ಮೈಸೂರಿನಲ್ಲಿ ಮಳೆಯಿಂದಾಗಿ ಕುಸಿದು ಬಿದ್ಧ ಮನೆ: ಐವರ ರಕ್ಷಣೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಠಿಸಿದ್ದು ಈ ನಡುವೆ ನಗರದ ಮಂಡಿ ಮೊಹಲ್ಲಾದಲ್ಲಿ ಮನೆ ಕುಸಿದುಬಿದ್ದ ಘಟನೆ ನಡೆದಿದೆ.

ನಿರಂತರ ಮಳೆಯಿಂದಾಗಿ ಮುಂಜಾನೆ 5.30ರ ವೇಳೆಯಲ್ಲಿ ಮಂಡಿ ಮೊಹಲ್ಲಾದಲ್ಲಿ ಮನೆ ಕುಸಿದಿದ್ದು, ಮನೆಯಲ್ಲಿ ಸಿಲುಕಿದ ಐವರನ್ನ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮನೆ ಕುಸಿದ ಮಾಹಿತಿ ಅರಿತು ಸ್ಥಳಕ್ಕಾಗಮಿಸಿ ಕಾರ್ಯ ಪ್ರವೃತ್ತರಾಗಿರುವ ಅಗ್ನಿಶಾಮಕ ದಳದ ಸಿಬ್ಬಂದಿ, ಮನೆಯಲ್ಲಿ ಸಿಲುಕಿದ್ಧ ಮಹದೇವರಾವ್, ನಾಗರತ್ನ,ಅಕ್ಷಯ್, ಪೃಥ್ವಿ ಹಾಗೂ ವೃದ್ದೆ ನೀಲಮ್ಮ ಭಾಯ್ ರನ್ನ ರಕ್ಷಣೆ ಮಾಡಿದ್ದಾರೆ.

ಸುಮಾರು ಒಂದು ಗಂಟೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಸದ್ಯ ಅವಶೇಷಗಳಡಿಯಲ್ಲಿ ಸಿಲುಕಿದ ಐವರು ಸೇಫ್ ಆಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

× Chat with us