your Customer) ವಿಭಾಗದಲ್ಲಿ ತಮ್ಮ ಫೋನ್ ನಂಬರ್ ಗಳನ್ನು ಅಪ್ಡೇಟ್ ಮಾಡಬಹುದು” ಎಂದು ಹೇಳಿದ್ದಾರೆ.
ಈ ಸೌಲಭ್ಯ ಪಡೆದ 10 ರಾಷ್ಟ್ರಗಳು ಯಾವುವು?
ಯುಎಇ, ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ, ಹಾಂಕ್ ಕಾಂಗ್, ಒಮನ್, ಕತಾರ್, ಯುಎಸ್ ಎ, ಸೌದಿ, ಯುನೈಟೆಡ್ ಕಿಂಗ್ ಡಮ್ ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರಿಗೆ ಏ. 30ರಿಂದ ಈ ಸೌಲಭ್ಯ ಸಿಗಲಿದೆ.