ಕಳ್ಳತನ: 31 ವರ್ಷ ಪೊಲೀಸರಿಗೆ ಸಿಗದೇ ಚಳ್ಳೇಹಣ್ಣು ತಿನ್ನಿಸಿದ್ದ ಆರೋಪಿ ಕೊನೆಗೂ ಅರೆಸ್ಟ್‌!

ಮೈಸೂರು: ಮೂರು ದಶಕಗಳ ಹಿಂದೆ ನಡೆದಿದ್ದ ಮನೆಗಳ್ಳತನ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರ ಬಲೆಗೆ ಕೊನೆಗೂ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಪಿರಿಯಾಪಟ್ಟಣದಲ್ಲಿ ಆರೋಪಿ ನಾಗರಾಜ್‌ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

1983ನೇ ಇಸವಿಯಲ್ಲಿ ನಡೆದ ಕಳ್ಳತನ ಪ್ರಕರಣ ಇದಾಗಿದೆ. ಕಳ್ಳತನದ ನಂತರ ತಲೆಮರೆಸಿಕೊಂಡಿದ್ದ ನಾಗರಾಜ್​ ನ್ಯಾಯಾಲಯಕ್ಕೂ ಹಾಜರಾಗದೇ, ಪೊಲೀಸರ ಕಣ್ಣಿಗೂ ಬೀಳದೆ ನಾಪತ್ತೆಯಾಗಿದ್ದ. ಆದರೆ, ಇದೀಗ ಪೊಲೀಸರು ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕಿನ ಕೀರನಹಳ್ಳಿ ಗ್ರಾಮದ ಬಸಪ್ಪ ಎಂಬವರ ಮನೆಯಲ್ಲಿ 1983ರಲ್ಲಿ ಕಳ್ಳತನ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತಾದರೂ, ಆರೋಪಿ ನಾಗರಾಜ್​ ತಲೆಮರೆಸಿಕೊಂಡಿದ್ದ.

× Chat with us