BREAKING NEWS

ಚೀನಾ ಜೊತೆಗೆ ಅದಾನಿ ಸಮೂಹ ಸಂಪರ್ಕ, ಜೆಪಿಸಿ ತನಿಖೆಯೇ ಪರಿಹಾರ: ಕಾಂಗ್ರೆಸ್

ನವದೆಹಲಿ (ಪಿಟಿಐ): ಅದಾನಿ ಸಮೂಹದೊಂದಿಗೆ ಚೀನಾದ ಸಂಪರ್ಕವಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಪಕ್ಷವು, ಈ ಕುರಿತಂತೆ ಜಂಟಿ ಸಂಸದೀಯ ಸಮಿತಿಯ ತನಿಖೆ ನಡೆಸುವುದೇ ಈಗ ಉಳಿದಿರುವ ಪರಿಹಾರ ಎಂದು ಪ್ರತಿಪಾದಿಸಿದೆ.

ಅದಾನಿ ಸಮೂಹದ ಜೊತೆಗೆ ಸಂಪರ್ಕವುಳ್ಳ, ಪ್ರಸ್ತುತ ಪೌರತ್ವ ಕುರಿತು ವಿವಾದವಿರುವ ಪಿಎಂಸಿ ಪ್ರಾಜೆಕ್ಟ್ಸ್‌ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ ನಿರ್ದೇಶಕ ಮಾರಿಸ್‌ ಚಾಂಗ್ ಅವರು, ‘ತಾನು ತೈವಾನ್‌ ಪ್ರಜೆ’ ಎಂದು ಹೇಳಿಕೊಂಡಿರುವುದರ ಹಿಂದೆಯೇ ಕಾಂಗ್ರೆಸ್‌ ಪಕ್ಷವು ಜೆಪಿಸಿ ತನಿಖೆ ಅಗತ್ಯವನ್ನು ಪುನರುಚ್ಚರಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು, ‘ಪಿಎಂಸಿ ಪ್ರಾಜೆಕ್ಟ್ಸ್‌ ಮಾಲೀಕತ್ವ ಚಾಂಗ್‌ ಪುತ್ರನದು ಎಂದು ನಾವು ಉಲ್ಲೇಖಿಸಿದ್ದೇವೆ. ಕಂದಾಯ ಗುಪ್ತದಳ ನಿರ್ದೇಶನಾಲಯವು ಇದೇ ಕಂಪನಿಯು ₹ 5,500 ಕೋಟಿ ಮೌಲ್ಯದ ಇಂಧನ ಖರೀದಿ ಹಗರಣದಲ್ಲಿ ಭಾಗಿಯಾಗಿರುವುದನ್ನು ಉಲ್ಲೇಖಿಸಿದೆ. ಈ ಎಲ್ಲದರ ಬಗ್ಗೆಯೂ ಜೆಪಿಸಿ ತನಿಖೆ ನಡೆಯಲಿ ಎಂದು ಹೇಳಿದ್ದಾರೆ.

ಪಾಸ್‌ಪೋರ್ಟ್‌ ಆಧರಿಸಿ ಚಾಂಗ್ ಚೀನಾದ ಪ್ರಜೆ ಎಂದು ಹೇಳಲಾಗಿತ್ತು. ಇವರು ಗೌತಮ್‌ ಅದಾನಿ ಅವರ ಮಾಲೀಕತ್ವದ ಬಂದರು–ಇಂಧನ ಉದ್ಯಮಗಳ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಪಿಎಂಸಿ ಪ್ರಾಜೆಕ್ಟ್ಸ್‌ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಅದಾನಿ ಸಮೂಹದ ಪರವಾಗಿ ಬಂದರು, ಟರ್ಮಿನಲ್ಸ್‌, ರೈಲು ಮಾರ್ಗ, ವಿದ್ಯುತ್ ಪೂರೈಕೆ ಮಾರ್ಗ ಮತ್ತು ಇತರೆ ಮೂಲಸೌಕರ್ಯ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುತ್ತಿದೆ.

ಚಾಂಗ್‌ ಅವರ ಪುತ್ರ ಚಾಂಗ್ ಚೀನ್‌ ಟಿಂಗ್ (ಮಾರಿಸ್‌ ಚಾಂಗ್), ತಾನು ತೈವಾನ್‌ ಪಾಸ್‌ಪೋರ್ಟ್ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ಜೈರಾಂ ರಮೇಶ್‌ ಅವರು ಉಲ್ಲೇಖಿಸಿದ್ದಾರೆ.

andolanait

Recent Posts

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

12 mins ago

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 hours ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

3 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

4 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

4 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

4 hours ago