5 ವರ್ಷದ ಮಗುವಿಗೆ ಮಠದ ಉತ್ತರಾಧಿಕಾರ ಪಟ್ಟ!

ಕಲಬುರಗಿ: 5 ವರ್ಷದ ಬಾಲಕನಿಗೆ ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದ ಸಂಸ್ಥಾನ ಹಿರೇಮಠದ ಉತ್ತರಾಧಿಕಾರಿ ಪಟ್ಟ ನೀಡಿದ ಅಪರೋಪದ ಅನ್ನಿವೇಶ ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದೆ.

ಮಂಗಳವಾರ ಐದು ವಷದ ನೀಲಕಂಠಯ್ಯ ಸ್ವಾಮಿ ಹಿರೇಮಠ ಎಂಬ ಬಾಲಕನನ್ನು ಉತ್ತರಾಧಿಕಾರಿಯಾಗಿ ಪಟ್ಟ ನೀಡಲಾಗಿದೆ.

ಮಠದ ಪೀಠಾಧಿಪತಿ ಶಿವಬಸವ ಶಿವಾಚಾರ್ಯ ಸ್ವಾಮೀಜಿ ಕಳೆದ ಸೋಮವಾರ ಹೃದಯಾಘಾತದಿಂದ ಲಿಂಗೈಕ್ಯರಾದರು. ಆದರೆ ಮಠದ ಉತ್ತರಾಧಿಕಾರಿ ಸ್ಥಾನ ಖಾಲಿ ಬಿಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪೂರ್ವಾಶ್ರಮದ ಸಹೋದರನ ಪುತ್ರನಿಗೆ ಮಠದ ಉತ್ತರಾಧಿಕಾರಿಪಟ್ಟ ನೀಡಲಾಗಿದೆ ಎಂದು ಸ್ವಾಮೀಜಿಗಳು ಹೇಳಿದ್ದಾರೆ.

× Chat with us