ಮಹದೇಶ್ವರಬೆಟ್ಟ ಲಾಡುಗೆ 5 ರೂ. ಹೆಚ್ಚಳ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಲಾಡು ಪ್ರಸಾದದ ಮಾರಾಟ ದರವನ್ನು 5 ರೂ. ಹೆಚ್ಚಿಸಲಾಗಿದೆ.

100 ಗ್ರಾಂ ತೂಕದ ಒಂದು ಲಾಡಿನ ಬೆಲೆ ಈ ಹಿಂದೆ 20ರೂ. ಇತ್ತು. ಈಗ 25 ರೂ ಮಾಡಲಾಗಿದ್ದು ಭಾನುವಾರದಿಂದಲೇ (ನ.8) ಹೊಸ ದರ ಜಾರಿಗೆ ಬಂದಿದೆ.

ಲಾಡು ತಯಾರಿಸಲು ಖರ್ಚಾಗುವ ಪರಿಮಾಣದಂತೆ ಮಾರಾಟ ದರ ಹೆಚ್ಚಿಸಲಾಗಿದೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

× Chat with us