ನವದೆಹಲಿ: ಸೂರ್ಯನ ಅಧ್ಯಯನಕ್ಕಾಗಿ ಉಡಾವಣೆಯಾಗಿದ್ದ ಆದಿತ್ಯ ನೌಕೆ ನಿಗದಿತ ಎಲ್-1 ಪಾಯಿಂಟ್ ತಲುಪುವಲ್ಲಿ ಯಶಸ್ವಿಯಾಗಿದೆ. ಈ ಸಂಬಂಧ ಇಸ್ರೋ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಂದ್ರಯಾನ-3 ರ ಬಳಿಕ ಇಸ್ರೋದ ಮಹತ್ತರ ಸಾಧನೆ ಇದಾಗಿದೆ. ಆದಿತ್ಯ ನೌಕೆ ಸೂರ್ಯನ ಅಧ್ಯಯನ ಆರಂಭಿಸಲಿರುವ ಮೊದಲ ನೌಕೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಚಂದ್ರಯಾನ-3 ಯಶಸ್ವಿಯಾದ 10 ದಿನಗಳಲ್ಲಿ ಆದಿತ್ಯ ಎಲ್-1 ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಸುದೀರ್ಘ 126 ದಿನಗಳ ಬಳಿಕ ಆದತ್ಯ ನೌಕೆ ತನ್ನ ಗಮ್ಯ ತಲುಪಿದೆ. ಈ ಸಾಧನೆಗೆ ಮೆಚ್ಚಿ ಇಸ್ರೋ ವಿಜ್ಞಾನಿಗಳನ್ನು ಮೋದಿ ಅಭಿನಂದಿಸಿದ್ದಾರೆ.
ಭಾರತ ಮತ್ತೊಂದು ಹೆಗ್ಗುರುತನ್ನು ಸೃಷ್ಟಿಸಿದೆ. ಭಾರತದ ಮೊದಲ ಸೌರ ವೀಕ್ಷಣಾಲಯ ಆದಿತ್ಯ-ಎಲ್1 ತನ್ನ ಗಮ್ಯಸ್ಥಾನವನ್ನು ತಲುಪಿದೆ. ಇದು ಅತ್ಯಂತ ಸಂಕೀರ್ಣವಾದ ಬಾಹ್ಯಾಕಾಶ ಕಾರ್ಯಾಚರಣೆಗಳ ನಡುವೆ ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಮಾನವೀಯತೆಯ ಪ್ರಯೋಜನಕ್ಕಾಗಿ ನಾವು ವಿಜ್ಞಾನದ ಹೊಸ ಗಡಿಗಳನ್ನು ಅನುಸರಿಸುವುದನ್ನು ಮುಂದುವರಿಸುತ್ತೇವೆ ಎಂದು ಪ್ರಧಾನಿ ಮೋದಿ ಅವರು ಈ ಅಸಾಧಾರಣ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಕೋಲ್ಕತ್ತ : ಟಿ-20 ವಿಶ್ವಕಪ್‌ನ ಲೀಗ್ ಹಂತದ ಸಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್ ತಂಡವು 5 ವಿಕೆಟ್‌ಗಳ…
ಮಂಡ್ಯ: ಡಿ.ಕೆ. ಶಿವಕುಮಾರ್ ಅವರು ಅತಿ ಶೀಘ್ರದಲ್ಲೇ ಮುಖ್ಯಮಂತ್ರಿ ಆಗೇ ಆಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪಿ.ರವಿಕುಮಾರ್…
ಮೈಸೂರು : ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿ ಆಚರಣೆಗೆ ಶಿವ ದೇವಾಲಯಗಳು ಸಂಪೂರ್ಣ ಸಜ್ಜಾಗಿವೆ. ನಗರದ ಪ್ರಮುಖ…
ಮೈಸೂರು : ನಗರದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದ ವಿರುದ್ಧ ಮಂಡಿ ಪೊಲೀಸ್ ಠಾಣಾ ಅಧಿಕಾರಿಗಳು ನಡೆಸಿದ…
ಹಾವೇರಿ : ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2.20 ಲಕ್ಷ…
ಬೆಂಗಳೂರು : ಕರ್ನಾಟಕದ ಸಾವಿರಾರು ರೈತರಿಗೆ ಪಿಎಂ-ಕಿಸಾನ್ ಯೋಜನೆಯಡಿ ಬಾಕಿ ಉಳಿದಿದ್ದ ಹಣವನ್ನು ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ…