BREAKING NEWS

ಮೈಕಲ್‌ ಜೋರ್ಡಾನ್‌ ಧರಿಸಿದ್ದ ಶೂ $2.2 ಮಿಲಿಯನ್‌ಗೆ ಮಾರಾಟ

ಬಾಸ್ಕೆಟ್‌ಬಾಲ್‌ ದಿಗ್ಗಜ ಮೈಕಲ್‌ ಜೆಫ್ರಿ ಜೋರ್ಡಾನ್‌ ಅವರು 1998ರ ಎನ್‌ಬಿಎ ಅಂತಿಮ ಪಂದ್ಯದಲ್ಲಿ ಧರಿಸಿದ್ದ ‘ಏರ್ ಜೋರ್ಡಾನ್ 13‘ ಶೂ ದಾಖಲೆ $2.2 ಮಿಲಿಯನ್‌ಗೆ(₹180,545,950) ಮಾರಾಟವಾಗಿದೆ.ಈ ಮೂಲಕ ಜಗತ್ತಿನಲ್ಲಿಯೇ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಶೂ ಎಂದೆನಿಸಿದೆ. ಇದೇ ಆಟದಲ್ಲಿ ಧರಿಸಿದ್ದ ಜೆರ್ಸಿ $10.1 ಮಿಲಿಯನ್‌ಗೆ ಮಾರಾಟವಾಗಿತ್ತು.

ಈ ಹಿಂದೆ ಅಂದರೆ 2021ರಲ್ಲಿ ಅಮೆರಿಕದ ಜನಪ್ರಿಯ ರ್ಯಾಪ್‌ ಹಾಡುಗಾರ, ಯೀಜಿ(yeezy) ಕಂಪನಿಯ ಮಾಲೀಕ ಕಾನ್ಯೆ ವೇಸ್ಟ್‌ ಅವರ ‘ನೈಕ್ ಏರ್ ಯೀಜಿ 1‘ ಎಂಬ ಸ್ನೀಕರ್‌ ಈ ದಾಖಲೆಯನ್ನು ಹೊಂದಿತ್ತು. ಈ ಸ್ನೀಕರ್‌ಅನ್ನು ಅಮೆರಿಕ ಮೂಲದ ದಲ್ಲಾಳಿ ಕಂಪೆನಿ ಸೋಥೆಬಿಸ್‌ ಸುಮಾರು $1.8 ಮಿಲಿಯನ್‌ಗೆ ಮಾರಟ ಮಾಡಿತ್ತು. ಇದೇ ವೇಳೆ ಜೋರ್ಡಾನ್‌ ಅವರ ನೈಕ್‌ ‘ಏರ್‌ ಶಿಪ್‘ ಶೂ $1.47 ಮಿಲಿಯನ್‌ಗೆ ಮಾರಟವಾಗಿತ್ತು.

1998ರಲ್ಲಿ ನಡೆದ ‘ಎನ್‌ಬಿಎ ಫೈನಲ್‌ ಗೇಮ್‌ 2‘ ಸರಣಿಯಲ್ಲಿ ಚಿಕಾಗೋ ಬುಲ್ಸ್‌(ಜೋರ್ಡಾನ್‌ ಪ್ರತಿನಿಧಿಸಿದ ತಂಡ) ಮತ್ತು ಉತಾಹ್‌ ಜಾಝ್‌(utah jazz) ನಡುವೆ ಪಂದ್ಯ ಏರ್ಪಟ್ಟಿತ್ತು. ಈ ಪಂದ್ಯವು ಜೋರ್ಡಾನ್‌ ಅವರ ಕೊನೆಯ ಪಂದ್ಯವಾಗಿತ್ತು. ಈ ಪಂದ್ಯದ ವೇಳೆ ಜೋರ್ಡಾನ್‌ ‘ಏರ್ ಜೋರ್ಡಾನ್ 13‘ ಸ್ನೀಕರ್ಸ್ ಧರಿಸಿದ್ದರು. ಉತಾಹ್ ಜಾಝ್ ವಿರುದ್ಧ ಬುಲ್ಸ್ 93-88 ಅಂತರದಲ್ಲಿ ಗೆಲುವು ಪಡೆದು ಚಾಂಪಿಯನ್‌ ಆಗಿತ್ತು. ಈ ಪಂದ್ಯವನ್ನು ‘ಲಾಸ್ಟ್‌ ಡ್ಯಾನ್ಸ್‌‘ ಎಂದು ಕರೆಯಲಾಗಿದೆ.

ಜೋರ್ಡಾನ್‌ ವೃತ್ತಿಪರ ಬಾಸ್ಕೆಟ್‌ಬಾಲ್‌ ಆಟಗಾರರಾಗಿದ್ದು, ಚಿಕಾಗೋ ಬುಲ್ಸ್‌ ತಂಡದಲ್ಲಿ ಪ್ರತಿನಿಧಿಸಿ ಸುಮಾರು 15 ಎನ್‌ಬಿಎ ಸರಣಿಯಲ್ಲಿ ಆಡಿದ್ದಾರೆ. ಆರು ಬಾರಿ ಎನ್‌ಬಿಎ ಚಾಂಪಿಯನ್‌ಶಿಪ್‌ ಗೆದ್ದಿದ್ದಾರೆ. 1980 ಮತ್ತು 1990 ರ ದಶಕದಲ್ಲಿ ವಿಶ್ವದಾದ್ಯಂತ ಬಾಸ್ಕೆಟ್‌ಬಾಲ್‌ ಜನಪ್ರಿಯತೆ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

lokesh

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

7 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

7 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

7 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

8 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

8 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

8 hours ago