ಬಿಜೆಪಿಗೆ ಮರಳಿದ ನಟಿ, ರಾಜಕಾರಣಿ ವಿಜಯಶಾಂತಿ

ಹೊಸದಿಲ್ಲಿ: ನಟಿ, ರಾಜಕಾರಣಿ ವಿಜಯಶಾಂತಿ ಅವರು ಈಚೆಗೆ ಕಾಂಗ್ರೆಸ್‌ ತೊರೆದ ನಂತರ ಮತ್ತೆ ಬಿಜೆಪಿಗೆ ಮರಳಿದ್ದಾರೆ. ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಮಾರನೇ ದಿನ (ಸೋಮವಾರ) ಅವರು ಆಡಳಿತ ಪಕ್ಷ ಬಿಜೆಪಿ ಸೇರಿದ್ದಾರೆ.

ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಖ್ಯಾತಿಗಳಿಸಿರುವ ವಿಜಯಶಾಂತಿ 1997ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಪ್ರತ್ಯೇಕ ತೆಲಂಗಾಣ ಹೋರಾಟ ಸಂದರ್ಭದಲ್ಲಿ ಬಿಜೆಪಿ ತೊರೆದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಪಕ್ಷ ಸೇರಿದರು. 2009ರಲ್ಲಿ ಲೋಕಸಭೆಗೆ ಆಯ್ಕೆಯಾದರು. ನಂತರ 2014ರ ಸಂದರ್ಭದಲ್ಲಿ ಆಂಧ್ರಪ್ರದೇಶ ವಿಭಜನೆಯಾಗಿ ತೆಲಂಗಾಣ ರಾಜ್ಯ ರಚನೆಯಾದ ಬಳಿಕ ಕಾಂಗ್ರೆಸ್‌ ಸೇರಿದರು.

ತೆಲಂಗಾಣ 2023ರ ಚುನಾವಣೆ ಗೆಲುವಿಗಾಗಿ ಆಕ್ರಮಣಕಾರಿ ಅಭಿಯಾನಕ್ಕೆ ಮುಂದಾಗಿರುವ ಸಂದರ್ಭದಲ್ಲೇ ವಿಜಯಶಾಂತಿ ಅವರು ಬಿಜೆಪಿಗೆ ಮರಳಿದ್ದಾರೆ. ಹೈದರಬಾದ್‌ ಮುನಿಸಿಪಲ್‌ ಕಾರ್ಪೊರೇಷನ್‌ ಚುನಾವಣೆಯಲ್ಲಿ 150ಕ್ಕೆ 48 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಟಿಆರ್‌ಎಸ್‌ಗಿಂತ 7 ಸೀಟು ಕಡಿಮೆ ಗೆದಿದ್ದೆ. ಕಾಂಗ್ರೆಸ್‌ ಕೇವಲ 2 ಸೀಟುಗಳನ್ನು ಮಾತ್ರ ಗೆದ್ದಿದೆ. 2016ರಲ್ಲೂ ಇಷ್ಟೇ ಗೆಲುವು ಸಾಧಿಸಿತ್ತು ಕಾಂಗ್ರೆಸ್‌.

ತಮಿಳುನಾಡಿನಲ್ಲಿ ಖುಷ್ಬೂ ಸುಂದರ್‌ ನಂತರ ವಿಜಯಶಾಂತಿ ಬಿಜೆಪಿ ಸೇರಿದ್ದಾರೆ. ಹೈದರಾಬಾದ್‌ ಸ್ಥಳೀಯ ಚುನಾವಣೆ ಫಲಿತಾಂಶದ ನಂತರ ಅವರು ಕಾಂಗ್ರೆಸ್‌ ತೊರೆದಿದ್ದಾರೆ.

× Chat with us