ತಾಲಿಬಾನ್‌ಗೆ ಶರಣಾಯ್ತು ಆಫ್ಗಾನಿಸ್ತಾನ ಸರ್ಕಾರ

ಕಾಬೂಲ್: ಹಿಂಸಾಚಾರ ಪೀಡಿತ ಆಫ್ತಾನಿಸ್ತಾನದಲ್ಲಿ ಬಿಗಿ ಹಿಡಿತದ ಪ್ರಾಬಲ್ಯ ಮುಂದುವರಿಸಿರುವ ತಾಲಿಬಾನ್ ಉಗ್ರರಿಗೆ ಸರ್ಕಾರ ಅಧಿಕೃತವಾಗಿ ಶರಣಾಗಿದ್ದು, ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸಿದೆ ಎಂದು ಮಾಧ್ಯಮ ವರಿಗಳು ತಿಳಿಸಿವೆ. 20 ವರ್ಷಗಳ ಬಳಿಕ ತಾಲಿಬಾನ್ ಮತ್ತೆ ದೇಶದ ಅಧಿಕಾರ ವಶಪಡಿಸಿಕೊಂಡಿದೆ.

ರಾಜಧಾನಿ ಕಾಬೂಲ್ ನಗರವನ್ನು ತಾಲಿಬಾನ್ ಉಗ್ರರು ಸುತ್ತುವರಿದಿದ್ದು, ಸಂಘರ್ಷವಿಲ್ಲದೇ ರಾಜಧಾನಿ ಬಂಡುಕೋರರ ವಶವಾಗಿದೆ.

ಕಾಬೂಲ್, ದೇಶದ 2ನೇ ಅತಿದೊಡ್ಡ ನಗರ ಕಂದಾಹಾರ್, ೩ನೇ ಬೃಹತ್ ನಗರಿ ಹೆರಾತ್, ಜಲಾಲಾಬಾದ್, ಲಷ್ಕರ್ ಗಾಹ್, ಘಜ್ನಿ ಸೇರಿದಂತೆ ಆಫ್ಭಾನಿಸ್ತಾನವನ್ನು ಬಂಡುಕೋರರು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ಧಾರೆ.

ದೇಶದ 34 ಪ್ರಾಂತ್ಯಗಳಲ್ಲಿ ಎಲ್ಲ ಪ್ರದೇಶಗಳ ಮೇಲೆ ಸಂಪೂರ್ಣ ಹತೋಟಿ ಸಾಧಿಸಿರುವ ತಾಲಿಬಾನಿಗಳು ಅಧಿಕಾರ ಗದ್ದುಗೇರಲು ತವಕಿಸುತ್ತಿದ್ದಾರೆ.

× Chat with us