ನಟ ಸಂಚಾರಿ ವಿಜಯ್‌ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ: ಅಪೋಲೊ ವೈದ್ಯರ ಮಾಹಿತಿ

ಬೆಂಗಳೂರು: ಬೈಕ್‌ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ನಟ ಸಂಚಾರಿ ವಿಜಯ್‌ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಮಿದುಳಿನ ಭಾಗಕ್ಕೆ ಗಂಭೀರ ಪೆಟ್ಟು ಹಿನ್ನೆಲೆ ವಿಜಯ್ ಕೋಮಾದಲ್ಲಿದ್ದಾರೆ. ಮೆದುಳಿನ ಭಾಗದಲ್ಲಿ ಗಂಭೀರ ರಕ್ತಸ್ರಾವವಾಗಿದ್ದು, ಐಸಿಯು ಪುಲ್ ಲೈಪ್ ಸಪೂರ್ಟ್​ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಚಿಕಿತ್ಸೆಗೆ ನಟ ಸ್ಪಂದಿಸುತ್ತಿಲ್ಲ ಎಂದು ಅಪೋಲೋ ವೈದ್ಯ ಅರುಣ್ ನಾಯ್ಕ್ ಮಾಹಿತಿ ನೀಡಿದ್ದಾರೆ.

48 ಗಂಟೆಯೊಳಗೆ ಚೇತರಿಕೆ ಕಂಡರೆ ಸಮಸ್ಯೆ ಇಲ್ಲ. ಈ ವಿಷಯ ವಿಜಯ್ ಅವರ ಕುಟುಂಬಕ್ಕೆ ತಿಳಿಸಿದ್ದೇವೆ. 11.30ಕ್ಕೆ ಅಧಿಕೃತ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

× Chat with us