ಒಬ್ಬ ಮನುಷ್ಯನಿಗೆ 5 ಕೆ.ಜಿ ಅಕ್ಕಿಯೇ ಸಾಕು: ಉಮೇಶ್ ಕತ್ತಿ

ಚಾಮರಾಜನಗರ: ಒಬ್ಬ ಮನುಷ್ಯನಿಗೆ 5 ಕೆಜಿ ಅಕ್ಕಿಯೇ ಸಾಕು. ಆದರೆ ರಾಜಕೀಯ ಉದ್ದೇಶದಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು 10 ಅಕ್ಕಿ ಕೊಡಬೇಕು ಎಂದು ಯಾಕೆ ಒತ್ತಾಯಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ‌ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಹೇಳಿದರು.

ಬಂಡೀಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಹಾರ ಭದ್ರತೆ ಕಾಯ್ದೆ ಅನುಸಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 5 ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ. ಅದನ್ನು ಯಥಾವತ್ತಾಗಿ ಮುಂದುವರೆಸಲಾಗುವುದು. ಅಕ್ಕಿ ಪ್ರಮಾಣವನ್ನು ಹೆಚ್ಚಳ ಅಥವಾ ಕಡಿತ ಮಾಡುವುದಿಲ್ಲ ಎಂದು ಅವರು ಹೇಳಿದರು.

ರಾಜ್ಯದಲ್ಲಿ 4.1ಕೋಟಿ ಪಡಿತರ ಚೀಟಿಯನ್ನು ಹೊಂದಿದ ಫಲಾನುಭವಿಗಳಿದ್ದಾರೆ. ಬಿಪಿಎಲ್ ಕಾರ್ಡುದಾರರದು ಶೇ 73ರಷ್ಟು , ಎಪಿಎಲ್ ಪಡಿತರದಾರರದು ಶೇ 62ರಷ್ಟು ಇಕೆವೈಸಿ ಆಗಿದೆ. ಅಂತ್ಯೋದಯ ಕಾರ್ಡ್ ದಾರರು ಪ್ರಗತ ಇಕೆವೈಸಿ ಪತ್ತೆಯಾಗಿರುವ ಅಕ್ರಮ ಪಡಿತರ ಚೀಟಿ ಹೊಂದಿದವರ ವಿರುದ್ಧ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಾನು ಪರ್ಮನೆಂಟ್ ಸಿಎಂ ಆಕಾಂಕ್ಷಿ: ನನಗೀಗ 60 ವರ್ಷ ವಯಸ್ಸು ಆದ್ದರಿಂದ ಇನ್ನು 15 ವರ್ಷವಿದ್ದು ನಾನು ಪರ್ಮನೆಂಟ್ ಸಿಎಂ ಆಕಾಂಕ್ಷಿ, ಮುಂದೆ ನೋಡೋಣ ಎಂದು ಸಿಎಂ ಆಗುವ ಬಯಕೆಯನ್ನು ಮತ್ತೊಮ್ಮೆ ಹೊರಹಾಕಿದರು.

× Chat with us