ಮಹಿಳೆ ಮೇಲೆ ಅತ್ಯಾಚಾರ: ಜಮೀನು ಮಾಲೀಕ ಬಂಧನ

ಚಾಮರಾಜನಗರ: ತಾಲ್ಲೂಕಿನ ಪುತ್ತನಪುರದಲ್ಲಿ ಕೂಲಿ ಕಾರ್ಮಿಕ ಮೂಕ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜಮೀನು ಮಾಲೀಕನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಬಸವಣ್ಣ (೫೫) ಬಂಧಿತ ಆರೋಪಿ. ಈತ ತನ್ನ ಜಮೀನಿಗೆ ಪ್ರತಿನಿತ್ಯ ಕೂಲಿ ಕೆಲಸಕ್ಕೆ ಬರುತ್ತಿದ್ದ ಅದೇ ಗ್ರಾಮದ ೪೫ ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈಚೆಗೆ ತಪಾಸಣೆಗೆ ವೈದ್ಯರ ಬಳಿ ಹೋದಾಗ ಮಹಿಳೆಯು ಗರ್ಭೀಣಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.

ಈ ಸಂಬಂಧ ಸಂತ್ರಸ್ತೆ ಸಹೋದರಿ ನೀಡಿದ ದೂರಿನನ್ವಯ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

× Chat with us