ಕುಡಿದ ಮತ್ತಿನಲ್ಲಿ ಬೆತ್ತಲಾಗಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆ: ಕುಡುಕನ ಪರನಿಂತು ಮಕ್ಕಳಿಂದ ದಾಂಧಲೆ!

ಚಾಮರಾಜನಗರ: ಪಾನಮತ್ತ ವ್ಯಕ್ತಿ ಬೆತ್ತಲಾಗಿ ಓಡಾಡುವುದಲ್ಲದೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿರುವ ವಿಡಿಯೊ ವೈರಲ್‌ ಆಗಿದೆ.

ತಾಲ್ಲೂಕಿನ ಪುಣಜನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನರೇಗಾ ಕಾಮಗಾರಿಯಲ್ಲಿ ನಿರತರಾಗಿದ್ದ ಮಹಿಳೆಯರ ಮುಂದೆ ಅಶ್ಲೀಲ ವರ್ತಿಸಿದ್ದಾನೆ.

ವ್ಯಕ್ತಿಯ ಅಸಭ್ಯ ವರ್ತನೆಯನ್ನು ಸ್ಥಳೀಯರು ವಿಡಿಯೊ ಮಾಡಿ ಪೊಲೀಸರಿಗೆ ನೀಡಿದ್ದಾರೆ. ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಿಂದ ಕುಪಿತಗೊಂಡ ಪಾನಮತ್ತ ವ್ಯಕ್ತಿಯ ಮಕ್ಕಳು, ವಿಡಿಯೊ ಮಾಡಿ ಪೊಲೀಸರಿಗೆ ನೀಡಿದ್ದವರ ಮೇಲೆ  ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅಶ್ಲೀಲವಾಗಿ ವರ್ತಿಸಿದ ತಾಂಡವಮೂರ್ತಿ, ಆತನ ಮಕ್ಕಳಾದ ಮಹೇಂದ್ರ, ಸಂತೋಷರನ್ನು ಬಂಧಿಸಲಾಗಿದೆ. ಈ ಸಂಬಂಧ ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us