ಬೆಂಗಳೂರು : ಭಾರತ ತಂಡದ ಖ್ಯಾತ ಕ್ರಿಕೆಟ್ ಆಟಗಾರ, ಕನ್ನಡಿಗ. ಸಾಕಷ್ಟು ಜನ ಅಭಿಮಾನಿಗಳನ್ನು ಹೊಂದಿರುವ ಕೆ.ಎಲ್.ರಾಹುಲ್ ವಿದ್ಯಾರ್ಥಿಯೊಬ್ಬನಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಹಾಲಿಂಗಪುರದ ಅಮೃತ ಮಾವಿನಕಟ್ಟಿ ಎಂಬ ಸಾಮಾನ್ಯ ಯುವಕ ಮೊನ್ನೆಯಷ್ಟೇ ಪಿಯುಸಿ ಕಾಮರ್ಸ್ ವಿಷಯದಲ್ಲಿ 600ಕ್ಕೆ 571 ಅಂಕಗಳನ್ನು ಪಡೆದಿದ್ದಾನೆ. ಈತನನ್ನ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಂಜುನಾಥ ಹೆಬಸೂರು ಸಹೋದರ ನಿತೀನ್, ಹುಬ್ಬಳ್ಳಿಯ ಕೆಎಲ್ಇ ಸಂಸ್ಥೆಯಲ್ಲಿರುವ ಬಿಕಾಂ ಜೊತೆಗೆ ಸಿಎ ಕೋಚಿಂಗ್ ಅಡ್ಮಿಷನ್ಗೆ ಕರೆದುಕೊಂಡು ಬರ್ತಾನೆ. ಕಾಲೇಜಿನ ಆಡಳಿತ ಮಂಡಳಿ 85 ಸಾವಿರ ರೂಪಾಯಿ ಫೀಸ್ ಕಟ್ಟಬೇಕಾಗುತ್ತದೆ. ಆದರೆ ಒಳ್ಳೆಯ ಮಾರ್ಕ್ಸ್ ತಗೆದುಕೊಂಡಿರುವುದಕ್ಕೆ 10 ಸಾವಿರ ರೂ ರಿಯಾಯ್ತಿ ಕೊಡುತ್ತೇವೆ. ಒಟ್ಟು 75 ಸಾವಿರ ಹಣವನ್ನು ತುಂಬಲು ಹೇಳುತ್ತಾರೆ.
ವಿದ್ಯಾರ್ಥಿ ಅಮೃತನ ಕುಟುಂಬದ ಆರ್ಥಿಕ ಪರಿಸ್ಥಿತಿ ಸದೃಢವಾಗಿಲ್ಲದ ಕಾರಣ ಜೊತೆಗಿದ್ದ ಸಹೋದರ ನಿತೀನ್, ನನಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದ. ಅಲ್ಲದೆ ನಮ್ಮ ಬಳಿ 25 ಸಾವಿರ ಅದಾವಣ್ಣಾ, ಉಳಿದ 50 ಸಾವಿರ ಅಡ್ಜಸ್ಟ್ ಮಾಡು ಅಂತಾನೆ. ಆಗಲಿ ಅಂತಾ ಎಂಜಿನಿಯರಿಂಗ್ ಗೆಳೆಯ ಅಕ್ಷಯಗೆ ಕರೆ ಮಾಡಿ ಪರಿಸ್ಥಿತಿ ಎಲ್ಲವನ್ನೂ ಮಂಜುನಾಥನ ಬಳಿ ವಿವರಿಸುತ್ತಾರೆ.
ಜೊತೆಗೆ ನಾನು ಕೂಡ ಸ್ವಲ್ಪ ಹಣ ಕೊಡುತ್ತೇನೆ ಅಂತಾ ಹೇಳುತ್ತಾರೆ. ಗೆಳೆಯ ಅಕ್ಷಯ ಕೂಡ ಆಯ್ತು ನೋಡ್ತೇವೆ ಅಂತಾ ಹೇಳಿ, ನೇರವಾಗಿ ಕೆ ಎಲ್ ರಾಹುಲ್ ಅವರಿಗೆ ಕರೆ ಮಾಡಿ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಇದ್ದಾನೆ. ಅವನಿಗೆ ಕಾಲೇಜು ಅಡ್ಮಿಷನ್ ಆಗಬೇಕಿದೆ. ಅವನ ಬಳಿ ದುಡ್ಡಿಲ್ಲ ಅಂದಿದ್ದಾನೆ. ಕೂಡಲೇ ಎಚ್ಚೆತ್ತ ರಾಹುಲ್ ಅವರು ಆ ವಿದ್ಯಾರ್ಥಿಯ ಕಾಲೇಜಿನ ಎಲ್ಲ ಫೀಸನ್ನು ನಾನೇ ತುಂಬುತ್ತೇನೆ. ಅವರ ಅಕೌಂಟ್ ಡಿಟೇಲ್ಟ್ ತೆಗೆದುಕೊಳ್ಳೀ ಎಂದು ಸೂಚಿಸುತ್ತಾರೆ.
ಕೇಳಿದ್ದು 50 ಸಾವಿರ ಮಾತ್ರ. ಆದರೆ ಅವನಿಗೆ ಊಟಕ್ಕೆ, ಪುಸ್ತಕಕ್ಕೆ ಹಣ ಬೇಕಾಗುತ್ತದೆ ಅಂತಾ ಪೂರ್ತಿ 75 ಸಾವಿರ ರೂಪಾಯಿ ಹಣವನ್ನ ಸ್ವತಃ ರಾಹುಲ್ ಆ ವಿದ್ಯಾರ್ಥಿಯ ಅಕೌಂಟ್ಗೆ ಹಾಕಿದ್ದಾರೆ. ಎಂಜಿನಿಯರಿಂಗ್ ಗೆಳೆಯ ಅಕ್ಷಯ, ಕ್ರಿಕೆಟ್ ಆಟಗಾರರರ ಜೊತೆಗೆ ಉತ್ತಮ ಸ್ನೇಹ ಸಂಬಂಧದಿಂದ ಇದು ಸಾಧ್ಯವಾಗಿದೆ. ಇನ್ನು ಸಹಾಯವನ್ನು ಪಡೆದ ವಿದ್ಯಾರ್ಥಿ ಅಮೃತ ಮಾವಿನಕಟ್ಟಿ ಸಹ ಕೆಎಲ್ ರಾಹುಲ್, ಮಂಜುನಾಥ ಹೆಬಸೂರು, ನಿತೀನ್ ಹಾಗೂ ಅಕ್ಷಯ ಅವರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬೆಳಗಾವಿ: ಸುವರ್ಣ ಸೌಧದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ…
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ…
ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್…
ಮೈಸೂರು: ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡುತ್ತಿರುವವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ. ಮುಡಾ ಪ್ರಕರಣಕ್ಕೆ…