ಭಾರತಕ್ಕೆ ಮರಳಿದ ನಟ ರಜನಿಕಾಂತ್‌

ಹೊಸದಿಲ್ಲಿ: ಆರೋಗ್ಯ ತಪಾಸಣೆಗಾಗಿ ಅಮೆರಿಕಗೆ ಹೋಗಿದ್ದ ನಟ ರಜನಿಕಾಂತ್‌ ಶುಕ್ರವಾರ ಭಾರತಕ್ಕೆ ಮರಳಿದರು.

ಚೆನ್ನೈ ವಿಮಾನ ನಿಲ್ದಾಣಕ್ಕೆ ಮರಳಿದ ಅವರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ತಲೈವಾ.. ತಲೈವಾ.. ಎಂದು ಕೂಗುತ್ತ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಜನರತ್ತ ರಜನಿಕಾಂತ್​ ಕೈ ಮುಗಿದು ನಮಸ್ಕರಿಸುತ್ತ ತಾಯ್ನಾಡಿಗೆ ಬಂದ ರಜನಿಕಾಂತ್‌ ಅವರ ಫೋಟೊ ಹಾಗೂ ವಿಡಿಯೊ ವೈರಲ್‌ ಆಗಿದೆ.

ಆರೋಗ್ಯ ತಪಾಸಣೆಗಾಗಿ ರಜನಿಕಾಂತ್‌ ಕೇಂದ್ರ ಸರ್ಕಾರದ ಅನುಮತಿ ಪಡೆದು ಅಮೆರಿಕಗೆ ತೆರಳಿದ್ದರು. ಈ ವೇಳೆ ಅಲ್ಲಿಯೇ ತಂಗಿದ್ದ ಅಳಿಯ ಧನುಷ್‌ ಹಾಗೂ ಪುತ್ರಿಯನ್ನು ಭೇಟಿಯಾಗಿದ್ದರು.

× Chat with us