ಜೀವನದಲ್ಲಿ ಜಿಗುಪ್ಸೆ: ವ್ಯಕ್ತಿ ನೇಣಿಗೆ ಶರಣು

ಕೆ.ಆರ್‌.ಪೇಟೆ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೈಸೂರಿನ ಉದಯಗಿರಿಯಲ್ಲಿ ವಾಷಿಂಗ್ ಲಾಂಡ್ರಿ ನಡೆಸುತ್ತಿದ್ದ ಕೆ.ಆರ್.ಪೇಟೆ ತಾಲ್ಲೂಕಿನ ಜಾಗಿನಕೆರೆಯ ಬೆಟ್ಟಶೆಟ್ಟರ ಅಳಿಯ ಶಂಕರ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಶಂಕರ್ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸಂಸಾರದ ನಿರ್ವಹಣೆಗಾಗಿ ವಾಷಿಂಗ್ ಲಾಂಡ್ರಿ ಇಟ್ಟುಕೊಂಡು ಬಟ್ಟೆಗಳನ್ನು ಒಗೆದು ಐರನ್ ಮಾಡಿಕೊಂಡಿದ್ದರು.

ಶುಕ್ರವಾರ ಪತ್ನಿ ಹಾಗೂ ಮಕ್ಕಳನ್ನು ತಮ್ಮ ಮಾವನ ಊರಾದ ಜಾಗಿನಕೆರೆಗೆ ಕಳಿಸಿಕೊಟ್ಟು ಮನೆಯಲ್ಲಿ ಯಾರೂ ಇಲ್ಲದ್ದಿದ್ದಾಗ ಶಂಕರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಮೈಸೂರಿನ ಉದಯಗಿರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us