BREAKING NEWS

ಎನ್‌ಡಿಎ ಮೈತ್ರಿ ಕೂಟದಿಂದ ಹೊರನಡೆದ ಎಐಎಡಿಎಂಕೆ

ಚೆನ್ನೈ: ತಮಿಳುನಾಡಿನಲ್ಲಿ ಎಐಡಿಎಂಕೆಯೂ ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡಿದ್ದು, ಲೋಕಸಭಾ ಚುನಾವಣೆಗೂ ಮುನ್ನವೇ ಕಮಲ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.

ದಕ್ಷಿಣ ಭಾರತದಲ್ಲಿ ತನ್ನ ವಿಜಯಪತಾಕೆ ಹಾರಿಸಲು ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿಗೆ, ತಮಿಳುನಾಡಿನಲ್ಲಿ ನಡೆದ ವಿದ್ಯಮಾನದಿಂದಾಗಿ ಹಿನ್ನಡೆ ಅನುಭವಿಸಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಸಿ. ಎನ್. ಅಣ್ಣಾದುರೈ ಅವರ ಬಗ್ಗೆ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರಿಗೆ ಅಪಾರ ಗೌರವ ಇದೆ. ಏಕೆಂದರೆ, ಎಐಎಡಿಎಂಕೆ ಸಂಸ್ಥಾಪಕ ಎಂ. ಜಿ. ರಾಮಚಂದ್ರನ್ ಅವರಿಗೆ ಅಣ್ಣಾದುರೈ ಮಾರ್ಗದರ್ಶಕರು. ಇಂಥಾ ನಾಯಕರ ಬಗ್ಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಬೇಸರಗೊಂಡಿದ್ದ ಎಐಎಡಿಎಂಕೆ ಜೊತೆ ಬಿಜೆಪಿ ನಡೆಸಿದ ಸಂಧಾನ ವಿಫಲವಾಗಿದ್ದು, ಮೈತ್ರಿ ಮುರಿದು ಬಿದ್ದಿದೆ.

ಬಿಜೆಪಿ ಮಿತ್ರ ಪಕ್ಷವಾಗಿದ್ದ ಎಐಎಡಿಎಂಕೆ, ಚೆನ್ನೈನಲ್ಲಿ ಇರುವ ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಸಂಸದರು, ಶಾಸಕರು ಹಾಗೂ ಜಿಲ್ಲಾ ಪ್ರಮುಖರ ಸಭೆ ನಡೆಯಿತು. ಈ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಯ್ತು ಎಂದು ಎಐಎಡಿಎಂಕೆ ಸಂಘಟನಾ ಕಾರ್ಯದರ್ಶಿ ಡಿ.ಜಯಕುಮಾರ್ ತಿಳಿಸಿದ್ದಾರೆ.

ಎನ್‌ಡಿಎ ಮೈತ್ರಿ ಕೂಟದಿಂದ ಎಐಎಡಿಎಂಕೆ ಹೊರಬರಲು ನಿರ್ಣಯ ಕೈಗೊಳ್ಳುತ್ತಿದ್ದಂತೆಯೇ ಪಕ್ಷದ ಕಚೇರಿ ಹೊರಗೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅಲ್ಲದೆ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ, ದ್ರಾವಿಡಿಯನ್ ನೇತಾರ ಸಿ ಎನ್ ಅಣ್ಣಾದೊರೈ ಕುರಿತಂತೆ ನೀಡಿದ್ದ ಹೇಳಿಕೆಯನ್ನು ಖಂಡಿಸಿ ನಿರ್ಣಯವನ್ನು ಕೈಗೊಂಡಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಎಡಿಎಂಕೆ ಸಂಘಟನಾ ಕಾರ್ಯದರ್ಶಿ ಡಿ.ಜಯಕುಮಾರ್,ಬಿಜೆಪಿಯೊಂದಿಗೆ ಈಗ ಯಾವುದೇ ಮೈತ್ರಿ ಇಲ್ಲ ಎಂಬುದು ಪಕ್ಷದ ನಿಲುವು ಎಂದು ಪ್ರತಿಪಾದಿಸಿದರು.

2026ರಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂಬ ಅಣ್ಣಾಮಲೈ ಅವರ ಪ್ರತಿಪಾದನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಯಕುಮಾರ್, ಈಗಾಗಲೇ ಅಣ್ಣಾಮಲೈ ಅವರು ಅಮ್ಮ (ಜೆ ಜಯಲಲಿತಾ) ಅವರನ್ನು ಟೀಕಿಸಿದ್ದಾರೆ ಮತ್ತು ಎಐಎಡಿಎಂಕೆ ಪಕ್ಷದ ಸಭೆಯಲ್ಲಿ ಅವರ ವಿರುದ್ಧ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಹೇಳಿದರು.

ಕೆಲವು ದಿನಗಳ ಹಿಂದೆ ಅಣ್ಣಾಮಲೈ ಅವರು ಅರಿಗ್ನಾರ್ ಅಣ್ಣಾ ಅವರನ್ನು ಕೀಳಾಗಿ ಟೀಕಿಸಿದ್ದರು.

ಪೆರಿಯಾರ್ ಅವರ ವಿರುದ್ಧವೂ ಹೇಳಿಕೆ ನೀಡಿದ್ದರು. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಹೇಗೆ ಮುಖ್ಯಮಂತ್ರಿಯಾದರು ಎಂಬಿತ್ಯಾದಿ ಅಂಶಗಳ ಕುರಿತು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದರು. ಇದು ಮೈತ್ರಿಧರ್ಮದ ಪಾಲನೆಯಲ್ಲ. ಎಐಎಡಿಎಂಕೆ ಕಾರ್ಯಕರ್ತರು ಅವರ ಈ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ ಎಂದು ಜಯಕುಮಾರ್ ಹೇಳಿದ್ದಾರೆ.

ಅಣ್ಣಾಮಲೈ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅನರ್ಹರು. ಅವರು ಬಿಜೆಪಿಗಿಂತ ಹೆಚ್ಚಾಗಿ ತಮ್ಮನ್ನು ತಾವು ಬಿಂಬಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಅಣ್ಣಾಮಲೈ ಯಾವ ಕಾರಣಕ್ಕೆ ಪೊಲೀಸ್ ಕೆಲಸ ಬಿಟ್ಟಾರೋ ಗೊತ್ತಿಲ್ಲ. ಆ ಬಗ್ಗೆ ಕೆದಕಿದರೆ ಮಾತ್ರ ಗೊತ್ತಾಗುತ್ತದೆ. ಅಣ್ಣಾಮಲೈ ನೀಚ ಮನಸ್ಸಿನ ವ್ಯಕ್ತಿ. ಅಣ್ಣಾಮಲೈ ಏಕಾಂಗಿಯಾಗಿ ಸ್ಪರ್ಧಿಸಿದರೆ ನೋಟಾಕ್ಕಿಂತ ಕಡಿಮೆ ಮತಗಳನ್ನು ಪಡೆಯುತ್ತಾರೆ ಎಂದು ಕಿಡಿಕಾರಿದರು.

ನಾವು ಅಣ್ಣಾಮಲೈ ಅವರನ್ನು ವಿರೋಧಿ ಹೇಳಿಕೆಗಳನ್ನು ನಿಲ್ಲಿಸುವಂತೆ ಹಲವು ಬಾರಿ ಎಚ್ಚರಿಸಿದ್ದೇವೆ. ಆದರೆ ಅವರು ನಿಲ್ಲಿಸುತ್ತಿಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಇನ್ನು ಮುಂದೆ ಎಐಎಡಿಎಂಕೆ ಐಟಿ ವಿಂಗ್‌ನವರು ಅಣ್ಣಾಮಲೈ ಅವರನ್ನು ಬಲವಾಗಿ ಟೀಕಿಸುತ್ತಾರೆ. ಬಿಜೆಪಿ ಕಾರ್ಯಕರ್ತರು ಎಐಎಡಿಎಂಕೆ ಜೊತೆ ಮೈತ್ರಿ ಮುಂದುವರಿಸಲು ಬಯಸುತ್ತದೆ. ಆದರೆ ಅಣ್ಣಾಮಲೈ ಈ ಮೈತ್ರಿಯನ್ನು ಇಷ್ಟಪಡಲಿಲ್ಲ. ಮೈತ್ರಿ ಪಕ್ಷದ ನಾಯಕರ ಬಗ್ಗೆ ಅಣ್ಣಾಮಲೈ ಇಂತಹ ಟೀಕೆಗಳನ್ನು ಮುಂದುವರಿಸಿದರೆ, ಚುನಾವಣೆಯ ಸಮಯದಲ್ಲಿ ಎಐಎಡಿಎಂಕೆ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರೊಂದಿಗೆ ಹೇಗೆ ಕೆಲಸ ಮಾಡುತ್ತಾರೆ? ಅಣ್ಣಾಮಲೈ ಅವರ ಈ ಎಲ್ಲಾ ಅನಗತ್ಯ ಹೇಳಿಕೆಗಳನ್ನು ಸಹಿಸಿಕೊಂಡು ಎಐಎಡಿಎಂಕೆ ಬಿಜೆಪಿಯನ್ನು ಕೊಂಡೊಯ್ಯುವ ಅವಶ್ಯಕತೆ ಏನು? ಬಿಜೆಪಿಗೆ ಲಾಭವಾಗುವುದಿಲ್ಲ. ನಿಮ್ಮ ಮತಬ್ಯಾಂಕ್ ನಮಗೆ ಗೊತ್ತಿರುವುದರಿಂದ ತಮಿಳುನಾಡಿನಲ್ಲಿ ನೆಲೆಯೂರಿದೆ. ಎಐಎಡಿಎಂಕೆ ಬಿಜೆಪಿಯ ಗುರುತಾಗಿದೆ ಎಂದು ಅವರು ಹೇಳಿದರು.

ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷರಾಗಿರಲು ನಾಲಾಯಕ್. ತಮ್ಮನ್ನು ತಾವು ಬಿಂಬಿಸಿಕೊಳ್ಳಲು ನಿಧನರಾಗಿರುವ ನಾಯಕರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದಕ್ಕೂ ಮುನ್ನ ಎಐಎಡಿಎಂಕೆಯ ಅಧಿನಾಯಕಿ ದಿ. ಜೆ.ಜಯಲಲಿತಾ ಕುರಿತು ಅಣ್ಣಾಮಲೈ ನೀಡಿದ್ದ ಹೇಳಿಕೆಯು ಜೂನ್ ತಿಂಗಳಲ್ಲಿ ಮೈತ್ರಿ ಮುರಿದು ಬೀಳುವ ಹಂತಕ್ಕೆ ತಂದು ನಿಲ್ಲಿಸಿತ್ತು.

ಆ ಸಮಯದಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದರಿಂದ ದೂರ ಉಳಿಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ನಮ್ಮ ಪಕ್ಷವು ಆಗ್ರಹಿಸಿತ್ತು. ಮಾಜಿ ಮುಖ್ಯಮಂತ್ರಿಗೆ ಎಸಗುವ ಯಾವುದೇ ಅವಮಾನವನ್ನು ಪಕ್ಷದ ಕಾರ್ಯಕರ್ತರು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.

ಎಐಎಡಿಎಂಕೆ ಪಕ್ಷದ ಈ ನಿಲುವಿಗೆ ಬಿಜೆಪಿ ನಾಯಕ ಎಂ. ಚಕ್ರವರ್ತಿ ಭಿನ್ನ ನಿಲುವು ವ್ಯಕ್ತಪಡಿಸಿದ್ದಾರೆ. ಅಣ್ಣಾಮಲೈ ಅವರು ಸನಾತನ ಧರ್ಮದ ವಿಚಾರದ ಚರ್ಚೆ ವೇಳೆ ಅಣ್ಣಾದುರೈ ಅವರ ಬಗ್ಗೆ ಮಾತನಾಡಿದ್ದರು. ಈ ವೇಳೆ ಎಐಎಡಿಎಂಕೆ ಪಕ್ಷವನ್ನು ಟೀಕೆ ಮಾಡಿರಲಿಲ್ಲ ಎಂದು ಸಮರ್ಥನೆ ನೀಡಿದ್ದಾರೆ. ಆದರೆ, ಅಣ್ಣಾಮಲೈ ಅವರ ಹೇಳಿಕೆ ಹೊರಬಿದ್ದ ಬಳಿಕ ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಕಳೆದ ವಾರವೇ ಮುರಿದು ಹೋಗಿತ್ತು. ಎಐಎಡಿಎಂಕೆ ನಾಯಕರು ಅದಾಗಲೇ ಮೈತ್ರಿ ಮುರಿದುಕೊಳ್ಳುವ ಘೋಷಣೆ ಮಾಡಿದ್ದರು.

ಈ ಹಿಂದೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಮಾಜಿ ಸಿಎಂ ಜಯಲಲಿತಾ ಅವರ ಕುರಿತಾಗಿಯೂ ಆಕ್ಷೇಪಾರ್ಹ ಹೇಳಿಕೆ ನೀಡಿ ಎಐಎಡಿಎಂಕೆ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.

andolanait

Recent Posts

ಗುಂಡ್ಲುಪೇಟೆ | ಉಪಟಳ ನೀಡುತಿದ್ದ ಹುಲಿ ಸೆರೆ ; ಮತ್ತೊಂದು ದರ್ಶನ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು…

9 hours ago

ಬೆಳ್ತಂಗಡಿ | ಮಹೇಶ್‌ ಶೆಟ್ಟಿ ತಿಮರೋಡಿ ಮತ್ತೆ ಗಡಿಪಾರು

ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಆದೇಶ…

9 hours ago

ಲೋಕಸಭೆ | ವಿಭಾ ಜಿರಾಮ್‌ ಮಸೂದೆ ಅಂಗೀಕಾಋ : ಪ್ರತಿಪಕ್ಷಗಳಿಂದ ಪ್ರತಿ ಹರಿದು ಆಕ್ರೋಶ

ಹೊಸದಿಲ್ಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ‘ಮನ್ರೇಗಾ ಯೋಜನೆ’(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ…

9 hours ago

ಸಿಎಂ ಕುಟುಂಬ ನಿವೇಶನ ಪಡೆದ ಪ್ರಕರಣ : ಡಿ.23ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಈಗ ಎಂಡಿಎ)ದಿಂದ ಕಾನೂನು ಬಾಹಿರವಾಗಿ…

9 hours ago

ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ : ಉಭಯ ದೇಶಗಳಿಗೂ ಶಕ್ತಿ ; ಮೋದಿ ಬಣ್ಣನೆ

ಒಮಾನ್ : ಭಾರತ ಮತ್ತು ಒಮಾನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವಿಶ್ವಾಸ…

10 hours ago

ನೇಮಕಾತಿ ವಿಳಂಬ | ಪ್ರತಿಧ್ವನಿಸಿದ ಪ್ರತಿಭಟನೆಗಳು

ಬೆಳಗಾವಿ : ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದವು. ಪ್ರತಿಪಕ್ಷದ ನಾಯಕ ಆರ್.ಅಶೋಕ್…

10 hours ago