BREAKING NEWS

2‌ ವರ್ಷಗಳಿಂದ ನಿಷ್ಕ್ರಿಯಗೊಂಡಿರುವ ಖಾತೆಗಳನ್ನು ಅಳಿಸಲಾಗುವುದು: ಗೂಗಲ್

ನ್ಯೂಯಾರ್ಕ್‌ : ಗೂಗಲ್‌ ಸಂಸ್ಥೆ ತನ್ನ ಹೊಸ ಇನ್‌ಆಕ್ವಿಟಿವಿಟಿ ನೀತಿ (ನಿಷ್ಕ್ರಿಯತೆ ನೀತಿ) ಯನ್ನು ಆಗಸ್ಟ್‌ 4ರಂದು ಜಾರಿಗೊಳಿಸಿದೆ. ಈ ನೀತಿಯನ್ವಯ ಗೂಗಲ್‌ ತನ್ನ ಬಳಕೆದಾರರಿಗೆ ಈ ವರ್ಷದ ಡಿಸೆಂಬರ್‌ 1ರ ಗಡುವಿನ ನೆನಪು ಮಾಡಿದ್ದು, ಸಕ್ರಿಯವಾಗಿಲ್ಲದೇ ಇರುವ ಖಾತೆಯನ್ನು ಅದು ಅಳಿಸಲು ಪ್ರಾರಂಭಿಸಲಿದೆ.

ಗೂಗಲ್‌ ಖಾತೆ ಬಳಕೆದಾರರಿಗೆ ನಿಷ್ಕ್ರಿಯ ಅವಧಿಯನ್ನು ಎರಡು ವರ್ಷಗಳಿಗೆ ಪರಿಷ್ಕರಿಸಲಾಗಿದ್ದು ಇದು ಜಿಮೇಲ್‌ ಸಹಿತ ಎಲ್ಲಾ ಗೂಗಲ್‌ ಉತ್ಪನ್ನ ಮತ್ತು ಸೇವೆಗಳ ಬಳಕೆದಾರರಿಗೆ ಅನ್ವಯವಾಗುತ್ತದೆ.

ಒಬ್ಬ ಬಳಕೆದಾರ ಎರಡು ವರ್ಷ ಅವಧಿಯಲ್ಲಿ ಒಮ್ಮೆಯೂ ತನ್ನ ಖಾತೆಗೆ ಲಾಗಿನ್‌ ಮಾಡಿಲ್ಲದೇ ಇದ್ದರೆ ಖಾತೆ ನಿಷ್ಕ್ರಿಯವೆಂದು ಪರಿಗಣಿಸಲಾಗುವುದು ಎಂದು ಗೂಗಲ್‌ ಹೇಳಿದೆ.

ಡಿಸೆಂಬರ್‌ 1, 2023ರಿಂದ ಯಾವುದೇ ನಿಷ್ಕ್ರಿಯ ಖಾತೆ ಮತ್ತು ಅದರಲ್ಲಿರುವ ವಿಷಯ ಅಳಿಸುವಿಕೆಗೆ ಅರ್ಹವಾಗುತ್ತವೆ ಎಂದು ಗೂಗಲ್‌ ಹೇಳಿದೆಯಲ್ಲದೆ ಒಮ್ಮೆ ಅಳಿಸಿದ ನಂತರ ಅದೇ ಜಿಮೇಲ್‌ ವಿಳಾಸವನ್ನು ಹೊಸ ಖಾತೆ ರಚಿಸಲು ಬಳಸುವ ಹಾಗಿಲ್ಲ ಎಂದು ಸಂಸ್ಥೆ ಹೇಳಿದೆ.

ಖಾತೆ ನಿಷ್ಕ್ರಿಯವಾಗಿದ್ದರೆ ಸಂಬಂಧಿತ ಬಳಕೆದಾರರಿಗೆ ಹಲವಾರು ಜ್ಞಾಪನೆ ಇಮೇಲ್‌ಗಳನ್ನು ಆ ಖಾತೆಗೆ ಮತ್ತು ರಿಕವರಿ ಇಮೇಲ್‌ಗಳನ್ನು ಒದಗಿಸಲಾಗಿದ್ದರೆ ಅವುಗಳಿಗೂ ಕಳಿಸಲಾಗುವುದು, ನಂತರವಷ್ಟೇ ಖಾತೆ ಅಳಿಸಲಾಗುವುದು, ಖಾತೆಯನ್ನು ಅಳಿಸುವ ಎಂಟು ತಿಂಗಳಿಗೆ ಮುಂಚಿತವಾಗಿ ಜ್ಞಾಪನೆ ಇಮೇಲ್‌ಗಳನ್ನು ಕಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ನಿಷ್ಕ್ರಿಯತೆ ನೀತಿಯಿಂದ ಯುಟ್ಯೂಬ್‌ ಚಾನಲ್‌ ಖಾತೆಗಳು, ವೀಡಿಯೋಗಳು ಅಥವಾ ಕಾಮೆಂಟ್‌ಗಳನ್ನು ಹೊಂದಿರುವ ಖಾತೆಗಳಿಗೆ ವಿನಾಯಿತಿಯಿದೆ ಎಂದು ಗೂಗಲ್‌ ಹೇಳಿದೆ. ಲೋಡ್‌ ಮಾಡಿದ ಗಿಫ್ಟ್‌ ಕಾರ್ಡ್‌ ಹೊಂದಿದ ಖಾತೆ ಅಥವಾ ಪ್ರಕಟಿತ ಅಪ್ಲಿಕೇಶನ್‌ ಹೊಂದಿರುವ ಖಾತೆಗೂ ವಿನಾಯಿತಿಯಿದೆ.

ಖಾತೆ ಹೇಗೆ ಸಕ್ರಿಯವಾಗಿರಿಸುವುದು?

► ಇಮೇಲ್‌ ಓದುವುದು ಅಥವಾ ಕಳಿಸುವುದು.

► ಗೂಗಲ್‌ ಡ್ರೈವ್‌ ಬಳಸುವುದು

► ಯುಟ್ಯೂಬ್‌ ವೀಡಿಯೋ ವೀಕ್ಷಿಸುವುದು

► ಫೋಟೋ ಶೇರ್‌ ಮಾಡುವುದು

► ಆಪ್‌ ಡೌನ್‌ಲೋಡ್‌ ಮಾಡುವುದು

► ಗೂಗಲ್‌ ಸರ್ಚ್‌ ಬಳಸುವುದು

► ಮೂರನೇ ಪಕ್ಷದ ಆ್ಯಪ್ ಅಥವಾ ಸೇವೆಗೆ ಸೈನ್‌ ಇನ್‌ ಮಾಡಲು ಗೂಗಲ್‌ ಮೂಲಕ ಸೈನ್‌ ಇನ್‌ ಮಾಡುವುದು

andolanait

Recent Posts

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ: ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಭರವಸೆಯಿದ್ದು, ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ…

6 hours ago

ಕೆ.ಆರ್‌.ನಗರ: ಮಾಜಿ ಸಚಿವ ಸಾ.ರಾ. ಮಹೇಶ್ ಪುತ್ರ ಹಾಗೂ ಉದ್ಯಮಿ ಸಾ.ರಾ.ಜಯಂತ್‌ ಹುಟ್ಟುಹಬ್ಬ ಆಚರಣೆ

ಭೇರ್ಯ ಮಹೇಶ್:‌ ಕೆ.ಆರ್‌.ನಗರ ತಾಲ್ಲೂಕು ವರದಿಗಾರರು  ಕೆ.ಆರ್.ನಗರ : ಜಾತಿ ಬೇದವಿಲ್ಲದೆ ನೊಂದವರಿಗೆ ದ್ವನಿಯಾಗಿ, ಸಂಕಷ್ಟದಲ್ಲಿರುವವರುಗೆ ಆರ್ಥಿಕ ನೆರವು ನೀಡಿ,…

6 hours ago

ಮಾ.28ರಂದು ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ: 140 ಬಸ್‌ಗಳ ಕಾರ್ಯಾಚರಣೆ

ಮಂಡ್ಯ: ಮಾರ್ಚ್.‌28ರಂದು ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ 140 ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಜಾತ್ರಾ…

7 hours ago

ಎಚ್ಚರಿಕೆ ನೀಡಿದ್ದಕ್ಕೆ ಟ್ರಂಪ್‌ ಕದನ ವಿರಾಮ ಘೋಷಣೆ: ಇರಾನ್‌ ಖಡಕ್‌ ತಿರುಗೇಟು

ಟೆಹರಾನ್: ನಾವು ನೀಡಿದ ಎಚ್ಚರಿಕೆಗೆ ತಲೆಬಾಗಿ ಅಮೇರಿಕಾ ಈಗ ಕದನ ವಿರಾಮ ಘೋಷಣೆ ಮಾಡಿದ ಎಂದು ಇರಾನ್‌ ತಿರುಗೇಟು ನೀಡಿದೆ.…

7 hours ago

ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕ ಸಾವು

ಮಂಡ್ಯ: ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಂದೀಪುರ ಗ್ರಾಮದಲ್ಲಿ ನಡೆದಿದೆ.…

7 hours ago

ಕೆಪಿಎಸ್‌ಸಿ ಬದಲಿಗೆ ಕೆಇಎ ಮೂಲಕ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗೆ ನೇಮಕಾತಿ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ಕಳೆದ ವರ್ಷ ಕೃಷಿ ಇಲಾಖೆಯ ಸಮಾರು 945 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯನ್ನು…

7 hours ago