ಟ್ರಕ್ ಪಲ್ಟಿ ; ಐವರು ಕಾರ್ಮಿಕರು ದುರ್ಮರಣ

ನರ್ಸಿಂಗ್ಪುರ(ಮಧ್ಯಪ್ರದೇಶ): ಹೈದರಾಬಾದ್ನಿಂದ ಉತ್ತರಪ್ರದೇಶಕ್ಕೆ ತೆರಳುತ್ತಿದ್ದ ಟ್ರಕ್ ಪಲ್ಟಿ ಯಾಗಿ ಅದರೊಳಗಿದ್ದ ಐವರು ವಲಸೆ ಕಾರ್ಮಿಕರು ಸಾವಿಗೀಡಾದ ಘಟನೆ ಮಧ್ಯಪ್ರದೇಶದ ನರ್ಸಿಂಗ್ಪುರ್ ಬಳಿ ನಡೆದಿದೆ.

ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ 11 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರು ಡ್ರೈವರ್ ಹಾಗೂ ಒಬ್ಬ ಕ್ಲೀನರ್ ಸೇರಿ ಒಟ್ಟು 20 ಮಂದಿ ಪ್ರಯಾಣಿಸುತ್ತಿದ್ದರು ಎಂದು ನರ್ಸಿಂಗ್ಪುರ್ ಜಿಲ್ಲಾಧಿಕಾರಿ ದೀಪಕ್ ಸಕ್ಸೆನಾ ಮಾಹಿತಿ ನೀಡಿದ್ದಾರೆ. ಗಾಯಗೊಂಡವರನ್ನ ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಟ್ರಕ್ ಮಾವಿನ ಹಣ್ಣು ಹೊತ್ತು ಹೈದರಾಬಾದ್ನಿಂದ ಉತ್ತರಪ್ರದೇಶದ ಆಗ್ರಾಗೆ ತೆರಳುತ್ತಿತ್ತು. ವಲಸೆ ಕಾರ್ಮಿಕರು ಮಧ್ಯಪ್ರದೇಶದ ಝಾನ್ಸಿಗೆ ತೆರಳಿ ಅಲ್ಲಿಂದ ಮುಂದೆ ಪ್ರಯಾಣ ಬೆಳೆಸುವ ಯೋಜನೆ ಹಾಕಿಕೊಂಡಿದ್ದರು. ಆದರೆ ಟ್ರಕ್ ಪಲ್ಟಿ ಯಾಗಿ ಐವರು ನಡೆದು ದಾರಿಯಲ್ಲೇ ಪ್ರಾಣಬಿಟ್ಟಿದ್ದಾರೆ.

ಇದನ್ನೂ ಓದಿ: ರಸಗೊಬ್ಬರ ಮೂಟೆ ತೂಕದಲ್ಲಿ ವಂಚನೆ

ಆಂದೋಲನ ಈ-ಪೇಪರ್ ಓದಲು ಇಲ್ಲಿ ಕ್ಲಿಕ್ ಮಾಡಿ

× Chat with us