ಉತ್ತರ ಪ್ರದೇಶ : ಕೆಲವು ವಾರಗಳ ಹಿಂದೆ ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿದ್ದ ಉತ್ತರ ಪ್ರದೇಶದ ಹಳ್ಳಿಯೊಂದರ ಎರಡೂವರೆ ವರ್ಷಗಳ ಹೆಣ್ಣು ಮಗು ರೇಬಿಸ್ ಸೋಂಕಿಗೆ ತುತ್ತಾಗಿ ಸೋಮವಾರ ಮೃತಪಟ್ಟಿದೆ. ಈ ಮಗುವಿನ ಸಾವು ಇಡೀ ಗ್ರಾಮಕ್ಕೇ ಆತಂಕ ತಂದೊಡ್ಡಿದೆ.
ಈ ಮಗು ಸಾವನ್ನಪ್ಪುವ ಮುನ್ನ 40ಕ್ಕೂ ಹೆಚ್ಚು ಜನರಿಗೆ ಕಚ್ಚಿದೆ. ಇದೀಗ ಎಲ್ಲರಿಗೂ ರೇಬಿಸ್ ಸೋಂಕು ತಗುಲಿದೆ. ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಕೊಂಚ್ ತಾಲ್ಲೂಕಿನ ಕ್ಯೋಲಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಣ್ಣು ಮಗು ತನ್ನ ತಾಯಿಯ ಜೊತೆ ಸೋದರ ಮಾವನ ಮನೆಯಲ್ಲಿ ಇತ್ತು. ಈ ವೇಳೆ ಮಗುವಿಗೆ ಬೀದಿ ನಾಯಿಗಳು ಕಡಿದಿದ್ದವು. ಹೀಗಾಗಿ, ಮಗು ರೇಬಿಸ್ ಸೋಂಕಿಗೆ ತುತ್ತಾಗಿತ್ತು.
ಆದರೆ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರಲಿಲ್ಲ. ಈ ಮಗು ಕಳೆದ ಮೂರು ವಾರಗಳ ಅವಧಿಯಲ್ಲಿ ಗ್ರಾಮದ 40 ಜನರಿಗೆ ಕಚ್ಚಿತ್ತು. ಇದೀಗ ಎಲ್ಲರೂ ರೇಬಿಸ್ ಸೋಂಕಿಗೆ ಒಳಗಾಗಿದ್ದಾರೆ. ಇನ್ನು ಈ ಬಾಲಕಿಗೆ ಕಡಿದ ಬಳಿಕ ರೇಬಿಸ್ ಸೋಂಕಿತ ಬೀದಿ ನಾಯಿ ಕೂಡಾ ಸಾವನ್ನಪ್ಪಿತ್ತು.
ಮಗುವಿಗೆ ನಾಯಿ ಕಡಿದ ಬಳಿಕ ಪೋಷಕರು ಗ್ರಾಮದ ನಾಟಿ ವೈದ್ಯರ ಬಳಿ ಕರೆದೊಯ್ದಿದ್ದರು. ಯಾವುದೇ ವೃತ್ತಿಪರ ಪದವೀಧರ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿರಲಿಲ್ಲ. ಮಗುವನ್ನು ಗ್ರಾಮಕ್ಕೆ ವಾಪಸ್ ಕರೆ ತಂದ ಬಳಿಕ ಮಗುವಿನ ದೇಹದಲ್ಲಿ ರೇಬಿಸ್ ರೋಗದ ಲಕ್ಷಣಗಳು ಕಂಡು ಬಂದಿದ್ದವು. ಆದರೆ, ಮಗುವಿನ ಪೋಷಕರು ಮಾತ್ರ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರೇಬಿಸ್ ರೋಗದ ಲಕ್ಷಣ ಹೊಂದಿದ್ದ ಮಗುವು ತನ್ನ ಬಳಿ ಬಂದ ಎಲ್ಲರಿಗೂ ಉಗುರಿನಿಂದ ಪರಚುತ್ತಿತ್ತು. ಸಿಕ್ಕ ಸಿಕ್ಕ ಕಡೆ ಕಚ್ಚುತ್ತಿತ್ತು. ಮಗುವಿನ ವರ್ತನೆಯಲ್ಲಿ ವಿಪರೀತ ಬದಲಾವಣೆ ಕಂಡು ಬಂದಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಕಳೆದ ಶುಕ್ರವಾರ ಮಗು ಕುಸಿದು ಬಿದ್ದಾಗ ಮಗುವಿನ ಹೆತ್ತವರು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಜಿಲ್ಲಾಸ್ಪತ್ರೆ ವೈದ್ಯರು ಕೂಡಲೇ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಝಾನ್ಸಿಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಆದರೆ, ಕುಟುಂಬಸ್ಥರು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಮಗು ಸಾವನ್ನಪ್ಪಿದೆ.
ಮಗು ಕಚ್ಚಿದ ಪರಿಣಾಮ ಇದೀಗ ಕ್ಯೋಲಾರಿ ಗ್ರಾಮದ 40 ಜನರು ರೇಬಿಸ್ ಸೋಂಕಿತರಾಗಿದ್ದಾರೆ. ಎಲ್ಲರಿಗೂ ರೇಬಿಸ್ ಸೋಂಕು ನಿರೋಧಕ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ದಿನೇಶ್ ಬರ್ದಾರಿಯಾ ಅವರು ಹೇಳಿದ್ದಾರೆ. ರೇಬಿಸ್ ಸೋಂಕಿನ ವಿರುದ್ದ ಚಿಕಿತ್ಸೆ ನೀಡಲು ಸೂಕ್ತ ವೈದ್ಯಕೀಯ ವ್ಯವಸ್ಥೆ ಲಭ್ಯವಿದೆ. ಹೀಗಾಗಿ, ಯಾರೂ ಆತಂಕಕ್ಕೆ ಒಳಗಾಗೋದು ಬೇಡ ಎಂದು ವೈದ್ಯರು ಅಭಯ ಹೇಳಿದ್ದಾರೆ. ಆದರೂ ಗ್ರಾಮಸ್ಥರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.
ಮೈಸೂರು : ‘ಹಳೆಯ ಮೈಸೂರು ರಕ್ಷಣೆಯ ನಿಟ್ಟಿನಲ್ಲಿ ಕಾಲಕಾಲಕ್ಕೆ ಸೂಕ್ತ ಕ್ರಮ ವಹಿಸಬೇಕು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೂ ಆದ್ಯತೆ ನೀಡಬೇಕು.…
ಬೆಳಗಾವಿ : ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ಇದೇ ಪ್ರಥಮಬಾರಿಗೆ ಬೆಳಗಾವಿ ಸುವರ್ಣ ವಿಧಾನಸೌಧದ ಉತ್ತರ ಪ್ರವೇಶ ದ್ವಾರದ ಬಳಿ ಇರುವ…
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…
ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…
ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…