BREAKING NEWS

Telangana Election Results 2023: ತೆಲಂಗಾಣದಲ್ಲಿ ಕಾಂಗ್ರೆಸ್‌ ಯಶಸ್ಸಿಗೆ ಕಾರಣವಾದ 5 ಅಂಶಗಳು

1. ಗ್ಯಾರಂಟಿ ಯೋಜನೆಗಳು: ಕಾಂಗ್ರೆಸ್‌ ಕರ್ನಾಟಕದ ಮಾದರಿಯಲ್ಲಿಯೇ ತೆಲಂಗಾಣದಲ್ಲಿಯೂ ಸಹ ಗ್ಯಾರಂಟಿ ಯೋಜನೆಗಳನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಈ ಯೋಜನೆಗಳೂ ಸಹ ಕಾಂಗ್ರೆಸ್‌ ಯಶಸ್ಸಿಗೆ ಕಾರಣವಾಗಿದೆ. ಮಹಾಲಕ್ಷ್ಮಿ ಯೋಜನೆ, ರೈತು ಭರೋಸಾ, ಇಂದಿರಮ್ಮ ಯೋಜನೆ, ಗೃಹಜ್ಯೋತಿ, ಯುವ ವಿಕಾಸಂ ಹಾಗು ಚೆಯುತ ಯೋಜನೆಗಳನ್ನು ಕಾಂಗ್ರೆಸ್‌ ಘೋಷಿಸಿತ್ತು.

* ಮಹಾಲಕ್ಷ್ಮಿ ಯೋಜನೆ: ಪ್ರತಿ ತಿಂಗಳು ಮಹಿಳೆಯರಿಗೆ 2500, ಮಹಿಳೆಯರಿಗೆ 500 ಸಬ್ಸಿಡಿ ದರದಲ್ಲಿ ಸಿಲಿಂಡರ್‌, ಆರ್‌ಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
* ರೈರು ಭರೋಸಾ ಯೋಜನೆ: ರಾಜ್ಯದ ರೈತರಿಗೆ ವಾರ್ಷಿಕ 15000, ಕೃಷಿ ಕೂಲಿಕಾರರಿಗೆ ವರ್ಷಕ್ಕೆ 12000, ಭತ್ತ ಬೆಳೆಯುವ ರೈತರಿಗೆ 500 ಬೋನಸ್.‌
* ಗೃಹಜ್ಯೋತಿ: ಎಲ್ಲಾ ಮನೆಗಳಿಗೆ 200 ಯೂನಿಟ್‌ ವಿದ್ಯುತ್‌ ಉಚಿತ, ಬಾಡಿಗೆ ಮನೆಗಳೂ ಸಹ ಈ ಯೋಜನೆಗೆ ಒಳಪಟ್ಟಿವೆ.
* ಇಂದಿರಮ್ಮ ಇಂಡ್ಲು: ಮನೆಯಿಲ್ಲದ ಅರ್ಹ ವ್ಯಕ್ತಿಗಳಿಗೆ ನಿವೇಶನ ಹಾಗೂ 5 ಲಕ್ಷ ರೂಪಾಯಿ ಹಣ, ತೆಲಂಗಾಣ ಚಳುವಳಿ ಹೋರಾಟಗಾರರಿಗೆ 250 ಚದರ ಗಜ ಜಾಗ ಉಚಿತ.
* ಯುವ ವಿಕಾಸಂ: ವಿದ್ಯಾರ್ಥಿಗಳಿಗೆ 5 ಲಕ್ಷ‍ ಮೌಲ್ಯದ ವಿದ್ಯಾ ಭರೋಸಾ ಕಾರ್ಡ್‌, ಪ್ರತಿ ಮಂಡಲದಲ್ಲಿ ತೆಲಂಗಾಣ ಇಂಟರ್‌ನ್ಯಾಷನಲ್‌ ಸ್ಕೂಲ್‌, 2 ಲಕ್ಷ ಉದ್ಯೋಗಾವಕಾಶ.
* ಚೇಯುತಾ: ಎಲ್ಲಾ ಅರ್ಹ ಪಿಂಚಣಿದಾರರಿಗೆ ಮಾಸಿಕ 4000 ರೂಪಾಯಿ ಪಿಂಚಣಿ, ಈ ಪಿಂಚಣಿದಾರರಿಗೆ ರಾಜೀವ್‌ ಆರೋಗ್ಯಶ್ರೀ ಯೋಜನೆಯಡಿಯಲ್ಲಿ 10 ಲಕ್ಷ ರೂಪಾಯಿಗಳ ವಿಮೆಯೊಂದಿಗಿನ ಪ್ರಯೋಜನ.

2. ಮುಸ್ಲಿಂ ಮತ: ಕಾಂಗ್ರೆಸ್‌ಗೆ ಮುಸ್ಲಿಂ ವೋಟ್‌ ಬ್ಯಾಂಕ್ ಲಭಿಸಿರುವುದು ಗೆಲುವಿಗೆ ಪ್ರಮಖ ಕಾರಣವಾಗಿದೆ. ಎಐಎಂಐಎಂ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದ ಮುಸ್ಲಿಂ ಮತದಾರರು ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.

3. ಕೆಸಿಆರ್‌ ಆಡಳಿತದ ವಿರುದ್ಧದ ಹೇಳಿಕೆಗಳು: ಅಧಿಕಾರದಲ್ಲಿದ್ದ ಬಿಎಸ್‌ಆರ್‌ ಪಕ್ಷದ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಸರ್ಕಾರ ವಿರುದ್ಧದ ಹೇಳಿಕೆಗಳು ಕಾಂಗ್ರೆಸ್‌ಗೆ ಅಭಿವೃದ್ಧಿ ಕಾಣದ ಗ್ರಾಮೀಣ ಹಾಗೂ ಅರೆ ನಗರ ಪ್ರದೇಶಗಳಲ್ಲಿನ ಮತಗಳು ಲಭಿಸುವಂತೆ ಮಾಡಿದವು.

4. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ: ಈ ವರ್ಷದ ಜುಲೈ ತಿಂಗಳಿನಲ್ಲಿ ತೆಲಂಗಾಣ ಬಿಜೆಪಿ ‍ಅಧ್ಯಕ್ಷರ ಬದಲಾವಣೆಯಾದದ್ದು ಕಾಂಗ್ರೆಸ್‌ಗೆ ವರದಾನವಾಯಿತು ಎಂದೇ ಹೇಳಬಹುದು. ಇದರಿಂದ ಬಿಜೆಪಿ ಪರ ಇದ್ದ ಮತಗಳು ಒಡೆಯಿತು ಹಾಗೂ ಬಿಜೆಪಿ ಹಿಡಿತ ಕಳೆದುಕೊಂಡದ್ದು ಸುಳ್ಳಲ್ಲ. ಜುಲೈ ತಿಂಗಳಿನಲ್ಲಿ ಬಂಡಿ ಸಂಜಯ್‌ ಕುಮಾರ್‌ ಬದಲಾಗಿ ಕಿಶನ್‌ ರೆಡ್ಡಿ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

5. ಬಿಆರ್‌ಎಸ್‌ ವಿರುದ್ಧ ಭ್ರಷ್ಟಚಾರದ ಆರೋಪ: ಜುಲೈನಿಂದ ನವೆಂಬರ್‌ ತಿಂಗಳವರೆಗೆ ಕಾಂಗ್ರೆಸ್‌ ಬಿಆರ್‌ಎಸ್‌ ಪಕ್ಷದ ವಿರುದ್ಧ ಮಾಡಿದ ನೂರಾರು ಭ್ರಷ್ಟಾಚಾರದ ಆರೋಪಗಳು ಕಾಂಗ್ರೆಸ್‌ಗೆ ಅನುಕೂಲ ತಂದೊಡ್ಡಿದೆ.

6. ಅನುಮೂಲ ರೇವಂತ್‌ ರೆಡ್ಡಿ ಸಾಲು ಸಾಲು ಪ್ರಚಾರ, ಯಾತ್ರೆ: ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷ ಅನುಮೂಲ ರೇವಂತ್‌ ರೆಡ್ಡಿ ಮಾಡಿದ ಅಬ್ಬರದ ಪ್ರಚಾರ ಹಾಗೂ ಕಾಲ್ನಡಿಗೆ ಯಾತ್ರೆಗಳು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

10 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

10 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

11 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

11 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

11 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

11 hours ago