ನಟಿ ಯಶಿಕಾ ಆನಂದ್‌ ಕಾರು ಅಪಘಾತ: ನಟಿಗೆ ಗಂಭೀರ ಗಾಯ, ಸ್ನೇಹಿತೆ ಸಾವು!

ಚೆನ್ನೈ: ಇಲ್ಲಿನ ಪೂರ್ವ ಕರಾವಳಿ ರಸ್ತೆ ಬಳಿ ನಟಿ ಯಶಿಕಾ ಆನಂದ್‌ ಅವರಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದೆ.

ಅಪಘಾತದಲ್ಲಿ ಯಶಿಕಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ (28) ಅವರು ಮೃತಪಟ್ಟಿದ್ದಾರೆ.

ಹೈದರಾಬಾದ್‌ನವರಾದ ವಲ್ಲಿಚೆಟ್ಟಿ ಭವಾನಿ ಅವರು ಯುಎಸ್‌ನಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಸ್ನೇಹಿತೆ ಯಶಿಕಾ ಆನಂದ್‌ ಹಾಗೂ ಮತ್ತಿಬ್ಬರು ಪುರಷ ಸ್ನೇಹಿತರೊಂದಿಗೆ ಮಮಲ್ಲಪುರಂನಿಂದ ಚೆನ್ನೈಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಾರನ್ನು ಸ್ನೇಹಿತ ಚಲಾಯಿಸುತ್ತಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ.

ಅಪಘಾತದಲ್ಲಿ ಭವಾನಿ ಮೃತಪಟ್ಟಿದ್ದು, ಯಶಿಕಾ ಸೇರಿದಂತೆ ಉಳಿದ ಸ್ನೇಹಿತರನ್ನು ಚೆನ್ನೈನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಮಲ್ಲಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us