ಹಿಮಾಚಲ ಪ್ರದೇಶ : ಬೆಂಗಳೂರಿನ ಯುವಕ ರಾಹುಲ್ ರಮೇಶ್ ಎಂಬುವರು ಕಳೆದ 6 ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ನಾಪತ್ತೆಯಾಗಿದ್ದಾರೆ. ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಮನಾಲಿ ಬಳಿ ಅರಣ್ಯದಲ್ಲಿ ರಾಹುಲ್ ರಮೇಶ್ ಅವರು ನಾಪತ್ತೆಯಾಗಿದ್ದು, ಪರ್ವತಾ ರೋಹಣದ ವೇಳೆ ಬೆಟ್ಟದಿಂದ ಕೆಳಗೆ ಉರುಳಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
35 ವರ್ಷ ವಯಸ್ಸಿನ ರಾಹುಲ್ ರಮೇಶ್, ಮನಾಲಿಯಲ್ಲಿ ಪರ್ವತಾರೋಹಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸಂಬಂಧ ಹಿಮಾಚಲ ಪ್ರದೇಶದ ಜೊಗ್ನಿ ಫಾಲ್ ಅರಣ್ಯದಲ್ಲಿ ತರಬೇತಿಯಲ್ಲಿ ನಿರತರಾಗಿದ್ದ ವೇಳೆ ಸೆಪ್ಟೆಂಬರ್ 28 ರಂದು ಮನಾಲಿಯಲ್ಲಿ ನಾಪತ್ತೆಯಾಗಿದ್ದರು.
ಈ ಸಂಬಂಧ ಹಿಮಾಚಲ ಪ್ರದೇಶ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮನಾಲಿ ಡಿಎಸ್‌ಪಿ ಕೆ. ಡಿ. ಶರ್ಮಾ ಅವರ ಸಾರಥ್ಯದಲ್ಲಿ ಈ ಶೋಧ ಕಾರ್ಯ ನಡೆಯುತ್ತಿದೆ. ಕಳೆದ 4 ದಿನಗಳಿಂದಲೂ ಈ ಭಾಗದಲ್ಲಿ ಹುಡುಕಾಟ ನಡೆಯುತ್ತಿದೆ. ಇನ್ನು ಜೊಗ್ನಿ ಜಲಪಾತದ ಬಳಿ ಕೊರಕಲು ಒಂದರಲ್ಲಿ ಮೃತ ದೇಹವೊಂದು ಕಾಣ ಸಿಕ್ಕಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ, ಇದು ಯಾರ ಮೃತ ದೇಹ ಅನ್ನೋದು ದೃಢಪಟ್ಟಿಲ್ಲ.
ಕೊರಕಲಿನಲ್ಲಿ 500 ಮೀಟರ್ ಕೆಳ ಭಾಗದಲ್ಲಿ ಮೃತ ದೇಹ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ದೇಹವನ್ನು ಮೇಲೆ ಎತ್ತಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ದೇಹವನ್ನು ಮೇಲಕ್ಕೆ ಎತ್ತಿ ತೆಗೆದ ಬಳಿಕವಷ್ಟೇ ಈ ಮೃತ ದೇಹ ಯಾರದ್ದು ಎಂದು ತಿಳಿದು ಬರಲಿದೆ. ಈಗಲೇ ಖಚಿತವಾಗಿ ಏನನ್ನೂ ಹೇಳಲಾಗದು ಎಂದು ಶರ್ಮಾ ಅವರು ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 30 ರಿಂದಲೂ ಈ ಪ್ರದೇಶದಲ್ಲಿ ರಾಹುಲ್ ರಮೇಶ್ ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ಪರ್ವತಾರೋಹಣ ಸ್ಪರ್ಧೆ ಆಯೋಜಿಸಿದ್ದ ಸಂಘಟಕರೂ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ರಾಹುಲ್ ರಮೇಶ್ ಅವರು ಭ್ರಿಗು ಸರೋವರದ ಬಳಿ ಒಬ್ಬೊಂಟಿಯಾಗಿ ಪರ್ವತಾರೋಹಣ ತರಬೇತಿಯಲ್ಲಿ ನಿರತರಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ. ವಾಪಸ್ ಕೆಳಗೆ ಇಳಿದು ಬರುವ ವೇಳೆ ಅವರು ದಾರಿ ತಪ್ಪಿರಬಹುದು ಎಂದು ಅಂದಾಜಿಸಿದ್ದಾರೆ.
ಇನ್ನು ರಾಹುಲ್ ರಮೇಶ್ ಅವರ ಮೊಬೈಲ್ ಸೆಪ್ಟೆಂಬರ್ 29 ರಂದು ಜೊಗ್ನಿ ಜಲಪಾತದ ಬಳಿ ಪತ್ತೆಯಾಗಿತ್ತು. ರಾಹುಲ್ ರಮೇಶ್ ಅವರು ಜಿಪಿಎಸ್ ಸೌಲಭ್ಯ ಇರುವ ಗಡಿಯಾರ ಕೂಡಾ ಧರಿಸಿದ್ದರು. ಆದರೆ, ಈ ವಾಚ್‌ನಿಂದಲೂ ಅವರನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ವಾಚ್‌ನಿಂದ ಈವರೆಗೆ ಯಾವುದೇ ಸಿಗ್ನಲ್ ಸಿಕ್ಕಿಲ್ಲ.
ರಾಹುಲ್ ರಮೇಶ್ ಅವರು ನಾಪತ್ತೆಯಾದ ಮಾರನೇ ದಿನದಿಂದಲೇ ಸ್ಥಳೀಯ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಆದರೆ, ಅತ್ಯಂತ ಕಡಿದಾದ ಬೆಟ್ಟಗಳಿಂದ ಕೂಡಿರುವ ಜೊಗ್ನಿ ಜಲಪಾತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸೋದು ಸುಲಭವಲ್ಲ. ಹೀಗಾಗಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನೆರವು ಪಡೆದು ರಾಜ್ಯ ವಿಪತ್ತು ನಿರ್ವಹಣಾ ಪಡೆಯು ಕಾರ್ಯ ನಿರ್ವಹಿಸುತ್ತಿದೆ. ಇನ್ನು ಮನಾಲಿಯಲ್ಲಿ ಇರುವ ಅಟಲ್ ಬಿಹಾರಿ ವಾಜಪೇಯಿ ಪರ್ವತಾರೋಹಣ ಸಂಸ್ಥೆ ಕೂಡಾ ಈ ಕಾರ್ಯಾಚರಣೆಗೆ ನೆರವು ನೀಡಿದೆ.
ಬೆಂಗಳೂರು: ಕನ್ನಡ ಕವಯತ್ರಿ, ಬರಹಗಾರ್ತಿ ಸರಿತಾ ಜ್ಞಾನಾನಂದ ಅವರು ಆರ್.ಆರ್.ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲೇಖಕಿ, ಅನುವಾದಕಿಯಾಗಿದ್ದ ಸರಿತಾ ಅವರು…
ಬೆಂಗಳೂರು: ಹೊಸ ವರ್ಷ ಹಾಗೂ ಕ್ರಿಸ್‌ಮಸ್ ಸಂಭ್ರಮದ ಮಧ್ಯೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಬಸ್ ಅಪಘಾತ ಇಡೀ…
ನಂಜನಗೂಡು: ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಬ್ಲಾಸ್ಟ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡಿನ ಚಾಮಲಾಪುರದ ನಿವಾಸಿ ಮಂಜುಳ ಸಾವನ್ನಪ್ಪಿರುವ…
ನಂಜನಗೂಡು: ತಾಲ್ಲೂಕಿನ ಅಳಗಂಚಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಸೆರೆಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.…
ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿದೆ. ಹುಣಸೂರು ತಾಲ್ಲೂಕಿನ ಗುರುಪುರ ಕೆರೆ ಬಳಿ…
ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದಿಂದ ಆರಂಭಿಸಲ್ಪಟ್ಟಿದ್ದ ಜನ ಔಷಧ ಕೇಂದ್ರಗಳು ಹಲವು ವರ್ಷಗಳಿಂದ ರಾಜ್ಯದೆಲ್ಲೆಡೆ ಕಾರ್ಯನಿರ್ವಹಿಸುತ್ತಿವೆ. ಕಡು ಬಡಜನರಿಗೆ ಹಾಗೂ…