ನಾಯಿಯನ್ನು ನುಂಗಿದ ಹೆಬ್ಬಾವು! ಎಲ್ಲಿ…?

ಯಳಂದೂರು: ಫಾರಂ ಹೌಸ್‌ವೊಂದರಲ್ಲಿ ಸಾಕು ನಾಯಿಯನ್ನು ಹೆಬ್ಬಾವು ನುಂಗಿರುವ ಘಟನೆ ತಾಲ್ಲೂಕಿನ ಮುರಟಿಪಾಳ್ಯದಲ್ಲಿ ನಡೆದಿದೆ.

ಸಂತೇಮರಹಳ್ಳಿ ಸ್ನೇಕ್ ಮಹೇಶ್ ಅವರು ಹೆಬ್ಬಾವನ್ನು ಸಂರಕ್ಷಿಸಿ ಬಿಳಿಗಿರಿರಂಗನಬೆಟ್ಟದ ಕಾಡಿಗೆ ಬಿಟ್ಟರು.

ಹರೀಶ್ ಒಡೆತನದ ಜಾಕ್ನಿಲ್ ಫ್ಯಾಕ್ಟರಿ ಬಳಿ ಹೆಬ್ಬಾವು ಕಾಣಿಸಿಕೊಂಡಿತ್ತು. ಇಂಡಿಯನ್ ರಾಕ್ ಫೈತಾನ್ (ಫೈತಾನ್ ಮೊಲುರಸ್) ಹೆಸರಿನ ಹೆಬ್ಬಾವು ಈ ಭಾಗಗಳಲ್ಲಿ ವಿಶೇಷವಾಗಿ ಕಾಣಸಿಗುತ್ತವೆ. 4 ಮೀಟರ್ ತನಕ ಬೆಳೆಯುತ್ತದೆ. ವಿಷರಹಿತ ಉರಗ ವಾಗಿದ್ದು, ಜನರು ಆತಂಕ ಪಡಬೇಕಿಲ್ಲ ಎಂದು ಸ್ನೇಕ್ ಮಹೇಶ್ ಹೇಳಿದರು.

× Chat with us