BREAKING NEWS

ದಸರಾ ಜಂಬೂ ಸವಾರಿಗೆ ಮೆರಗು ನೀಡಲಿವೆ 49 ಸ್ತಬ್ಧ ಚಿತ್ರಗಳು

ಮೈಸೂರು : ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಯಲ್ಲಿಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳ 31 ಸ್ತಬ್ಧ ಚಿತ್ರಗಳು ಹಾಗೂ ವಿವಿಧ ಇಲಾಖೆಗಳ 18 ಸ್ತಬ್ಧ ಚಿತ್ರಗಳು ಸೇರಿದಂತೆ ಒಟ್ಟು 49 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ.

ಬಾಗಲಕೋಟೆ ಜಿಲ್ಲೆಯಿಂದ ರಾಜವಂಶ ಬಾದಾಮಿ ಚಾಲುಕ್ಯರ ಹಾಗೂ ಶ್ರೀ ಬನಶಂಕರಿ ಸ್ತಬ್ಧ ಚಿತ್ರ, ಬಳ್ಳಾರಿ ಜಿಲ್ಲೆಯಿಂದ ಕುಮಾರಸ್ವಾಮಿ ದೇವಸ್ಥಾನ, ಪಾರ್ವತಿ ದೇವಿ ದೇವಾಲಯ, ಕಸೂತಿ ಹಾಗೂ ನಾರಿಹಳ್ಳ ಅಣೆಕಟ್ಟು ಸ್ತಬ್ಧ ಚಿತ್ರ, ಬೆಳಗಾವಿ ಜಿಲ್ಲೆಯಿಂದ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಸುವರ್ಣಸೌಧ, ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ ಹಾಗೂ ನೆಲಮಂಗಲ ಸ್ತಬ್ಧ ಚಿತ್ರ, ಬೆಂಗಳೂರು ನಗರದಿಂದ ಚಂದ್ರಯಾನ-3 ರ ಸ್ತಬ್ಧ ಚಿತ್ರ, ಬೀದರ್ ಜಿಲ್ಲೆಯಿಂದ ಕೃಷ್ಣಮೃಗ ಸಂರಕ್ಷಣಾ ಧಾಮದ ಅರಣ್ಯ ಪ್ರದೇಶದ ಸ್ತಬ್ಧ ಚಿತ್ರ, ಚಾಮರಾಜನಗರ ಜಿಲ್ಲೆಯಿಂದ ಜಾನಪದ, ಭಕ್ತಿಯ ಬಿಡು ಹುಲಿ, ಆನೆಗಳ ಸಂತೃಪ್ತಿಯ ಕಾಡು ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಏಕತೆಯಲ್ಲಿ ಅನೇಕತೆ ಎಂಬ ಸ್ತಬ್ಧ ಚಿತ್ರ, ಚಿಕ್ಕಮಗಳೂರು ಜಿಲ್ಲೆಯಿಂದ ಬೆಟ್ಟದಿಂದ ಬಟ್ಟಲಿಗೆ ಎಂಬ ಸ್ತಬ್ಧ ಚಿತ್ರ, ಚಿತ್ರದುರ್ಗ ಜಿಲ್ಲೆಯಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸ್ತಬ್ಧ ಚಿತ್ರ, ದಕ್ಷಿಣ ಕನ್ನಡ ಜಿಲ್ಲೆಯಿಂದ ಪಿಲಿಕುಳ ಗುತ್ತಿನ ಮನೆ, ವಿವೇಕಾನಂದ ತಾರಾಲಯ ಹಾಗೂ ಬೀಚ್ ಸರ್ಫಿಂಗ್ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.

ದಾವಣಗೆರೆ ಜಿಲ್ಲೆಯಿಂದ ಸಂತ ಸೇವಾವಾಲಾ ಹುಟ್ಟೂರು ಮತ್ತು ಬಂಜಾರ ಸಂಪ್ರದಾಯದ ಸ್ತಬ್ಧ ಚಿತ್ರ, ಧಾರವಾಡ ಜಿಲ್ಲೆಯಿಂದ ಧಾರವಾಡ ಪೇಡ ಧಾರವಾಡ ಎಮ್ಮೆ ನಮ್ಮ ಹೆಮ್ಮೆ ಎಂಬ ಸ್ತಬ್ಧ ಚಿತ್ರ, ಗದಗ ಜಿಲ್ಲೆಯಿಂದ ಸಬರಮತಿ ಆಶ್ರಮದ ಸ್ತಬ್ಧ ಚಿತ್ರ, ಹಾಸನ ಜಿಲ್ಲೆಯಿಂದ ಹಾಸನಾಂಬ ದೇವಾಲಯ, ಹಲ್ಮಿಡಿ ಶಾಸನ, ಈಶ್ವರ ದೇವಸ್ಥಾನ ಹಾಗೂ ಸಿದ್ದೇಶ್ವರ ದೇವಾಲಯದ ಸ್ತಬ್ಧಚಿತ್ರ ನಿರ್ಮಾಣವಾಗಿದೆ.

ಹಾವೇರಿ ಜಿಲ್ಲೆಯಿಂದ ಶಂಕದೊಂದಿಗೆ ಶ್ರೀ ಕನಕದಾಸರು ಹಾಗೂ ಗದ್ದಿಗೆ ಕಾಗಿನೆಲೆ ಸ್ತಬ್ಧ ಚಿತ್ರ, ಕಲಬುರಗಿ ಜಿಲ್ಲೆಯಿಂದ ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ ವನ್ಯಜೀವಿಧಾಮದ ಸ್ತಬ್ಧ ಚಿತ್ರ, ಕೊಡಗು ಜಿಲ್ಲೆಯಿಂದ ಕೊಡಗಿನ ಪ್ರೇಕ್ಷಣೀಯ ಸ್ಥಳಗಳು, ಕೋಲಾರ ಜಿಲ್ಲೆಯಿಂದ ನರೇಗಾ ಯೋಜನೆ ಅಡಿ ವೀರಗಲ್ಲುಗಳ ಉತ್ಖನನ ಹಾಗೂ ಮರುಸ್ಥಾಪನೆಯ ಸ್ತಬ್ಧ ಚಿತ್ರ, ಕೊಪ್ಪಳ ಜಿಲ್ಲೆಯಿಂದ ಕಿನ್ನಾಳ ಕಲೆ ಹಾಗೂ ಕೈಮಗ್ಗ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.

ಮಂಡ್ಯ ಜಿಲ್ಲೆಯಿಂದ ಸಾಂಪ್ರದಾಯಿಕ ಉದ್ಯಮ ಆಲೆಮನೆ ಕುರಿತ ಸ್ತಬ್ಧ ಚಿತ್ರ, ಮೈಸೂರು ಜಿಲ್ಲೆಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳ ಕುರಿತ ಸ್ತಬ್ಧ ಚಿತ್ರ, ರಾಯಚೂರು ಜಿಲ್ಲೆಯಿಂದ ನವರಂಗ ದರ್ವಾಜ ಹಾಗೂ ಆರ್.ಟಿಫಿಎಸ್ ಸ್ತಬ್ಧ ಚಿತ್ರ, ರಾಮನಗರ ಜಿಲ್ಲೆಯಿಂದ ಚನ್ನಪಟ್ಟಣದ ಗೊಂಬೆಗಳು ಹಾಗೂ ಇತ್ಯಾದಿ ಕಲೆಗಳ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.

ಶಿವಮೊಗ್ಗ ಜಿಲ್ಲೆಯಿಂದ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆ, ಕುಪ್ಪಳ್ಳಿ, ಗುಡವಿ ಪಕ್ಷಿಧಾಮ, ಸಿಂಹಧಾಮ, ಶಿವಪ್ಪ ನಾಯಕ ಪ್ರತಿಮೆ, ತುಮಕೂರು ಜಿಲ್ಲೆಯಿಂದ ಮೂಡಲಪಾಯ ಯಕ್ಷಗಾನ, ತವರು ಕುರಿತ ಸ್ತಬ್ಧ ಚಿತ್ರ, ಉಡುಪಿ ಜಿಲ್ಲೆಯಿಂದ ತ್ಯಾಜ್ಯ ಮುಕ್ತ ಮತ್ಸ್ಯ ಸ್ನೇಹಿ ಸಮುದ್ರ ಕುರಿತ ಸ್ತಬ್ಧ ಚಿತ್ರ, ಉತ್ತರ ಕನ್ನಡ ಜಿಲ್ಲೆಯಿಂದ ಶರಾವತಿ ಮಡಿಲಲ್ಲಿ ವನ್ಯಜೀವಿ ಹಾಗೂ ಸಿಂಹದ ಬಾಲದ ಸಿಂಗಳಿಕ ಸಂರಕ್ಷಣೆ ಕುರಿತ ಸ್ತಬ್ಧ ಚಿತ್ರ ನಿರ್ಮಾಣಗೊಂಡಿದೆ.

ವಿಜಯಪುರ ಜಿಲ್ಲೆಯಿಂದ ಜ್ಞಾನ ಯೋಗಾಶ್ರಮದ ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಕುರಿತ ಸ್ತಬ್ಧ ಚಿತ್ರ, ವಿಜಯನಗರ ಜಿಲ್ಲೆಯಿಂದ ವಿಠಲ ದೇವಸ್ಥಾನದ ಕುರಿತ ಸ್ತಬ್ಧ ಚಿತ್ರ, ಯಾದಗಿರಿ ಜಿಲ್ಲೆಯಿಂದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.

ವಿವಿಧ ಇಲಾಖೆಗಳಿಂದ 18 ಸ್ತಬ್ಧ ಚಿತ್ರಗಳು: ಸ್ತಬ್ಧ ಚಿತ್ರ ಉಪಸಮಿತಿಯಿಂದ ಅರಮನೆ ವಾದ್ಯಗೋಷ್ಠಿಯ ಸ್ತಬ್ಧ ಚಿತ್ರ, ಸ್ತಬ್ಧ ಚಿತ್ರ ಉಪಸಮಿತಿಯಿಂದ ಯುನೆಸ್ಕೋದಿಂದ ಗುರುತಿಸಲ್ಪಟ್ಟ ವಿಶ್ವ ಪಾರಂಪರಿಕ ಹೊಯ್ಸಳ ದೇವಸ್ಥಾನ, ಬೇಲೂರು ಹಳೇಬೀಡು, ಸೋಮನಾಥಪುರ ದೇವಾಲಯ ಕುರಿತ ಸ್ತಬ್ಧ ಚಿತ್ರ, ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಪೀಠಿಕೆ ಹಾಗೂ ಇಲಾಖೆಗಳ ಯೋಜನೆಗಳ ಕುರಿತ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ.

ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತ ಸ್ತಬ್ಧ ಚಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗೃಹಲಕ್ಷ್ಮಿ ಯೋಜನೆ ಹಾಗೂ ಇತರೆ ಯೋಜನೆಗಳ ಕುರಿತ ಸ್ತಬ್ಧ ಚಿತ್ರ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಶ್ರೀ ಮಹರ್ಷಿ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ. ಈ ಎಲ್ಲಾ ಸ್ತಬ್ಧ ಚಿತ್ರಗಳು ಜಂಬೂ ಸವಾರಿಯಲ್ಲಿ ಸಾಗಲಿದ್ದು ರಾಜ್ಯದ ವಿವಿಧ ಜಿಲ್ಲೆಗಳ ವಿಶೇಷತೆಯನ್ನು ಸಾರಲಿವೆ.

lokesh

Recent Posts

ಫೇಕ್‌ ಎನ್‌ಕೌಂಟರ್‌ ಹೇಳಿಕೆ: ಪ್ರಹ್ಲಾದ್‌ ಜೋಶಿ ವಿರುದ್ಧ ಬಿ.ಕೆ.ಹರಿಪ್ರಸಾದ್‌ ಕಿಡಿ

ಬೆಂಗಳೂರು: ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನೀಡಿರುವ ಹೇಳಿಕೆ ಅಮಿತ್‌…

16 mins ago

ಹೆಣ್ಣು ಕಾನೂನನ್ನು ಅರಿತರೆ ಅಷ್ಟೇ, ದೌರ್ಜನ್ಯ ಎದುರಿಸಲು ಸಾಧ್ಯ: ನಾಗಲಕ್ಷ್ಮೀ ಚೌಧರಿ

ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…

1 hour ago

ಮೈಸೂರು:  ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…

1 hour ago

ಡಿ.ಕೆ.ಸಹೋದರರಿಗೆ ಮದುವೆ ಕರೆಯೋಲೆ ನೀಡಿದ ಡಾಲಿ ಧನಂಜಯ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಡಿ.ಕೆ.ಸುರೇಶ್‌ ಅವರಿಗೆ ನೀಡಿ…

1 hour ago

ಶುಚಿತ್ವ, ನಿರ್ವಹಣೆಯಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡ ಜಯದೇವ :ಸಿ.ಎಂ ಪ್ರಶಂಸೆ

ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…

2 hours ago

ಪ್ರಹ್ಲಾದ್‌ ಜೋಶಿರವರ ಫೇಕ್‌ ಎನ್‌ಕೌಂಟರ್‌ ಹೇಳಿಕೆ: ಕೇಂದ್ರ ಸಚಿವ ಸ್ಥಾನಕ್ಕೆ ಶೋಭೆ ತರಲ್ಲ-ಎಚ್‌.ಕೆ.ಪಾಟೀಲ

ಬೆಳಗಾವಿ: ಎಂಎಲ್‌ಸಿ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಪೊಲೀಸರ ವಿರುದ್ಧ ಫೇಕ್‌ ಎನ್‌ಕೌಂಟರ್‌ ಹೇಳಿಕೆ…

2 hours ago