ಮೈಸೂರು: ಮನೆಯವ್ರು ಇದ್ದಾಗಲೇ ಮನೆಗೆ ನುಗ್ಗಿ ಕೈಚಳಕ ತೋರಿದ ಕಳ್ಳ, 508 ಗ್ರಾಂ ಚಿನ್ನಾಭರಣ ಕಳವು!

(ಸಾಂದರ್ಭಿಕ ಚಿತ್ರ)

ಮೈಸೂರು: ಮನೆಯವರು ಮನೆಯಲ್ಲಿ ಇರುವಾಗಲೇ ಒಳಗೆ ನುಗ್ಗಿರುವ ಖತರ್ನಾಕ್ ಖದೀಮರು ಸುಮಾರು 10.31 ಲಕ್ಷ ರೂ. ಮೌಲ್ಯದ 508 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಮಂಡಿ ಮೊಹಲ್ಲಾ ವ್ಯಾಪ್ತಿ ಕರೀಂ ಬ್ಲಾಕ್‌ನ ನಿವಾಸಿ ಸೈಯದ್ ಜಾಕೀರ್ ಎಂಬವರ ಮನೆಯಲ್ಲಿಯೇ ಕಳವು ಆಗಿರುವುದು. ಜೂ.3ರಂದು ಮನೆಯ ಮಖ್ಯಬಾಗಿಲ ಪಕ್ಕದಲ್ಲಿರುವ ಕಿಟಕಿಯಿಂದ ಕೈ ಹಾಕಿ ಒಳಗಿನಿಂದ ಹಾಕಿರುವ ಬಾಗಿಲ ಚಿಲಕವನ್ನು ತೆಗೆದು ಮನೆಯ ಒಳಗೆ ನುಗ್ಗಿರುವ ಖದೀಮರು. ಮನೆಯಲ್ಲಿ ನಾನು ಮತ್ತು ನನ್ನ ತಮ್ಮ ಮಲಗಿರುವ ಕೋಣೆಗಳ ಚಿಲಕವನ್ನು ಹಾಕಿ, ಮಗಳ ರೂಮಿನಲ್ಲಿ ಇದ್ದ ಬೀರುವಿನ ಲಾಕರ್ ಕೀ ತೆಗೆದುಕೊಂಡು ಚಿನ್ನಾಭರಣ ಕಳವು ಮಾಡಿದ್ದಾರೆ.

ಜೂ.4ರಂದು ಬೆಳಿಗ್ಗೆ ನನ್ನ ತಮ್ಮ ನನಗೆ ಫೋನ್ ಮಾಡಿ, ಯಾರೋ ನನ್ನ ರೂಮಿನ ಚಿಲಕವನ್ನು ಹಾಕಿದ್ದಾರೆ ಎಂದು ಹೇಳಿದ, ನಾನು ಚಿಲಕ ತೆಗೆಯಲು ಹೋದಾಗ ನನ್ನ ರೂಮಿನ ಚಿಲಕವನ್ನು ಹಾಕಲಾಗಿತ್ತು. ನಂತರ ನಮ್ಮ ಮಾವನ ಮನೆಯಲ್ಲಿ ಇದ್ದ ನನ್ನ ಮಗ ಸೈಯದ್ ಫರೀದ್ ಬಂದು ಚಿಲಕವನ್ನು ತೆಗೆದು ನಾನು ಮನೆಗೆ ಬಂದಾಗ ಬಾಗಿಲು ತೆರೆದಿತ್ತು ಎಂದು ಹೇಳಿದ ನಂತರ ಮಗಳ ರೂಮಿಗೆ ಹೋಗಿ ನೋಡಿದಾಗ ಕಳವು ಆಗಿರುವುದು ತಿಳಿದು ಬಂದಿದೆ ಎಂದು ಸೈಯದ್ ಜಾಕೀರ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us