ವಿಮಾನ ಸಂಚಾರ ಆರಂಭಿಸಲು ಭಾರತಕ್ಕೆ ತಾಲಿಬಾನ್ ಮನವಿ

ಹೊಸದಿಲ್ಲಿ :ಅಫ್ಘಾನಿಸ್ತಾನ ಹಾಗೂ ಭಾರತದ ನಡುವೆ ವಿಮಾನ ಸಂಚಾರವನ್ನು ಆರಂಭಿಸಬೇಕೆಂದು ತಾಲಿಬಾನ್ ಸರ್ಕಾರ ಭಾರತದ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದೆ.

ಅಫ್ಘಾನಿಸ್ತಾನದ ವಿಮಾನಯಾನ ಸಚಿವ ಅಲ್ಹಜ್ ಹಮೀದುಲ್ಲ ಅಖುಂದ್‌ಜಾದ, ಅಫ್ಘಾನಿಸ್ತಾನ ಹಾಗೂ ಭಾರತದ ನಡುವಿನ ವಿಮಾಣ ಸಂಚಾರವನ್ನು ಮರು ಆರಂಭಿಸುವಂತೆ ವಿಮಾನಯಾನ ಸಚಿವಾಲಯದ ನಿರ್ದೇಶಕ ಅರುಣ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ತಾಲಿಬಾನ್ ವಕ್ತಾರ ಅಬ್ದುಲ್ ಖಾಹರ್ ಬಲ್‌ಕ್ಷಿ ಕೂಡ ಪ್ರತಿಕ್ರಿಯೆ ನೀಡಿದ್ದು, ಈಗ ಕಾಬೂಲ್ ವಿಮಾನ ನಿಲ್ದಾಣದಲ್ಲಿದ್ದ ತೊಂದರೆ ನಿವಾರಣೆಯಾಗಿದ್ದು, ವಿಮಾನಗಳು ಹಾರಾಟ ನಡೆಸುತ್ತಿವೆ. ಹೀಗಾಗಿ, ಭಾರತವೂ ಅಫ್ಘಾನ್‌ಗೆ ವಿಮಾನ ಸಂಚಾರವನ್ನು ಆರಂಭಿಸಿದರೆ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ ಎಂದಿದ್ದಾರೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಭಾರತದ ಜೊತೆ ಸಂವಹನ ನಡೆಸಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ದಾಳಿ ವೇಳೆ ಸಿಲುಕಿದ್ದ ಭಾರತೀಯರನ್ನು ಕರೆತರಲು ಭಾರತದಿಂದ ಕಾಬೂಲ್ ವಿಮಾನ ನಿಲ್ದಾಣಕ್ಕೆ ವಿಮಾನವನ್ನು ಕಳುಹಿಸಲಾಗಿತ್ತು. ಅದಾದ ಬಳಿಕ ಮತ್ತೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

× Chat with us