BREAKING NEWS

ನಿತ್ಯಾನಂದನ ಕೈಲಾಸ ದೇಶಕ್ಕೆ ಪ್ರಧಾನಿಯಾದ ನಟಿ ರಂಜಿತಾ!

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ತನ್ನ ಆತ್ಮೀಯ ಶಿಷ್ಯೆಯನ್ನು ತನ್ನ ದೇಶದ ಪ್ರಧಾನಿಯನ್ನಾಗಿ  ಮಾಡಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೈಲಾಸ ದೇಶ ಎಂಬ ಹೊಸ ದೇಶವನ್ನೇ ಕಟ್ಟಿರುವ ನಿತ್ಯಾನಂದ ಹಲವು ವರ್ಷಗಳ ಕಾಲ ತನ್ನ ಶಿಷ್ಯರ ಜೊತೆ ಅಲ್ಲಿಯೇ ನೆಲೆಯೂರಿದ್ದಾನೆ. ಇದೀಗ ಆ ದೇಶಕ್ಕೆ ಪ್ರಧಾನಿಯನ್ನು ನೇಮಕ ಮಾಡಿದ್ದಾನೆ.

ದೇವರ ಹೆಸರಲ್ಲಿ ಹೊಸ ಸಾಮ್ರಾಜ್ಯ ಕಟ್ಟಿಕೊಂಡಿರುವ ನಿತ್ಯಾನಂದ ಈಕ್ವೆಡಾರ್‌ನ ಕರಾವಳಿಯಲ್ಲಿ ದ್ವೀಪವೊಂದನ್ನು ತನ್ನದೇ ಆದ ದೇಶವಾಗಿ ನಿರ್ಮಿಸಿಕೊಂಡು ತನ್ನ ಶಿಷ್ಯರ ಜೊತೆ ವಾಸಿಸುತ್ತಿದ್ದಾನೆ.

ನಟಿ ರಂಜಿತಾ ಕಾರಣದಿಂದಾಗಿಯೇ ನಿತ್ಯಾನಂದ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದು, ಇಬ್ಬರ ನಡುವಿನ ಖಾಸಗಿ ವಿಡಿಯೋ ವಿಚಾರವಾಗಿ ಕೋರ್ಟ್ ಮೆಟ್ಟಿಲು ಕೂಡ ಏರಿದ್ದ. ನಂತರ ದೇಶವನ್ನೇ ಬಿಡಬೇಕಾಗಿ ಬಂತು. ದೇಶವನ್ನು ತೊರೆಯುವಾಗ ತನ್ನ ಅಷ್ಟೂ ಶಿಷ್ಯರನ್ನು ಕರೆದೊಯ್ದು, ಹೊಸ ದೇಶ ಕಟ್ಟಿ ಮತ್ತೆ ಅಚ್ಚರಿ ಮೂಡಿಸಿದೆ. ಈ ದೇಶಕ್ಕೆ ರಂಜಿತಾ ಅವರನ್ನು ಪ್ರಧಾನಿ ಮಾಡಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.

ತಮ್ಮ ಪ್ರೀತಿಯ ಶಿಷ್ಯೆ ರಂಜಿತಾಳನ್ನು ಕೈಲಾಸದ ಪ್ರಧಾನ ಮಂತ್ರಿಯನ್ನಾಗಿ ನೇಮಿಸಿದ್ದಾರೆ. ಈ ಸಂಬಂಧ ಅಧಿಕೃತ ಘೋಷಣೆ ಮಾಡಲಾಗಿದೆ ಎಂದು ತಮಿಳು ನಿಯತಕಾಲಿಕವೊಂದು ವರದಿ ಮಾಡಿದೆ. ಇದಲ್ಲದೆ, ನಿತ್ಯಾನಂದನ ವೆಬ್‌ಸೈಟ್ ಕೂಡ ಈ ವಿಷಯವನ್ನು ಪ್ರಕಟಿಸಿದೆ ಎನ್ನಲಾಗಿದೆ .

ಈ ಸುದ್ದಿ ಹೊರಬೀಳುತ್ತಿದ್ದಂತೆ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಸದ್ಯಕ್ಕೆ ನಿತ್ಯಾನಂದನ ವೆಬ್‌ಸೈಟ್‌ನಲ್ಲಿ ರಂಜಿತಾ ಮತ್ತು ನಿತ್ಯಾನಂದ ಇರುವ ಫೋಟೋಗಳು ಮಾತ್ರ ಕಾಣಿಸಿಕೊಳ್ಳುತ್ತಿವೆ. ರಂಜಿತಾ ಕೂಡ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದು ನಿತ್ಯಾನಂದಮಯಿ ರಂಜಿತ ಸ್ವತಃ ಸ್ವಾಮಿ ಎಂದು ಘೋಷಿಸಿಕೊಂಡಿದ್ದಾಳೆ.

ಒಟ್ಟಾರೆಯಾಗಿ ಹಿಂದೂಗಳಿಗಾಗಿ ಸ್ಥಾಪಿತವಾದ ಕೈಲಾಸ ರಾಷ್ಟ್ರದ ಮೊದಲ ಪ್ರಧಾನ ಮಂತ್ರಿಯಾಗಿ ರಂಜಿತಾ ಅವರನ್ನು ನೇಮಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ತನ್ನ ದೇಶದ ಕರೆನ್ಸಿಯನ್ನು ನಿತ್ಯಾನಂದ ಬಿಡುಗಡೆ ಮಾಡಿದ್ದ. ತನ್ನ ದೇಶದ ವೀಸಾ ಕೂಡ ಘೋಷಿಸಿದ್ದ. ಕೈಲಾಸ ದೇಶಕ್ಕೆ ಬರುವವರು ಯಾವೆಲ್ಲ ನಿಯಮ ಪಾಲಿಸಬೇಕು ಎನ್ನುವ ಕುರಿತಾದ ವೆಬ್ ಸೈಟ್ ಕೂಡ ನಿತ್ಯಾನಂದ ಮಾಡಿಕೊಂಡಿದ್ದಾನೆ. ಯಾರಿಗೆಲ್ಲ ವೀಸಾ ಕೊಡಲಾಗುತ್ತದೆ ಎನ್ನುವ ವಿವರಣೆಯನ್ನು ಅದರಲ್ಲಿ ನೀಡಿದ್ದಾನೆ. ಇದೀಗ ತನ್ನ ದೇಶಕ್ಕೆ ನಟಿ ರಂಜಿತಾರನ್ನು ಪ್ರಧಾನಿಯನ್ನಾಗಿ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾನೆ.

andolanait

Recent Posts

ಅರಮನೆ, ಮೃಗಾಲಯಕ್ಕೆ ಪ್ರವಾಸಿಗರ ಲಗ್ಗೆ

ಕೇಶವ್ ಎಂ. ಅರಮನೆಗೆ ೨,೧೯,೯೧೮ ಮಂದಿ, ಮೃಗಾಲಯಕ್ಕೆ ೧.೫೭ ಲಕ್ಷ ಮಂದಿ ಭೇಟಿ ಮೈಸೂರು: ದಸರಾ  ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ…

34 seconds ago

ಸಿದ್ದರಾಮಯ್ಯ ಬ್ಲ್ಯಾಕ್‌ಮೇಲ್‌ಗೆಂದೇ ಸ್ಟಿಂಗ್ ಆಪರೇಷನ್! ಕಾಂಗ್ರೆಸ್‌ನವರೂ ಶಾಮೀಲು: ಯತೀಂದ್ರ ಸ್ಫೋಟಕ ಆರೋಪ

ಮೈಸೂರು: ಕರ್ನಾಟಕ ರಾಜಕೀಯದಲ್ಲಿ ಇದೀಗ ಸ್ಟಿಂಗ್ ಆಪರೇಷನ್ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್‌ಮೇಲ್ ಮಾಡುವ…

21 hours ago

ಬ್ರಿಕ್ಸ್‌ ಸಭೆಗಾಗಿ ಭಾರತಕ್ಕೆ ಬರಲಿದ್ದಾರೆ ಇರಾನ್‌ ಸಂಸತ್‌ ಸ್ಪೀಕರ್‌ ಘಾಲಿಬಾಫ್‌

ನವದೆಹಲಿ: ಇರಾನ್‌ ಸಂಸತ್‌ ಸ್ಪೀಕರ್‌ ಮೊಹಮ್ಮದ್‌ ಬಾಘೇರ್‌ ಘಾಲಿಬಾಫ್‌ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್‌ 26 ಮತ್ತು 27ರಂದು…

1 day ago

ಶೇ.70ರಷ್ಟು ಅಂತರ್ಜಲ ಬಳಕೆ: ಮತ್ತಷ್ಟು ಜಲಸಂಕಷ್ಟದ ಆತಂಕ!

ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲದ ಬಳಕೆ ಶೇಕಡಾ 70ರಷ್ಟಾಗಿದ್ದು, ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. ಕುಡಿಯುವ ನೀರು, ಕೃಷಿ…

1 day ago

ರಾಜ್ಯದಲ್ಲಿ ಚುರುಕುಗೊಂಡ ಹಿಂಗಾರು ಮಳೆ

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಚುರುಕುಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ಮಳೆ ಮತ್ತೊಮ್ಮೆ ಮಹತ್ವ ಪಡೆದುಕೊಂಡಿದೆ. ಹಿಂಗಾರು ಬೆಳೆಗಳ ಬಿತ್ತನೆಗೆ ಸಿದ್ಧತೆ ನಡೆಸುತ್ತಿರುವ…

1 day ago