BREAKING NEWS

ತ್ರಿಪುರಾದಲ್ಲಿ ರಥಯಾತ್ರೆ ವೇಳೆ ವಿದ್ಯುತ್‌ ಪ್ರವಹಿಸಿ 7 ಮಂದಿ ದುರ್ಮರಣ

ತ್ರಿಪುರಾ : ಜಗನ್ನಾಥ ರಥಯಾತ್ರೆ ವೇಳೆ ವಿದ್ಯುತ್‌ ಪ್ರವಹಿಸಿ ಇಬ್ಬರು ಮಕ್ಕಳು ಸೇರಿ ಏಳು ಜನ ಮೃತಪಟ್ಟಿರುವ ಘಟನೆ ತ್ರಿಪುರಾದ ಉನಕೋಟಿ ಜಿಲ್ಲೆಯ ಕುಮಾರಘಾಟ್‌ನಲ್ಲಿ ನಡೆದಿದೆ. ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಮಾರಘಾಟ್‌ನಲ್ಲಿ ಜಗನ್ನಾಥ ದೇವರ ವಾರ್ಷಿಕ ರಥಯಾತ್ರೆ ನಡೆಯುತ್ತಿತ್ತು. ಇಸ್ಕಾನ್ ಈ ಆಚರಣೆ ಆಯೋಜಿಸಿತ್ತು. ಉತ್ಸಾಹದಿಂದ ರಥ ಎಳೆದ ಜನ ರಥವನ್ನು ಮರಳಿ ಮೂಲಸ್ಥಾನಕ್ಕೆ ಎಳೆದು ತರುವಾಗ ಆಕಸ್ಮಿಕವಾಗಿ ರಥದ ಮೇಲ್ಬಾಗಕ್ಕೆ ತಾಗಿದ ಹೈವೋಲ್ಟೇಜ್‌ ವಿದ್ಯುತ್‌ ತಂತಿಯಿಂದ ಅವಘಡ ಸಂಭವಿಸಿದೆ. ರಥದ ಕಬ್ಬಿಣದ ಭಾಗ ಹಿಡಿದುಕೊಂಡಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉತ್ಸವದ ವೇಳೆ ಸಹೋದರ ದೇವತೆಗಳಾದ ಬಲಭದ್ರ, ದೇವಿ ಸುಭದ್ರ ಮತ್ತು ಜಗನ್ನಾಥ ದೇವರ ವಿಗ್ರಹಗಳನ್ನು ರಥ ಯಾತ್ರೆ ಆರಂಭವಾದ ಒಂದು ವಾರದ ಬಳಿಕ ರಥದಲ್ಲಿ ಮೂಲಸ್ಥಾನಕ್ಕೆ ಸಾಗಿಸಲಾಗುತ್ತಿತ್ತು. ಸಾವಿರಾರು ಭಕ್ತರು ರಥ ಎಳೆಯುತ್ತಿದ್ದರು. ಕಬ್ಬಿಣದಿಂದ ಮಾಡಿದ ರಥಕ್ಕೆ ಭಾರಿ ಅಲಂಕಾರಗಳನ್ನು ಮಾಡಲಾಗಿತ್ತು. ಮೇಲ್ಭಾಗದಲ್ಲಿ ಹೋಗಿದ್ದ 133 ಕಿಲೋ ವ್ಯಾಟ್ ವಿದ್ಯುತ್ ಕೇಬಲ್‌ಗೆ ಕಬ್ಬಿಣದ ಭಾಗ ತಾಗಿದೆ. ಏನಾಗುತ್ತಿದೆ ಎನ್ನುವುದು ಅರಿವಾಗುವುದರ ಒಳಗೆ ರಥಕ್ಕೆ ಕೂಡಲೇ ಬೆಂಕಿ ಹತ್ತಿಕೊಂಡಿದೆ. ರಥದ ಮೇಲಿದ್ದ ಜನರು ರಸ್ತೆ ಮೇಲೆ ಉರುಳಿ ಬಿದ್ದಿದ್ದಾರೆ. ಅವರ ದೇಹದಲ್ಲಿ ಬೆಂಕಿ ಧಗಧಗಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾದರು. ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 16 ಜನರಿಗೆ ಸುಟ್ಟ ಗಾಯಗಳಾಗಿವೆ ಎಂದು ಸಹಾಯಕ ಇನ್‌ಸ್ಪೆಕ್ಟರ್ ಜನರಲ್ (ಕಾನೂನು ಮತ್ತು ಸುವ್ಯವಸ್ಥೆ) ಜ್ಯೋತಿಷ್ಮಾನ್ ದಾಸ್ ಚೌಧರಿ ತಿಳಿಸಿದ್ದಾರೆ.

ಮೃತರಲ್ಲಿ ಎರಡು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಗಾಯಾಳುಗಳನ್ನು ಜಿಲ್ಲೆಯ ಕೈಲಾಶನಗರ ಮತ್ತು ಕುಮಾರಘಾಟ್ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಇನ್ನು ಏಳು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಅಗರ್ತಲಾದ ಜಿಪಿ ಪಂತ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತರ ಕುಟುಂಬಗಳಿಗೆ ಪರಿಹಾರ : ವಿಷಯ ತಿಳಿಯುತ್ತಲೇ ಮುಖ್ಯಮಂತ್ರಿ ಮಾಣಿಕ್‌ ಷಾ ಅವರು ಅಗರ್ತಲಾದಿಂದ ಕುಮಾರಘಾಟ್‌ಗೆ ದೌಡಾಯಿಸಿದರು. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ”ಮೃತರ ಕುಟುಂಬಗಳಿಗೆ, ಗಾಯಾಳುಗಳಿಗೆ ಸರಕಾರ ಎಲ್ಲಾ ರೀತಿಯ ಸಹಾಯ ನೀಡಲಿದೆ,” ಎಂದು ಹೇಳಿದರು. ‘ಉಲ್ಟೋ ರಥ್’ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿದ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಸಿಎಂ ಆದೇಶ ನೀಡಿದ್ದಾರೆ.

ಮೃತರ ಕುಟುಂಬಗಳಿಗೆ 4 ಲಕ್ಷ ರೂ ಪರಿಹಾರವನ್ನು ಸಿಎಂ ಮಾಣಿಕ್ ಷಾ ಘೋಷಿಸಿದ್ದಾರೆ. ಶೇ 60ಕ್ಕಿಂತ ಹೆಚ್ಚು ಸುಟ್ಟ ಗಾಯಗಳಿಗೆ ಒಳಗಾದವರಿಗೆ 2.5 ಲಕ್ಷ ರೂ ಹಾಗೂ ಶೇ 40-60ರಷ್ಟು ಸುಟ್ಟ ಗಾಯಗಳಿಗೆ ಒಳಗಾದವರಿಗೆ 75 ಸಾವಿರ ರೂ ನೀಡುವುದಾಗಿ ಪ್ರಕಟಿಸಿದ್ದಾರೆ. ಪ್ರಧಾನಿ ಪರಿಹಾರ ನಿಧಿಯಿಂದ ಕೂಡ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಹಾಗೂ ಗಾಯಾಳುಗಳಿಗೆ 50 ಸಾವಿರ ರೂ ಘೋಷಿಸಿದ್ದಾರೆ.

lokesh

Recent Posts

ಗಾಂಧಿಯ ಸರಳತೆಯತ್ತ ನಡೆಯುತ್ತಿರುವ ಯುವಜನತೆ

ಮಹಾತ್ಮ ಗಾಂಧೀಜಿ ಅವರ ಆತ್ಮಕತೆಗೆ ನೂರು ವರ್ಷ ಸಂದಿರುವುದು ಸಂತಸದ ವಿಷಯ. ಇವತ್ತು ಗಾಂಧಿಜಿ ಅವರ ವಿಚಾರಕ್ಕೆ ಏನಾಗುತ್ತಿದೆ? ಆಚಾರಕ್ಕೆ…

2 hours ago

ಮಾರ್ಟಿನ್ ಲೂಥರ್ ಕಿಂಗ್ ಕಣ್ಣಲ್ಲಿ ಮಹಾತ್ಮ ಗಾಂಧಿ…

ಗೋವಿಂದರಾಜು ಲಕ್ಷ್ಮೀಪುರ, ಇಂಗ್ಲಿಷ್ ಸಹಪ್ರಾಧ್ಯಾಪಕ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು ಭಗವಂತ ಯೇಸು ನಮಗೆ ದಾರಿ ಅಂದರೆ, ಶಾಂತಿ…

2 hours ago

ಮಾಂಸಾಹಾರ ಬಿಟ್ಟರೂ ಮಿತ್ರನ ಗೆಳೆತನ ಬಿಡಲಾಗಲಿಲ್ಲ

ಗಾಂಧಿ ಅಭಿಯಾನ ಅರಿವಿನ ಯಾನ ಗೊತ್ತಾಗಿದ್ದ ದಿನ ಬಂತು. ನನ್ನ ಆಗಿನ ಸ್ಥಿತಿಯನ್ನು ವರ್ಣಿಸುವುದು ಕಷ್ಟ. ಒಂದು ಕಡೆ ಸುಧಾರಣೆಯ ಮಾರ್ಗದ…

2 hours ago

ಡಿಕೆಶಿ ಸಂಪುಟದಲ್ಲಿ ಯಾರ‍್ಯಾರಿಗೆ ಒಲಿಯಲಿದೆ ಮಂತ್ರಿ ಸ್ಥಾನ?

ಕೆ.ಬಿ.ರಮೇಶನಾಯಕ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್‌ಗೆ ಮಂತ್ರಿ ಸ್ಥಾನ ಸಾಧ್ಯತೆ ಎಚ್‌ಸಿಎಂಗೆ ಪ್ರಬಲ ಖಾತೆ ಕೊಡಿಸಲು ಹೈಕಮಾಂಡ್ ಮಟ್ಟದಲ್ಲಿ…

2 hours ago

ಈ ಬಾರಿ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ಸಿಗುವುದೇ?

ಮಂಜು ಕೋಟೆ ಕೋಟೆ: ಮೈಸೂರು ಪ್ರಾಂತ್ಯದ ನಾಯಕ ಸಮುದಾಯದ ಏಕೈಕ ಶಾಸಕರಾಗಿರುವುದು ಪ್ಲಸ್ ಪಾಯಿಂಟ್ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…

2 hours ago

ಕಂದಾಯ ದಾಖಲೆಯಲ್ಲಿ ೪ ವಾರ್ಡ್‌ಗಳೇ ನಾಪತ್ತೆ!

ಎಸ್.ಎಸ್.ಭಟ್ ನಂಜನಗೂಡು ನಗರಸಭೆಯಲ್ಲಿ ೩೧ ವಾರ್ಡ್‌ಗಳು, ಕಂದಾಯ ಇಲಾಖೆಯಲ್ಲಿ ೨೭ ವಾರ್ಡ್‌ಗಳು ನಂಜನಗೂಡು: ಪುರಸಭೆ ನಗರಸಭೆಯಾಗಿ ಬಡ್ತಿ ಹೊಂದಿ ೨೭…

2 hours ago