ಬೀಜಿಂಗ್ : 2 ಲಕ್ಷ ರೂ. ಬಹುಮಾನಕ್ಕಾಗಿ ಆಫಿಸ್ ಪಾರ್ಟಿಯಲ್ಲಿ 10 ನಿಮಿಷದಲ್ಲಿ ಒಂದು ಲೀಟರ್ ಹಾರ್ಡ್ ಡ್ರಿಂಕ್ಸ್ ಕುಡಿದು ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಚೀನಾದಲ್ಲಿ ನಡೆದಿದೆ.
ಝಾಂಗ್ ಎಂಬಾತ ತನ್ನ ಕಚೇರಿಯ ಸಹೋದ್ಯೋಗಿಗಳಿಗೆ ಮಾಲೀಕ ಆಯೋಜಿದ್ದ ಔತಣಕೂಟಕ್ಕೆ ತೆರಳಿದ್ದ. ಈ ವೇಳೆ ಕುಡಿಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಯಾರಾದರೂ ಕುಡಿತದಲ್ಲಿ ಝಾಂಗ್‍ನನ್ನು ಮೀರಿಸಿದರೆ 20,000 ಯುವಾನ್ ಬಹುಮಾನವನ್ನು ನೀಡುವುದಾಗಿ ಈ ವೇಳೆ ಘೋಷಿಸಲಾಗಿದೆ. ಸ್ಪರ್ಧೆಯಲ್ಲಿ ಸೋತರೆ ಅದೇ ಮೊತ್ತದ ಪಾರ್ಟಿ ಕೊಡಿಸುವಂತೆ ಹೇಳಲಾಗಿದೆ. ಬಳಿಕ ತೀವ್ರ ಮದ್ಯ ಸೇವನೆ ಮಾಡಿದ ಝಾಂಗ್ ಅಸ್ವಸ್ಥನಾಗಿ ಮೃತಪಟ್ಟಿದ್ದಾನೆ.
ಔತಣಕೂಟದಲ್ಲಿದ್ದ ಉದ್ಯೋಗಿಯೊಬ್ಬರು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಝಾಂಗ್ 10 ನಿಮಿಷಗಳಲ್ಲಿ ಒಂದು ಲೀಟರ್ ಬೈಜು ಎಂಬ ಹಾರ್ಡ್ ಡ್ರಿಂಕ್ಸ್ ಕುಡಿದಿದ್ದಾನೆ. ಇದು 30% ರಿಂದ 60% ರಷ್ಟು ವಿಶಿಷ್ಟವಾದ ಆಲ್ಕೋಹಾಲ್ ಅಂಶ ಹೊಂದಿರುವ ಚೈನೀಸ್ ಸ್ಪಿರಿಟ್ ಆಗಿದೆ ಎಂದು ತಿಳಿಸಿದ್ದಾರೆ.
ಝಾಂಗ್ ಕುಸಿದು ಬಿದ್ದ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಉಸಿರುಗಟ್ಟುವಿಕೆ ಮತ್ತು ಹೃದಯ ಸ್ತಂಭನದಿಂದ ಮೃತಪಟ್ಟರು ಎಂದು ಹೇಳಿದ್ದಾರೆ. ಇದೇ ಮದ್ಯವನ್ನು ಸೇವಿಸಿ ಚೀನಾದಲ್ಲಿ ಇತ್ತೀಚೆಗೆ ಪ್ರಭಾವಿ ಒಬ್ಬರು ಮೃತಪಟ್ಟಿದ್ದರು. ಬಳಿಕ ಈ ಮದ್ಯದ ಬಗ್ಗೆ ಚೀನಾದಲ್ಲಿ ಭಾರೀ ಚರ್ಚೆ ಶುರುವಾಗಿದೆ.
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್ ಕಾರ್ತಿಕೇಯ-ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…
ಉಡುಪಿ: ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಉಡುಪಿಗೆ ಆಗಮಿಸಿದ್ದು, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇಂದು…
ಹಾಸನ: ಕಾಫಿ ಬೆಳೆಗೆ ಉತ್ತಮ ಬೆಲೆ ಬಂದಿರುವ ಪರಿಣಾಮ ಮಲೆನಾಡು ಭಾಗದಲ್ಲಿ ಕಾಫಿ ಕಳವು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.…
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಮದುವೆ ಮುಂದೂಡಿಕೆಯಾಗಿತ್ತು.…