65 ಕೋಟಿ ರೂ.ಯೋಜನೆಗಳಿಗೆ ಇಂಧನ ಸಚಿವರಿಂದ ಅನುಮೋದನೆ

ಮೈಸೂರು: ನಗರಕ್ಕೆ ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿಯಲ್ಲಿ ಮೇಳಾಪುರ ಹಾಗೂ ಕಬಿನಿಯಿಂದ ಹೆಚ್ಚು ನೀರು ತರಲು ಅವಶ್ಯವಿರುವ ವಿದ್ಯುತ್‌ ಲೇನ್‌ ಹಾಗೂ ಉಪವಿಭಾಗ ಘಟಕಗಳನ್ನು ಅಳವಡಿಸುವ 65 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಇಂಧನ ಸಚಿವ ಸುನೀಲ್‌ಕುಮಾರ್‌ ಅನುಮೋದನೆ ನೀಡಿದರು.

ಕಬಿನಿ ನೀರು ಸರಬರಾಜು ಯೋಜನೆಯ ಬಿದರಗೂಡು ಜಾಕ್‌ವೆಲ್‌, ಕೆಂಬಾಳು ಜಲಶುದ್ಧೀಕರಣ ಮತ್ತು ಪಿಂಜರಾಪೋಲು ಮಧ್ಯಂತರ ಯಂತ್ರಗಾರಗಳಿಗೆ ೬೬ ಕೆ.ವಿ.ವಿದ್ಯುತ್‌ ಲೈನ್‌ ಹಾಗೂ 3 ಸಂಖ್ಯೆಯ ಸಬ್‌ ಸ್ಟೇಷನ್‌ಗಳನ್ನು ನಿಮಿಸುವ 30 ಕೋಟಿ ರೂ.ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು.

ಜತೆಗೆ ಮೇಳಾಪುರ ನೀರು ಸರಬರಾಜು 66/11 ಕೆ.ವಿ. ವಿದ್ಯುತ್‌ ವಿತರಣಾ ಕೇಂದ್ರದಿಂದ 12.50 ಕಿ.ಮೀ. ದೂರವಿರುವ ರಮ್ಮನಹಳ್ಳಿ ಮತ್ತು ಮೇಳಾಪುರ ಯಂತ್ರಗಾರಗಳಿಗೆ 66.ಕೆ.ವಿ. ವಿದ್ಯುತ್‌ ಲೇನ್‌ ಮತ್ತು 2 ಸಂಖ್ಯೆಯ ಸಬ್‌ಸ್ಟೇಷನ್‌ಗಳನ್ನು ನಿರ್ಮಿಸುವ 35 ಕೋಟಿ ರೂ. ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗಿತ್ತು. ಈ ಕಾಮಗಾರಿಗಳಿಗೆ ಅನುಮೋದನೆ ನೀಡುವಂತೆ ಸಚಿವ ವಿ.ಸುನೀಲ್ ಕುಮಾರ್ ಅವರಲ್ಲಿ ಮನವಿ ಮಾಡಿಕೊಳ್ಳಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಸದರಿ ಕಾಮಗಾರಿಗಳಿಗೆ ಅನುಮೋದನೆ ನೀಡುವ ಮೂಲಕ ಇನ್ನು 03-04 ತಿಂಗಳಿನಲ್ಲಿ ಪ್ರಾರಂಭಿಸುವುದಾಗಿ ಭರವಸೆ ನೀಡಿದರು ಅವರಿಗೆ ಧನ್ಯವಾದಗಳು ಎಂದು ಅಭಿನಂದನೆ ಸಲ್ಲಿಸಿದರು.

× Chat with us