ಕ್ವೀನ್ಸ್ ಲ್ಯಾಂಡ್ (ಆಸ್ಟ್ರೇಲಿಯಾ): ಹಾವುಗಳು ಮನೆಯೊಳಗೆ ನುಗ್ಗಿದರೆ ಸಾಮಾನ್ಯವಾಗಿ ಅವು ಸಂದಿ ಗೊಂದಿಗಳಲ್ಲಿ ಅಡಗಿ ಕುಳಿತಿರುತ್ತವೆ. ಆದ್ರೆ, ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ನಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ..!
ಮಹಿಳೆಯೊಬ್ಬರೇ ಒಂಟಿಯಾಗಿ ವಾಸ ಮಾಡುತ್ತಿದ್ದ ಮನೆಯಲ್ಲಿ ರಾತ್ರಿ ವೇಳೆ ಆಕೆ ನಿದ್ರೆಗೆ ಜಾರಿ ಬೆಳಗ್ಗೆ ಎದ್ದು ನೋಡಿದರೆ, ಅವರ ಪಕ್ಕ ಹಾವು ಮಲಗಿರೋದು ನೋಡಿ ಗಾಬರಿಯಾಗಿದ್ದಾರೆ. ಸರಿ ಸುಮಾರು 6 ಅಡಿ ಉದ್ದದ ಹಾವು ಅವರ ಪಕ್ಕದಲ್ಲಿ ಮಲಗಿತ್ತು. ಮಹಿಳೆ ಎದ್ದು ಓಡಾಡಿದ್ದು ಅರಿವಿಗೆ ಬಂದ ಕೂಡಲೇ ಹಾಸಿಗೆಯಲ್ಲಿ ಬೆಡ್ಶೀಟ್ ನಡುವೆ ಹಾವು ಕೂಡಾ ಸರಿದಾಡಿತು. ಆಸ್ಟ್ರೇಲಿಯಾದ ಕಂದು ಹಾವು ಎಂದೇ ಕುಖ್ಯಾತವಾದ ಈ ಹಾವು ಅತ್ಯಂತ ವಿಷಕಾರಿ. ಹಾವನ್ನು ನೋಡಿದ್ದೇ ತಡ, ಮಹಿಳೆ ನಿಧಾನವಾಗಿ ತಮ್ಮ ಬೆಡ್ ರೂಂನಿಂದ ಹೊರಗೆ ಹೋಗಿ ಬಾಗಿಲನ್ನು ಹಾಕಿದರು. ಜೊತೆಗೆ ಹಾವು ಬಾಗಿಲಿನ ಸಂದಿಯಿಂದ ಹೊರಗೆ ಬಾರದಂತೆ ಟವಲ್ ಅಡ್ಡ ಇಟ್ಟರು. ಕೂಡಲೇ ಉರಗ ಸಂರಕ್ಷಕರಿಗೂ ಮಹಿಳೆ ಕರೆ ಮಾಡಿದರು.
ಮಹಿಳೆಯ ಫೋನ್ ಕರೆ ಸಿಕ್ಕಿದ್ದೇ ತಡ ಉರಗ ಸಂರಕ್ಷಕರು ಸ್ಥಳಕ್ಕೆ ಧಾವಿಸಿದರು. ಉರಗ ಸಂರಕ್ಷಕರು ಬರುವ ಹೊತ್ತಿಗೆ ಮಹಿಳೆ ಮನೆಯಿಂದ ಹೊರಗೆ ನಿಂತಿದ್ದರು. ಹಾವು ಇದ್ದ ಬೆಡ್ ರೂಂನ ಬಾಗಿಲಿನ ಬಳಿ ಟವಲ್ ಅಡ್ಡ ಇಡಲಾಗಿತ್ತು. ಹಾವು ಹೊರಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಮನೆಯಲ್ಲಿ ಮಹಿಳೆ ಮಾತ್ರ ಇದ್ದರು. ಉರಗ ಸಂರಕ್ಷಕರು ನಿಧಾನವಾಗಿ ಬೆಡ್ ರೂಂನ ಬಾಗಿಲು ತೆಗೆದು ನೋಡಿದರೆ ಹಾವು ಆರಾಮವಾಗಿ ಬೆಡ್ ಮೇಲೆ ಮಲಗಿತ್ತು. ಬಾಗಿಲ ಬಳಿ ಸದ್ದು ಆದಾಗ ಅತ್ತ ತಿರುಗಿದ ಹಾವು, ಉರಗ ಸಂರಕ್ಷಕರನ್ನೇ ದಿಟ್ಟಿಸಿ ನೋಡುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಉರಗ ಸಂರಕ್ಷಕರು ಬೆಡ್ ಮೇಲೆ ಮಲಗಿದ್ದ ಹಾವಿನ ಫೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಾಕಿದ್ದಾರೆ. 6 ಅಡಿ ಉದ್ದದ ಹಾವಿನ ಕುರಿತಾಗಿ ವಿವರಣೆಯನ್ನೂ ನೀಡಿದ್ಧಾರೆ.
ಹಾವುಗಳು ಸಾಮಾನ್ಯವಾಗಿ ಕಿಟಕಿ, ಬಾಗಿಲು ಹಾಗೂ ಸಂದಿಗಳಲ್ಲಿ ನುಸುಳಿ ಮನೆಯೊಳಗೆ ಬರುತ್ತವೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಹಾವುಗಳು ಮನೆಯೊಳಗೆ ನುಗ್ಗುತ್ತವೆ. ಇದೀಗ ಉರಗ ಸಂರಕ್ಷಕರು ರಕ್ಷಣೆ ಮಾಡಿದ ಹಾವನ್ನು ದೂರದ ಕಾಡುಗಳಲ್ಲಿ ಬಿಟ್ಟು ಬರಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಇನ್ನು ಹಾವು ಹಾಸಿಗೆ ಮೇಲೆ ಮಲಗಿದ್ದೇಕೆ ಎಂಬುದಕ್ಕೆ ವಿವರಣೆ ನೀಡಿರುವ ಉರಗ ಸಂರಕ್ಷಕರು, ಹೊರಗೆ ಬಿಸಿಲು ಇತ್ತು, ಬೆಡ್ ರೂಂ ಒಳಗೆ ತಣ್ಣಗೆ ಇತ್ತು. ಜೊತೆಗೆ ಬೆಡ್ ಮೆತ್ತಗೆ ಇತ್ತು. ಹೀಗಾಗಿ, ಹಾವಿಗೆ ಇದು ಹಿತಕರ ಎನಿಸಿರಬಹುದು. ಹಾಗಾಗಿ ನೆಮ್ಮದಿಯಾಗಿ ನಿದ್ರೆ ಹೋಗಿದೆ ಎಂದು ಅವರು ವಿವರಿಸುತ್ತಾರೆ. ಜೊತೆಗೆ ಮನೆಯೊಳಗೆ ಹಾವು ನುಗ್ಗಿದಾಗ ಗಾಬರಿಯಾದರೆ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಸಲಹೆ ನೀಡಿದ್ಧಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.